ಕರ್ನಾಟಕ

ವಿದೇಶಕ್ಕೆ ಸಾಗಿಸಲು ಅಡಗಿಸಿಟ್ಟಿದ್ದ ನಕ್ಷತ್ರ ಆಮೆಗಳ ಪತ್ತೆ

Pinterest LinkedIn Tumblr

Nakshatra-ame

ಬಾಗೇಪಲ್ಲಿ, ನ.15: ತಾಲೂಕಿನ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೆಮ್ಮಯ್ಯಗಾರಿಪಲ್ಲಿ ಗ್ರಾಮದ ಗೋಪಿಲಾಲ್ ಎಂಬುವವರ ಮನೆಯಲ್ಲಿ ಹಳೆ ಗೋಣಿ ಚೀಲದಲ್ಲಿ ಬಚ್ಚಿಟ್ಟದ್ದರು ಎನ್ನಲಾಗಿದ್ದ 117 ನಕ್ಷತ್ರ ಆಮೆಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದ್ದು, ಈ ನಕ್ಷತ್ರ ಆಮೆಗಳು ಪತ್ತೆಯಾಗಿವೆ. ಇವುಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಆರೋಪಿ ಶೋಧನೆಗೆ ಗಾಳ ಬೀಸಿದ್ದಾರೆ. ಆದರೆ ಆರೋಪಿ ಪರಾರಿಯಾಗಿದ್ದು, ಈ ನಕ್ಷತ್ರ ಆಮೆಗಳನ್ನು ವಿದೇಶಗಳಿಗೆ ಮಧ್ಯವರ್ತಿಗಳ ಮುಖಾಂತರ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ವಿದೇಶದಲ್ಲಿ ಈ ಆಮೆಗಳಿಗೆ ಭಾರಿ ಬೇಡಿಕೆಯಿದ್ದು, ಲಕ್ಷಾಂತರ ರೂ. ಬೆಲೆ ಇದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಆರ್.ರಾಮಚಂದ್ರ ಮಾತನಾಡಿ, ಚಂದನ ಈ ಭಾಗದಲ್ಲಿ ಆಗಾಗ ಕಳ್ಳ ಸಾಗಾಣಿಕೆಯಾಗುತ್ತಿದ್ದು, ಸಾಕಷ್ಟು ಪ್ರಕರಣಗಳನ್ನು ಭೇದಿಸುವಲ್ಲಿ ಅರಣ್ಯಾಧಿಕಾರಿಗಳು ಸಫಲರಾಗಿದ್ದಾರೆ.

ಅದರಂತೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ವಶಪಡಿಕೊಳ್ಳಲಾದ ನಕ್ಷತ್ರ ಆಮೆಗಳ ಬೆಲೆ ನಮಗೆ ತಿಳಿದು ಬಂದಿಲ್ಲ. ಇದರ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು.

Write A Comment