ಕರಾವಳಿ

ದಡ್ಡಲ್‌ಕಾಡ್ ಪ್ರಕರಣ: ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಮಾಜಿ ಮೇಯರ್ ಶಶಿಧರ ಹೆಗ್ಡೆ ಆಗ್ರಹ- ಪ್ರತಿಭಟನೆಯ ಎಚ್ಚರಿಕೆ

Pinterest LinkedIn Tumblr

ಮಂಗಳೂರು: ನಗರದ ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ನ ಶ್ರೀ ಕೋಟೆದ ಬಬ್ಬು ಸ್ವಾಮಿ ದೈವಸ್ಥಾನದ ಮುಂದಿರುವ ಕಾಣಿಕೆ ಡಬ್ಬಿ ಹಣವನ್ನು ಕದ್ದು ಅಪವಿತ್ರಗೊಳಿಸಿ ಸಮಾಜದ ಶಾಂತಿ ಯನ್ನು ಭಂಗಗೊಳಿಸುವ ಉದ್ದೇಶದಿಂದ ಕರಪತ್ರವನ್ನು ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಮಾಜಿ ಮೇಯರ್ ಸ್ಥಳೀಯ ಕಾರ್ಪೊರೇಟರ್ ಎಂ ಶಶಿಧರ ಹೆಗ್ಡೆ ಒತ್ತಾಯಿಸಿದ್ದಾರೆ.

ಇಂತಹ 4 ಪ್ರಕರಣಗಳು ನಗರದಲ್ಲಿ ನಡೆದಿದ್ದರೂ ಈ ತನಕ ದುಷ್ಕರ್ಮಿಗಳನ್ನು ಬಂದಿಸಿಲ್ಲ. ಸರಕಾರ ಈ ಕೂಡಲೇ ಎಚ್ಚೆತ್ತು ಕ್ಷೇತ್ರದ ಪಾವಿತ್ರ್ಯತೆ ಮತ್ತು ಭಕ್ತರ ಭಾವನೆಗಳನ್ನು ಕುಂದು ಬಾರದ ಹಾಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸರಕಾರ ಈ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ವಿವಿಧ ದೈವಸ್ಥಾನಗಳ ಭಕ್ತರನ್ನು ಒಟ್ಟು ಸೇರಿಸಿ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಂ ಶಶಿಧರ ಹೆಗ್ಡೆ ಎಚ್ಚರಿಸಿದ್ದಾರೆ.

Comments are closed.