ಕರಾವಳಿ

ಜನ ಮೆಚ್ಚಿದ ಕುಂದಾಪುರ ಎಸಿ ಟಿ. ಭೂಬಾಲನ್‌ ವರ್ಗಾವಣೆ

Pinterest LinkedIn Tumblr

ಕುಂದಾಪುರ: ಕಳೆದೊಂದು ವರ್ಷದಿಂದ ಕುಂದಾಪುರ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ. ಭೂಬಾಲನ್‌ ತುಮಕೂರಿನ ಮಹಾನಗರ ಪಾಲಿಕೆ ಆಯುಕ್ತರಾಗಿ ಗುರುವಾರ ವರ್ಗಾವಣೆಗೊಂಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭಾ ಅವರನ್ನು ಪ್ರಭಾರ ಸಹಾಯಕ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

ತಮಿಳುನಾಡು ಮೂಲದ ಭೂಬಾಲನ್‌ 2015ರ ಐಎಎಸ್‌ ಬ್ಯಾಚ್‌ನ ಅಧಿಕಾರಿಯಾಗಿದ್ದು, 2018ರ ಜ. 16ರಂದು ಕುಂದಾಪುರ ಎಸಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಕೆಲವು ದಿನಗಳ ಹಿಂದಷ್ಟೇ ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಪಡೆದಿದ್ದರು.

ಜನ ಮೆಚ್ಚಿದ ಎಸಿ…
ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸೃಷ್ಟಿಯಾದ ನೆರೆ ಕಾರ್ಯಾಚರಣೆಯಲ್ಲಿ ನಿರಾಶ್ರಿತರ ರಕ್ಷಣೆಯಲ್ಲಿ ಸ್ವತಃ ಭಾಗಿಯಾಗಿ ಯಾಗಿದ್ದರು. ಕಂಡ್ಲೂರು, ಗುಲ್ವಾಡಿ ಭಾಗ ಸೇರಿದಂತೆ ಅತೀವ್ರಷ್ಟಿಯಿಂದ ಪ್ರವಾಹ ಸ್ರಷ್ಟಿಯಾದ ಸ್ಥಳಗಳಲ್ಲಿ ಬೋಟ್ ಮೂಲಕ ತೆರಳಿ ಅಲ್ಲಿನ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವಲ್ಲಿ ಮುಂದಾಗಿದ್ದಲ್ಲದೇ ಗಂಜಿ ಕೇಂದ್ರದಲ್ಲಿಯೇ ಊಟ ಮಾಡಿ ಸರಳತೆ ಪ್ರದರ್ಶಿಸಿದ್ದರು. ಇನ್ನು ಅಕ್ರಮ ಮರಳುಗರಿಕೆಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರು.

(ಆಗಸ್ಟ್ ತಿಂಗಳು ನೆರೆ ಸಂದರ್ಭ ಎಸಿ ಕಾರ್ಯಾಚರಣೆ- ಸಂಗ್ರಹ ಚಿತ್ರಗಳು)

ಭೂಬಾಲನ್‌ ಅವರು ಶುಕ್ರವಾರದಂದು ತುಮಕೂರು ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Comments are closed.