ಕರಾವಳಿ

ಪಾದಗಳಲ್ಲಿನ ಬದಲಾವಣೆಗಳು ನಮಗೆ ಮುಂದೆ ಬರುವಂತಹ ಕಾಯಿಲೆಗಳ ಮುನ್ಸೂಚನೆಯೇ?

Pinterest LinkedIn Tumblr

ನಮ್ಮ ಪಾದದ ಕೆಲವು ಲಕ್ಷಣಗಳು ನಮ್ಮ ಆರೋಗ್ಯವನ್ನು ಹೇಳುತ್ತವೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು ಏಕೆಂದರೆ ಇದು ಖಂಡಿತ ಸತ್ಯದ ವಿಷಯ. ನಮ್ಮ ಪಾದದ ಮೇಲೆ ಕೆಲವು ಬದಲಾವಣೆಗಳು ನಾವು ಯಾವ ರೋಗಕ್ಕೆ ತುತ್ತಾಗುತ್ತಿವೆ ಅಥವಾ ಯಾವ ರೋಗವೂ ನಮಗೆ ಎದುರಾಗುತ್ತದೆ ಎಂಬುದನ್ನು ಹೇಳುತ್ತದೆ.

ಹಾಗಾದರೆ ನಮ್ಮ ಪಾದದ ಮೇಲಿನ ಯಾವ ಲಕ್ಷಣಗಳು ನಾವು ಬಳಸುತ್ತಿರುವ ಕಾಯಿಲೆಯನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

*ಪಾದಗಳು ಹೊಡೆಯುವುದು ಬಿರುಕು ಬಿಳುವುದು ಮತ್ತು ಒಣಗುವುದು

ಸಾಮಾನ್ಯವಾಗಿ ಚಳಿಗಾಲದಲ್ಲಿ ಎಲ್ಲರ ಪಾದಗಳು ಬಿರುಕು ಬಿಡುತ್ತವೆ. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಆದರೆ ಬೇರೆ ಕಾಲದಲ್ಲಿ ಪಾದಗಳು ಹೊಡೆಯುತ್ತಿದ್ದರೆ, ಸೂಕ್ತವಾದ ಕ್ರೀಮ್ ಗಳನ್ನು ಹಚ್ಚುತ್ತಿದ್ದರು, ಔಷಧಿಗಳನ್ನು ಬಳಸುತ್ತಿದ್ದರು ಸಹ ಅದು ಗುಣವಾಗುತಿಲ್ಲ ಎಂದರೆ ಅದು ಥೈರಾಡ್ ಸಮಸ್ಯೆ ಆಗಿರಬಹುದು. ಥೈರಾಯ್ಡ್ ಸಮಸ್ಯೆ ಇರುವವರಿಗೆ ಪಾದಗಳು ಬಿರುಕು ಬಿಡುವುದು, ಉರಿಯುವುದು ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

*ಪಾದಗಳ ಮೇಲೆ ಬೆಳೆಯುವ ಕೂದಲು ಕಡಿಮೆ ಯಾಗುವುದು

ಪಾದಗಳ ಮೇಲೆ ಬೆಳೆಯುತ್ತಿದ್ದ ಕೂದಲು ಇದ್ದಕ್ಕಿದ್ದ ಹಾಗೆ ಕಡಿಮೆಯಾಗುವುದು ಅಥವಾ ಪಾದಗಳು ನೀಲಿ ಗಟ್ಟುವುದು ಆಗುತ್ತಿದ್ದರೆ ಅದು ಬಾಹ್ಯ ಅಪಧಮನಿಗೆ ಸಂಬಂಧಿಸಿದ ಕಾಯಿಲೆ ಆಗಿರುತ್ತದೆ. ಈ ಕಾಯಿಲೆಯಿಂದಾಗಿ ಪಾದಗಳಿಗೆ ರಕ್ತ ಸರಬರಾಜು ಸರಿಯಾಗಿ ಆಗುವುದಿಲ್ಲ ಇದರಿಂದಾಗಿ ನೀಡಿದಂತೆ ಆಗುತ್ತದೆ. ಇದು ನಿರ್ಲಕ್ಷಿಸಬಾರದ ಕಾಯಿಲೆ ಯಾಗಿದ್ದು ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಪಾದಗಳು ಮತ್ತು ಪಾದದ ಬೆರಳುಗಳನ್ನು ನೋವು ಉಂಟಾಗುವುದು
ಪಾದಗಳಲ್ಲಿ ಅಥವಾ ಪಾದದ ಬೆರಳುಗಳನ್ನು ವಿಪರೀತ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಸಂಧಿವಾತದ ಕಾಯಿಲೆ ಯಾಗಿರಬಹುದು. ಆಹಾರದಲ್ಲಿ ಯೂರಿಕ್ ಆಸಿಡ್ ಜಾಸ್ತಿ ಆದಾಗ ಈ ಕಾಯಿಲೆಯು ಕಾಣಿಸಿಕೊಳ್ಳುತ್ತದೆ.

*ಪಾದಗಳ ಮೇಲೆ ಹುಣ್ಣಾಗುವುದು :ಪಾದಗಳ ಮೇಲೆ ಹುಣ್ಣಾಗಿ ಅದು ಜಾಸ್ತಿ ಕಾಲದ ನಂತರವೂ ವಾಸಿ ಆಗದೆ ಇರುವುದು ಡಯಾಬಿಟಿಸ್ ನ ಲಕ್ಷಣವಾಗಿದೆ. ಡಯಾಬಿಟಿಸ್ ರೋಗಿಗಳಲ್ಲಿ ಸರಾಗವಾದ ರಕ್ತ ಪರಿಚಲನೆಯು ಸಾಧ್ಯವಾಗದೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

*ಕೈ ಮತ್ತು ಕಾಲು ಬೆರಳುಗಳು ಕೊಡು ಕೊಳ್ಳುವಿಕೆ : ನಿಮ್ಮ ಕಾಲಿನ ಬೆರಳುಗಳು ಒಂದಕ್ಕೊಂದು ಅಂಟಿಕೊಂಡಂತೆ ಅಥವಾ ಕೈಯಿನ ಬೆರಳುಗಳು ಮಾಡಿಕೊಂಡಂತೆ ಹಾಗಿದ್ದರೆ ಅದು ಶ್ವಾಸಕೋಶದ ಕ್ಯಾನ್ಸರ್ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆ ಅಥವಾ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಆಗಿರುತ್ತದೆ. ಚಿಕ್ಕ ಅಪಧಮನಿಗಳಲ್ಲಿ ಹೆಚ್ಚಿನ ರಕ್ತ ಸಂಚಾರದಿಂದಾಗಿ ಈ ರೀತಿ ಉಂಟಾಗಿರುತ್ತದೆ.

ಈ ತರಹದ ಯಾವುದೇ ಲಕ್ಷಣಗಳು ನಿಮ್ಮ ಪಾದಗಳಲ್ಲಿ ಕಂಡು ಬಂದಿದ್ದರೆ ಅದನ್ನು ನಿರ್ಲಕ್ಷಿಸಿದ ಕೂಡಲೆ ತಜ್ಞ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು

Comments are closed.