ಕರಾವಳಿ

ಹೊನ್ನಾವರದ ಪರೇಶ್ ಮೇಸ್ತ ಸಾವಿನಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ: ಡಿಕೆಶಿ ಆರೋಪ

Pinterest LinkedIn Tumblr

ಕುಂದಾಪುರ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿ‌ಎಸ್‌ನವರು ನಮಗೆ ಮೇಯರ್ ಸ್ಥಾನವನ್ನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಜೆಡಿ‌ಎಸ್‌ನವರು ನಾಮಪತ್ರ ಸಲ್ಲಿಸಿದ್ದಾರೆ. ನಾವು ನಮ್ಮ ಪಕ್ಷದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡಿದೆವು. ಆದರೆ ಒಳಗಡೆ ಅವರು ತೀರ್ಮಾನ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾನು ವರದಿ ತರಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಸುಳ್ಳು. ಯಾರು ಕೂಡಾ ಯಾರನ್ನೂ ಟಾರ್ಗೆಟ್ ಮಾಡಿಲ್ಲ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅವರು ಶನಿವಾರ ಮಧ್ಯಾಹ್ನ ಬೈಂದೂರಿನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ನಡೆದ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಮಾರಂಭದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಈ ವಿಚಾರದಲ್ಲಿ ಯಾರ ಹೆಸರಿಗೂ, ಗೌರವಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ. ಯಾರನ್ನು ಕಟ್ಟಿ ಹಾಕೋದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದರು. ತನ್ವೀರ್ ಸೇಠ್ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ನಾಯಕರ ಬಗ್ಗೆ ಯಾರು ಅವಹೇಳನಕಾರಿ ಹೇಳಿಕೆ ಕೊಡುವಂತಿಲ್ಲ. ಈ ಬಗ್ಗೆ ಪಕ್ಷದ ನಿಲುವು ಸ್ಪಷ್ಟವಾಗಿದೆ. ತನ್ವೀರ್ ಸೇಠ್ ಏನು ಮಾತನಾಡಿದರೋ ನನಗೆ ಗೊತ್ತಿಲ್ಲ. ತನ್ವೀರ್ ಸೇಠ್‌ಗೆ ಸೋಮವಾರ ನನ್ನನ್ನು ಭೇಟಿಯಾಗಲು ತಿಳಿಸಿದ್ದೇನೆ ಎಂದರು.

ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣದ ಸಿಬಿ‌ಐ ತನಿಖೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಪರೇಶ್ ಮೇಸ್ತ ಸಾವಿಗೆ ನ್ಯಾಯ ದೊರಕಿಸಿಕೊಡಲು ನಾವು ಸಿಬಿ‌ಐ ತನಿಖೆಗೆ ಕೊಟ್ಟಿದ್ದೆವು. ಈಗ ಬಿಜೆಪಿ ಸರ್ಕಾರ ಇದೆ. ಬಿಜೆಪಿಯವರಿಗೆ ತನಿಖೆ ಮಾಡಲು ಏನು ಕಷ್ಟ. ಪರೇಶ್ ಮೇಸ್ತ ಸಾವಿನ ಸತ್ಯಾಸತ್ಯತೆ ಏನು ಎಂದು ಜನರಿಗೆ ಗೊತ್ತಾಗಬೇಕು. ಸಿಬಿ‌ಐ ತನಿಖೆ ಹಳ್ಳ ಹಿಡಿದಿರುವುದನ್ನು ಗಮನಿಸಿದರೆ ಬಿಜೆಪಿಯವರೇ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನೋದು ಸ್ಪಷ್ಟ. ಉಳಿದದ್ದೆಲ್ಲವನ್ನು ತುರ್ತಾಗಿ ಮಾಡುವ ಬಿಜೆಪಿ ಈ ಪ್ರಕರಣವನ್ನು ಯಾಕೆ ಮುಚ್ಚಿ ಹಾಕುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಬಿಜೆಪಿ ನನ್ನ ಮೇಲೆ ಸಿಬಿ‌ಐ ತನಿಖೆ ತುರ್ತಾಗಿ ಮಾಡಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ನನಗೂ ತೊಂದರೆ ಕೊಟ್ಟಿದೆ. ಆದರೆ ಮೇಸ್ತ ಪ್ರಕರಣದಲ್ಲಿ ಯಾಕೆ ಈ ವಿಳಂಬ ಧೋರಣೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಪಂಚಮ ಸಾಲಿ ಹೋರಾಟ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಮತ್ತು ಮಠದ ವಿಚಾರವನ್ನು ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಜೊತೆ ಮಾತನಾಡಿ ಪ್ರತಿಕ್ರಿಯಿಸುವೆ ಎಂದರು.

Comments are closed.