ಕರಾವಳಿ

ನೆರೆತ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸರಳ ಟಿಪ್ಸ್..

Pinterest LinkedIn Tumblr

ಕೂದಲು ನೆರೆಯಲು ಅನೇಕ ಕಾರಣಗಳಿವೆ. ಮುಖ್ಯವಾಗಿ ವಂಶ ಪಾರಂಪರ್ಯವಾಗಿಯೂ ನೆರೆಯುವ ಅವಕಾಶಗಳಿವೆ. ಆಹಾರ ಲೋಪ, ಒತ್ತಡ, ಕಲುಷಿತ ವಾತಾರವರಣ, ಥೈರಾಯ್ಡ್ ಸಮಸ್ಯೆ, ಮಾನಸಿಕ ಒತ್ತಡ, ಕೂದಲು ಉದುರುವಿಕೆಗೆ ಬಳಸುವ ಷಾಂಪೂ ಇವುಗಳೆಲ್ಲವೂ ಕೂದಲು ನೆರೆಯಲು ಕಾರಣಗಳಾಗಿವೆ. ಈ ಎಲ್ಲಾ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಕೂದಲು ನೆರೆಯುತ್ತಿದೆ. ಟೂತ್ ಪೇಸ್ಟ್, ಸಾಬೂನು, ಷಾಂಪೂ ಕೊಳ್ಳುವವರ ಪ್ರತಿ ಮನೆಯಲ್ಲೂ ಫ್ಯಾಮಿಲಿ ಪ್ಯಾಕ್ ನಂತೆ ಹೇರ್ ಕಲರ್ ಡಬ್ಬಿಯನ್ನು ಇಡಬೇಕಾಗುತ್ತದೆ.

ವಂಶ ಪಾರಂಪರ್ಯವಾಗಿ ಹಾಗೂ ಥೈರಾಯ್ಡ್ ಸಮಸ್ಯೆಗಳಿಂದ ಕೂದಲು ನೆರೆಯುತ್ತಿದ್ದಲ್ಲಿ ತಕ್ಷಣ ಆಯಾ ವಿಷಯದ ತಜ್ಞರನ್ನು ಬೇಟಿಯಾಗಬೇಕು. ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅಧಿಕ ಒತ್ತಡ ಇರುತ್ತದೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅವರಲ್ಲಿ ಮಾನಸಿಕ ಒತ್ತಡ ಕುಸಿಯುವುದರಿಂದ ಕೂದಲು ನೆರೆಯುತ್ತದೆ. ಮಕ್ಕಳಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಮಾರ್ಗದರ್ಶನ ನೀಡುವ ಮೂಲಕ ಸರಿಪಡಿಸಬಹುದು. ಹಾಲು, ಮೊಟ್ಟೆ, ಧಾನ್ಯಗಳು, ಮೊಳಕೆ ಕಟ್ಟಿದ ಧಾನ್ಯಗಳು, ಸೋಯಾ, ಡ್ರೈ ಫ್ರೂಟ್ಸ್ ಗಳನ್ನು ಅಧಿಕವಾಗಿ ಸೇವಿಸುವುದರಿಂದ ಸ್ವಲ್ಪಮಟ್ಟಿಗೆ ಪ್ರಯೋಜನವಾಗುತ್ತದೆ.

ಯಾವಾಗಲೂ ಒಂದೇ ರೀತಿಯ ಷಾಂಪೂ ಬಳಸುವುದು ಒಳ್ಳೆಯದು. ಮನೆಯಲ್ಲಿ ಸಿಗುವ ಸಹಜ ವಸ್ತುಗಳಿಂದ ಸುಲಭವಾಗಿ ಬಿಳಿ ಕೂದಲನ್ನು ಕಪ್ಪು ಮಾಡಬಹುದೆಂದು ತಜ್ಞರು ಸೂಚಿಸುತ್ತಾರೆ. ಬಿಳಿ ಕೂದಲನ್ನು ಹೋಗಲಾಡಿಸಲು ತಜ್ಞರು ನೀಡುವ ಸಲಹೆಗಳಲ್ಲಿ ಟಾಪ್ 4 ಟಿಪ್ಸ್ ಅನ್ನು ತಿಳಿದುಕೊಳ್ಳೋಣ…ಈ 4ರಲ್ಲಿ ಯಾವುದಾದರೊಂದು ಟಿಪ್ ಅನ್ನು ಪಾಲಿಸಿದರೂ ಬಿಳಿ ಕೂದಲು ಮಾಯವಾಗುತ್ತದೆ ಅಥವಾ ವಾರಕ್ಕೊಂದು ಟಿಪ್ ನಂತೆ ಮಾಡಿದರೂ ಈ ಸಮಸ್ಯೆಯಿಂದ ಹೊರಬರಹುದು ಎಂದು ತಿಳಿಸಿದ್ದಾರೆ.

ಟಿಪ್ : 1
ಮೊಟ್ಟೆಯಲ್ಲಿರುವ ಬಿಳಿಭಾಗ ಅಥವಾ ಮಜ್ಜಿಗೆಯೊಂದಿಗೆ ರುಬ್ಬಿದ ಕರಬೇವಿನಸೊಪ್ಪು ಅಥವಾ ಮೆಂತ್ಯೆ ಸೊಪ್ಪಿನ ಪೇಸ್ಟ್ ಅನ್ನು ತಲೆಗೆ ಪ್ಯಾಕ್ ಹಾಕಿಕೊಂಡು 2 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದಕ್ಕೆ ರಾಸಾಯನಿಕಗಳನ್ನು ಹೊದಿರದ ಷಾಂಪೂ ಬಳಸಬೇಕು. ವಾರಕ್ಕೆ 2 ಬಾರಿ ಹೀಗೆ ಮಾಡಿದರೆ ಕ್ರಮೇಣವಾಗಿ ನೆರೆತ ಕೂದಲು ಕಪ್ಪು ಬಣ್ಣಕ್ಕೆ ಬದಲಾಗುತ್ತದೆ ಎನ್ನುತ್ತಾರೆ ತಜ್ಞರು.

ಟಿಪ್ : 2
ದಾಸವಾಳದ ಎಲೆಗಳನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಪ್ಯಾಕ್ ತಯಾರಿಸಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಂಡು 2 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಬಿಳಿಕೂದಲಿನ ಸಮಸ್ಯೆಗೆ ಪರಿಹಾರದೊರೆಯುತ್ತದೆ.

ಟಿಪ್ : 3
ಹೆನ್ನಾ ಪುಡಿಯನ್ನು ಹರಳೆಣ್ಣೆಯಲ್ಲಿ ಕುದಿಸಿ ತಣ್ಣಗಾದ ನಂತರ ತಲೆಗೆ ಹಚ್ಚಿ ಸೀಗೇಕಾಯಿ ಹಾಕಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡುವುಥವಾ ಹೆನ್ನಾ ಪುಡಿಯಲ್ಲಿ ಬೀಟ್ರೂಟ್ ರಸವನ್ನು ಬೆರೆಸಿ ಪ್ಯಾಕ್ ಹಾಕಿಕೊಂಡರೂ ಕೂದಲಿಗೆ ಕಪ್ಪು ಬಣ್ಣ ಬರುತ್ತದೆ.

ಟಿಪ್ : 4
ಕಾಫಿ ಪುಡಿ ಸಹಾ ನೆರೆತ ಕೂದಲಿನ ಸಮಸ್ಯೆಯನ್ನು ಅದ್ಭುತವಾಗಿ ಹೋಗಲಾಡಿಸುತ್ತದೆ. ಒಂದು ಲೊಟ ನೀರಿನಲ್ಲಿ ಕಾಫಿ ಪುಡಿ ಹಾಕಿ ಕುದಿಸಿ ತಣ್ಣಗಾದ ನಂತರ ತಲೆಗೆ ಹಚ್ಚಿಕೊಂಡು ಮಸಾಜ್ ಮಾಡುತ್ತಾ 30 ನಿಮಿಷಗಳ ನಂತರ ತಲೆಗೆ ಸ್ನಾನ ಮಾಡಬೇಕು.

Comments are closed.