ಕರಾವಳಿ

ಶ್ರೀನಿವಾಸ ಮಂಕುಡೆ- ಸಾಂತೂರು ಜಗನ್ನಾಥ ಶೆಟ್ಟಿ‌ ಅವರಿಗೆ ‘ಕಲ್ಕೂರ ಸಾಂಸ್ಕೃತಿಕ ಸಿರಿ – ಯಕ್ಷಸಿರಿ ಪ್ರಶಸ್ತಿ’ ಪ್ರದಾನ

Pinterest LinkedIn Tumblr

ಮಂಗಳೂರು : ಮಹಾರಾಷ್ಟ್ರದ ಸಾಂಗ್ಲಿ-ಮೀರಾಜ್‌ತುಳುಭವನ ನಿರ್ಮಾಣದ ರೂವಾರಿಗಳಲ್ಲೋರ್ವರಾಗಿ ತುಳು- ಕನ್ನಡ ಸಂಸ್ಕೃತಿ ಯನ್ನು ಹೊರರಾಜ್ಯಗಳಲ್ಲಿ ಪಸರಿಸಿದ ಹಿರಿಯ ಸಂಘಟಕ ಶ್ರೀನಿವಾಸ ಮಂಕುಡೆಯವರಿಗೆ ‘ಕಲ್ಕೂರ ಸಾಂಸ್ಕೃತಿಕ ಸಿರಿ’ ಹಾಗೂ ಹಿರಿಯ ಹವ್ಯಾಸಿ ಯಕ್ಷಗಾನಕಲಾವಿದ‌ಉಡುಪಿ ತಾಲೂಕಿನ ಸಾಂತೂರು ಜಗನ್ನಾಥ ಶೆಟ್ಟಿಯವರಿಗೆ’ ಕಲ್ಕೂರಯಕ್ಷ ಸಿರಿ’ ಪ್ರಶಸ್ತಿ ನೀಡುವ ಮೂಲಕ ಅಭಿನಂದಿಸಲಾಯಿತು.

ಇತ್ತೀಚೆಗೆ ನಗರದ ಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ‌ ಏರ್ಪಡಿಸಲಾಗಿದ್ದ ವಿಷುಕಣಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರ ಕಲ್ಕೂರ ಸನ್ಮಾನಿತರನ್ನು ಅಭಿನಂದಿಸಿದರು.

ಕರ್ಣಾಟಕ ಬ್ಯಾಂಕಿನ‌ಅಧ್ಯಕ್ಷರಾದ ಶ್ರೀ ಜಯರಾಮ ಭಟ್, ಶಾರದಾ ಸಮೂಹ ಸಂಸ್ಥೆಯ‌ಅಧ್ಯಕ್ಷರಾದ ಶ್ರೀ ಎಂ. ಬಿ. ಪುರಾಣಿಕ ನಿರ್ದೇಶಕರಾದ ಶ್ರೀ. ಕೆ. ಎಸ್, ಕಲ್ಲೂರಾಯರ, ಎಚ್, ಸೀತಾರಾಮ ಆಚಾರ್ಯ, ಶ್ರೀಮತಿ ವಿನೋದಕಲ್ಕುರ ಶ್ರೀ ರತ್ನಾಕರಜೈನ್, ವಿಜಯಲಕ್ಷ್ಮಿ ಶೆಟ್ಟಿ ಬಿ. ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ನವನೀತ ಶೆಟ್ಟಿಯವರು ಸಭಾಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಜನಾರ್ದನ ಹಂದೆಯವರು ವಂದಿಸಿದರು. ಶ್ರೀ ಸುಧಾಕರರಾವ್ ಪೇಜಾವರ ಸನ್ಮಾನ ಪತ್ರ ವಾಚಿಸಿದರು.

Comments are closed.