ಕರಾವಳಿ

ಜಾರ್ಜ್ ನುಡಿನಮನ : ಬಿಜೈ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್‌ ಹೆಸರು ನಿರಾಕರಿಸಿದ ಸಹೋದರ ಮೈಕಲ್ ಫೆರ್ನಾಂಡೀಸ್

Pinterest LinkedIn Tumblr

ಮಂಗಳೂರು, ಫೆಬ್ರವರಿ.03: ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್‌ರವರಿಗೆ ನಾಗರಿಕರ ವತಿಯಿಂದ ಆಯೋಜಿಸಲಾದ ಶ್ರದ್ಧಾಂಜಲಿ ಸಭೆ ಶನಿವಾರ ನಗರದ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.

ರಾಜಕೀಯ ರಂಗದಲ್ಲಿ ಜಾರ್ಜ್ ಫೆರ್ನಾಂಡಿಸ್ ನಕ್ಷತ್ರದಂತೆ ಎತ್ತರಕ್ಕೇರಿ ಬೆಳಕಾದವರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ನುಡಿನಮನ ಸಲ್ಲಿಸಿದರು.

ದೇಶದ ಜನ,ಶಾಂತಿ,ನೆಮ್ಮದಿಯಿಂದ ಬದುಕುವುದೇ ಆ ದೇಶದ ಅಭಿವೃದ್ಧಿ ಎಂದು ಪ್ರತಿಪಾದಿಸಿದ ಜಾರ್ಜ್ ಫೆರ್ನಾಂಡಿಸ್‌ರ ಕುಟುಂಬಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನಿಕಟಪೂರ್ವ ಮಂಗಳೂರು ಬಿಷಪ್‌ ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ನುಡಿನಮನ ಸಲ್ಲಿಸಿದರು.

ನುಡಿನಮನ ಸಲ್ಲಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅವರು, ಜಾರ್ಜ್ ಫೆರ್ನಾಂಡೀಸ್ ಸರಳ ವ್ಯಕ್ತಿತ್ವದ ರಾಜಕಾರಣ:-ಜಾಜ್ ಫೆರ್ನಾಂಡಿಸ್ ಸಚಿವರಾಗಿ, ಸಂಸದರಾಗಿ ಇದ್ದರು ಯಾವೂದೇ ಆಡಂಬರವಿಲ್ಲದೆ ಬದುಕುತ್ತಿದ್ದ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಅವರ ಮನೆಗೆ ಯಾವೂದೇ ವ್ಯಕ್ತಿ ಭದ್ರತೆಗಳ ಸಮಸ್ಯೆಯಿಲ್ಲದೆ ಹೋಗಿ ಬರುತ್ತಿದ್ದರು.ಅವರು ಅಂಗರಕ್ಷಕರಿಲ್ಲದೆ ತಿರುಗುತ್ತಿದ್ದರು ಅವರ ಪ್ರಮಾಣಿಕತನ, ಸರಳತೆ ಪ್ರಬುದ್ಧತೆ ನಮಗೆ ಮಾದರಿಯಾಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಜಾರ್ಜ್ ಫೆರ್ನಾಂಡಿಸ್‌ರವರ ಸಹೋದರ ಮೈಕಲ್ ಫೆರ್ನಾಂಡೀಸ್ ಅವರು, ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್‌ರವರ ನೆನಪಿಗಾಗಿ ಅವರ ಹೆಸರನ್ನಿಡುವುದಾದರೆ ಕೊಂಕಣ ರೈಲ್ವೇಗೆ ಸಂಬಂಧಿಸಿದಂತೆ ಅವರ ಹೆಸರನ್ನಿಟ್ಟರೆ ಅರ್ಥಪೂರ್ಣವಾದೀತು. ಅವರು ವಿಶ್ವಕ್ಕೆ ಕೊಡುಗೆ ನೀಡಿದ ವ್ಯಕ್ತಿ ಅದು ಅವರ ಕೊಡುಗೆ ಮಂಗಳೂರು ನಗರದ ಬಿಜೈ ನ್ಯೂ ರೋಡ್‌ಗೆ ಅವರ ಹೆಸರು ಬೇಡ ಎಂದು ತಾನು ಮನವಿ ಮಾಡುವುದಾಗಿ ಹೇಳಿದರು.

ಜಾರ್ಜ್ ತನ್ನ ಆತ್ಮ ಕಥೆಯನ್ನು ಬರೆದಿಲ್ಲ ಆದರೆ ಅವರ ಆತ್ಮ ಕಥೆಯನ್ನು ಜಾಮಿಯಾ ಮಿಲಿಯಾ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಸಿದ್ದ ಪಡಿಸುತ್ತಿದ್ದಾರೆ ಅದರಲ್ಲಿ ಅವರ ಬಗೆಗಿನ ನೈಜ ವಿಚಾರ ಜನರ ಮುಂದೆ ಬರಲಿದೆ ಎಂದು ಮೈಕಲ್ ಪೆರ್ನಾಂಡಿಸ್ ನುಡಿನಮನ ಸಲ್ಲಿಸುತ್ತಾ ತಿಳಿಸಿದ್ದಾರೆ.

ಜಾರ್ಜ್ ಫೆರ್ನಾಂಡೀಸ್ ರಾಜಕೀಯ ರಂಗದಲ್ಲಿ ಅಪರೂಪದ ಆದರ್ಶವ್ಯಕ್ತಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ ತನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಭಾಸ್ಕರ ಕೆ, ಫೆಲಿಕ್ಸ್ ಡಿ ಸೋಜ ನುಡಿನಮನ ಸಲ್ಲಿಸಿದರು.

Comments are closed.