ಕರಾವಳಿ

ನಾಳೆಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ

Pinterest LinkedIn Tumblr

ಮಂಗಳೂರು,ಫೆಬ್ರವರಿ.03: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಫೆ.4ರಿಂದ 9ರವರೆಗೆ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಯಾರು ಪ್ರಯೋಜನ ಪಡೆಯಬಹುದು?

* ಸ್ತನದಲ್ಲಿ ಗಡ್ಡೆಗಳು (breast lump) ಅಥವಾ ಹೊಟ್ಟೆಯ ಭಾಗದಲ್ಲಿ ಗಡ್ಡೆಗಳು (tumour).

* ಮುಟ್ಟು ನಿಂತ ನಂತರ ಅವಧಿಯಲ್ಲಿ ರಕ್ತಸ್ರಾವ ಮತ್ತು ಬಿಳಿ ಸೆರಗು ಹೋಗುವಿಕೆ.

* ಪದೇ ಪದೇ ಕೆಮ್ಮು, ದ್ವನಿಯಲ್ಲಿ ತೊಂದರೆ, ಆಹಾರ ನುಂಗುವಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ.

* ಕೆನ್ನೆ/ನಾಲಗೆಯಲ್ಲಿ ಬಾವು ಅಥವಾ ಕೊರಳಿನಲ್ಲಿ ಬಾವು.

* ಅಜೀರ್ಣ, ಹಸಿವು ಇಲ್ಲದಿರುವಿಕೆ, ದೇಹದ ತೂಕದಲ್ಲಿ ಇಳಿಕೆ

* ಮಲದಲ್ಲಿ ರಕ್ತ/ಗುದದ್ವಾರದಲ್ಲಿ ಊತ

* ಗಂಭೀರ ಅನೀಮಿಯಾ, ಆಗಾಗ ಸೋಂಕು, ಎಲುಬುಗಳಲ್ಲಿ ನೋವು, ರಕ್ತಸ್ರಾವ ಆಗುವಿಕೆ.
ಶಿಬಿರಾರ್ಥಿಗಳಿಗೆ ಒದಗಿಸಲಾಗುವ ಸವಲತ್ತುಗಳು:

* ನೋಂದಣೆ, ಸಲಹೆ, ತಲೆ ಮತ್ತು ಕೊರಳು ಹಾಗು ಬಾಯಿಯ (mouth) ಪರೀಕ್ಷೆ ಉಚಿತ.
* ಹೊರ ರೋಗಿ ಪರೀಕ್ಷಾ ಶುಲ್ಕದಲ್ಲಿ ಶೇ. 25 ರಿಯಾಯತಿ.

* ಮುಂದಿನ ಚಿಕಿತ್ಸೆಯಲ್ಲಿಯೂ ರಿಯಾಯತಿ ದರ. ಇನ್ನಷ್ಟು ವಿವರಗಳಿಗೆ/ನೋಂದಣಿಗೆ ದಯವಿಟ್ಟು 0824 6613635 ಅಥವಾ ಇ ಮೇಲ್: ajccentre@gmail.com (ಬೆಳಿಗ್ಗೆ 9ರಿಂದ ಸಂಜೆ 5) ಸಂಪರ್ಕಿಸಬಹುದು.

ಕ್ಯಾನ್ಸರ್ ಈಗ ಸಾವು ತರುವ ಖಾಯಿಲೆಯಾಗಿ ಉಳಿದಿಲ್ಲ. ಅದನ್ನು ಮುಂಚಿತವಾಗಿ ಪತ್ತೆ ಹಚ್ಚಿದರೆ ಅದನ್ನು ಗುಣಪಡಿಸಬಹುದು. ಎ.ಜೆ. ಆಸ್ಪತ್ರೆಯು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಸಮಗ್ರ ಕ್ಯಾನ್ಸರ್ ಶೂಶ್ರೂಷಾ ಕೇಂದ್ರವನ್ನು ಹೊಂದಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಅಂಗಾಂಗ ಕಸಿ ತಜ್ಞ ಡಾ. ಪ್ರಶಾಂತ ಮಾರ್ಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.