ಕರ್ನಾಟಕ

ಚಿಣ್ಣರ ಪ್ರತಿಭೆಗೆ ವೇದಿಕೆ ನೀಡಲು ಶಿಕ್ಷಣ ಸಚಿವರ ಕರೆ

Pinterest LinkedIn Tumblr

DAAARA

ಮೈಸೂರು, ಸೆ.27: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವು ಪೋಷಕರು ಮತ್ತು ಶಿಕ್ಷಕರಿಂದ ಆಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕರೆ ನೀಡಿದ್ದಾರೆ.

ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳ ಲಾದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಇದೆ. ಆದರೆ, ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಸರಿಯಾದ ರೀತಿಯಲ್ಲಿ ಯಾರಿಂದಲೂ ಆಗುತ್ತಿಲ್ಲ. ಮಕ್ಕಳ ಪೋಷಕರು ಹಾಗೂ ಶಿಕ್ಷಕರ ಕೈಯಲ್ಲಿ ಪ್ರತಿಭೆಯನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಅವಕಾಶ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಅವರುಗಳು ಕಾರ್ಯಾನ್ಮುಖ ರಾಗಬೇಕು ಎಂದು ಕರೆ ನೀಡಿದರು.

ಮಕ್ಕಳ ದಸರಾ ಮಕ್ಕಳಲ್ಲಿರುವ ಪ್ರತಿಭೆ ಗಳನ್ನು ಅನಾವರಣಗೊಳ್ಳಲು ಉತ್ತಮ ವಾದ ವೇದಿಕೆ. ಈ ವೇದಿಕೆಯನ್ನು ಮಕ್ಕಳು ಸಂಪೂರ್ಣವಾಗಿ ಬಳಸಿಕೊಳ್ಳ ಬೇಕು ಎಂದು ಸಚಿವರು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್‌ಪ್ರಸಾದ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಕಾರ್ಯಕ್ರಮವನ್ನು ಒಳ್ಳೆಯ ರೀತಿಯಲ್ಲಿ ಆಯೋಜನೆಗೊಳಿ ಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬ ಸಂತೋಷವಾಗುತ್ತಿದೆ ಎಂದರು.

ಯಾವುದೇ ಪ್ರತಿಭೆಗೆ ಬೆಂಬಲದ ಆವಶ್ಯಕತೆ ಇದೆ. ಪ್ರತಿಭೆಗಳಿಗೆ ಬೇಲಿ ಯಿಲ್ಲ. ಮಕ್ಕಳಲ್ಲಿ ಅಸಾಮಾನ್ಯ ಪ್ರತಿಭೆ ಯಿದೆ. ಸರಿಯಾದ ಸಮಯದಲ್ಲಿ ಪ್ರತಿಭೆಯನ್ನು ಅಭಿವೃದ್ಧಿಗೊಳಿಸಿದರೆ ಒಳ್ಳೆಯೆ ಸಾಧೆನೆಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.

ಮೈಸೂರು ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಿಂದ 5, ಪದವಿ ಪೂರ್ವ ಕಾಲೇಜು ವಿಭಾಗದಿಂದ 2 ಹಾಗೂ ಪದವಿ ಕಾಲೇಜು ವಿಭಾಗ ದಿಂದ 3 ವಸ್ತು ಪ್ರರ್ದಶನ ಮಳಿಗೆಗಳನ್ನು ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಜಗನ್ಮೋಹನ ಅರ ಮನೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಚಲನಚಿತ್ರ ಬಾಲ ನಟ ಮಾಸ್ಟರ್ ಸ್ನೇಹಿತ್, ಕಿರುತೆರೆ ಬಾಲ ನಟಿ ಕುಮಾರಿ ಸಾನ್ಯ, ಜಿ.ಪಂ. ಉಪಾಧ್ಯಕ್ಷ ಮಾದಪ್ಪ, ಜಿ.ಪಂ. ಸಿಇಒ ಗೋಪಾಲ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷೆ ಶಾಂತ ಕುಮಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸಪ್ಪ ಮತ್ತಿತರರಿದ್ದರು.

Write A Comment