ಕರ್ನಾಟಕ

‘ಅಮ್ಮಾ’ ಎಂದೇ ಹೆಸರಾ ಗಿರುವ ಜಯಲಲಿತಾ ಬದುಕಿ­ನಲ್ಲಿ ಎಷ್ಟೊಂದು ಏಳುಬೀಳು…

Pinterest LinkedIn Tumblr

jayalakita-suppor

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಶನಿವಾರ ತೀರ್ಪು ಪ್ರಕಟವಾದ ನಂತರ ಅವರ ಬೆಂಬಲಿಗರು ದುಃಖತಪ್ತರಾಗಿದ್ದರು.

ಚೆನ್ನೈ (ಪಿಟಿಐ): ನಾಲ್ಕು ದಶಕ ಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು ತಮ್ಮದೇ ವಿಶಿಷ್ಟ ವರ್ಚಸ್ಸು ಹೊಂದಿರುವ, ‘ಅಮ್ಮಾ’ ಎಂದೇ ಹೆಸರಾ ಗಿರುವ ಜಯಲಲಿತಾ ಅವರು ಬದುಕಿ­ನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಸಂಕೋಚ ಸ್ವಭಾವದ ಕಿರಿಯ ಕಲಾವಿದೆಯಾಗಿ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿದ ಅವರು ನಂತರ ಎಐಎಡಿಎಂಕೆ ಸ್ಥಾಪಕ ಎಂ.ಜಿ.­ರಾಮಚಂದ್ರನ್‌ ಅವರ ಆಪ್ತರಾಗಿ ರಾಜಕೀಯದ ನಂಟು ಬೆಳೆಸಿ­ಕೊಂಡರು.

15ನೇ ವಯಸ್ಸಿನಲ್ಲಿ ಬೆಳ್ಳಿ ತೆರೆಯ ಬದುಕಿಗೆ ಕಾಲಿಟ್ಟ 66 ವರ್ಷದ ಜಯಲಲಿತಾ ಅವರ ಬದುಕಿನ ಏರಿಳಿತಗಳೇ ಒಂದು ಕುತೂಹಲಭರಿತ ಚಿತ್ರಕ್ಕೆ ವಸ್ತುವಾಗಬಲ್ಲವು. ವಿದ್ಯಾರ್ಥಿ ಯಾಗಿದ್ದಾಗ ಓದಿನಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಅವರು, ನಂತರ ತಮಿಳುನಾಡಿದ ಅತ್ಯಂತ ಜನಪ್ರಿಯ ನಟಿಯಾಗಿ ಹೆಸರಾದರು.

ಜಯಾ ಅವರು ಆ ಕಾಲದ ತಮಿಳು ಸೂಪರ್‌ಸ್ಟಾರ್‌ ಎಂ.ಜಿ.ರಾಮಚಂದ್ರನ್‌ ಅವರೊಂದಿಗೆ ಬೆಳ್ಳಿಪರದೆ ಮೇಲೆ ಭರ್ಜರಿ ಜೋಡಿಯಾಗಿ ಮಿಂಚಿದರು. ಅವರಿಬ್ಬರೂ ಒಟ್ಟಾಗಿ ನಟಿಸಿದ ಚಿತ್ರಗಳ ಸಂಖ್ಯೆ 28. ಎಂ.ಕರುಣಾನಿಧಿ ನೇತೃತ್ವದ ಡಿಎಂಕೆಯಿಂದ ಸಿಡಿದುಬಂದ ಎಂಜಿಆರ್‌ ಅವರು ಎಐಎಡಿಎಂಕೆ ಪಕ್ಷವನ್ನು ಸ್ಥಾಪಿಸಿ ಜಯಾ ಅವರನ್ನು 1983ರಲ್ಲಿ ಪಕ್ಷದ ಪ್ರಚಾರ ಕಾರ್ಯದರ್ಶಿಯನ್ನಾಗಿ ನೇಮಿಸಿದರು.

ಎಂಜಿಆರ್ ಅವರು 1987ರಲ್ಲಿ ನಿಧನರಾದ ಸಂದರ್ಭವು ಜಯಾ ಅವರ ರಾಜಕೀಯ ದಿಕ್ಕಿಗೆ ಮಹತ್ವದ ತಿರುವು ನೀಡಿತು. ಎಐಎಡಿಎಂಕೆ ಸ್ಥಾಪಕನ ಅಂತಿಮಯಾತ್ರೆಯ ವೇಳೆ ಎಂಜಿಆರ್‌ ಅವರ ಪತ್ನಿ ಜಾನಕಿ ಅವರ ಬೆಂಬಲಿಗರು ಜಯಾ ಅವರನ್ನು ಅವಹೇಳನ ಮಾಡಿದರು. ಇದಾದ ನಂತರದ ಬೆಳವಣಿಗೆಯಲ್ಲಿ ಎಐಎಡಿಎಂಕೆ ಹೋಳಾಯಿತು.

Write A Comment