ಕರ್ನಾಟಕ

ತಿಮ್ಮೇಗೌಡನದೊಡ್ಡಿಯಲ್ಲಿ ಪ್ರೇಮ ಪ್ರಕರಣ: ದಲಿತ ಕಾಲೊನಿಯಲ್ಲಿ ದಾಂದಲೆ-– ಬಂಧನ

Pinterest LinkedIn Tumblr

pvec 06 rmg timmegowdan doddi-2

ರಾಮನಗರ: ದಲಿತ ಸಮುದಾಯದ ಯುವಕ ಮತ್ತು ಒಕ್ಕಲಿಗ ಸಮುದಾ ಯದ ಯುವತಿ ಪರಸ್ಪರ ಪ್ರೇಮಿಸಿ ಮನೆ ಬಿಟ್ಟು ಹೋದ ಕಾರಣಕ್ಕೆ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ಜನರು ದಲಿತರ ಕಾಲೊನಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಗುರುವಾರ ಮಧ್ಯರಾತ್ರಿ ಕಸಬಾ ಹೋಬಳಿಯ ತಿಮ್ಮೇಗೌಡ ನದೊಡ್ಡಿಯಲ್ಲಿ ನಡೆದಿದೆ.

ಹರೀಸಂದ್ರ ಗ್ರಾಮ ಪಂಚಾಯಿತಿಯ ತಿಮ್ಮೇಗೌಡನದೊಡ್ಡಿಯಲ್ಲಿನ ದಲಿತ ಸಮುದಾಯದ ನಂಜುಂಡಯ್ಯ (24) ಮತ್ತು ಬೂರಗಮರದ ದೊಡ್ಡಿಯ ಒಕ್ಕಲಿಗ ಸಮುದಾಯದ ಶಿಲ್ಪಶ್ರೀ (24) ಅವರು ಮೂರು ದಿನದಿಂದ ನಾಪತ್ತೆ ಯಾಗಿದ್ದಾರೆ. ಈ  ವಿಷಯ ಗೊತ್ತಾದ ಕೂಡಲೇ ಆಕ್ರೋಶಕ್ಕೆ ಒಳಗಾದ ಯುವ ತಿಯ ಸಂಬಂಧಿಕರು ತಿಮ್ಮೇಗೌಡ ನದೊಡ್ಡಿಯ ದಲಿತ ಕಾಲೊನಿ ಮೇಲೆ ದಾಳಿ ಮಾಡಿ ಅಲ್ಲಿನ ನಿವಾಸಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

‘ನೂರಾರು ಸಂಖ್ಯೆಯಲ್ಲಿದ್ದ ಒಕ್ಕಲಿಗ ಸಮುದಾಯದವರ ಗುಂಪು ಏಕಾಏಕಿ ದಲಿತರ ಕಾಲೋನಿಗೆ ದಾಳಿಯಿಟ್ಟು ಎದುರಿಗೆ ಸಿಕ್ಕವರ ಮೇಲೆ ಹಲ್ಲೆ ನಡೆಸಿತು. ಅಲ್ಲದೇ ಕೈಗೆ ಸಿಕ್ಕ ವಸ್ತುಗಳನ್ನು ನಾಶಪಡಿಸಿತು. ಈ ಗುಂಪಿನಲ್ಲಿದ್ದವರು ದಲಿತ ಸಂಘಟನೆಗಳ ನಾಮಫಲಕಗಳು, ಬೀದಿ ದೀಪಗಳು, ಕೊಳಾಯಿಗಳು, ವಿದ್ಯುತ್ ಮೀಟರುಗಳು, ಗುಡಿಸ ಲುಗಳು, ಮನೆಗಳ ಬಾಗಿಲುಗಳನ್ನು ಮುರಿದು ಹಾಕಿದರು’ ಎಂದು ಪ್ರತ್ಯಕ್ಷದ ರ್ಶಿಗಳು ದೂರಿದರು.

ಈ ಘಟನೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ, ಇದರಿಂದ ದಲಿತ ಕಾಲೊನಿಯ ಜನರಲ್ಲಿ ಆತಂಕ ಮಡುಗಟ್ಟಿದೆ.

ಈ ಸಂಬಂಧ ಕಾಲೊನಿಯ ನೊಂದ ಜನರು ರಾಮನಗರ ಗ್ರಾಮಾಂತರ ಠಾಣೆಯಲ್ಲಿ 45 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ 10 ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಡಿವೈಎಸ್ಪಿ ಲಕ್ಷ್ಮೀ ಗಣೇಶ್, ಸಿಪಿಐ ಅನಿಲ್‌ ಕುಮಾರ್‌ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ದಲಿತರ ಕಾಲೋನಿಯಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಒಂದು ತುಕ ಡಿಯನ್ನು ನಿಯೋಜಿಸ ಲಾಗಿದೆ.

Write A Comment