ಕರಾವಳಿ

ಕಾರ್ಕಳದಲ್ಲಿ ಸರ್ಕಾರಿ ಬಸ್-ಬೈಕ್ ಡಿಕ್ಕಿ: ಸವಾರ ಸಾವು, ಇಬ್ಬರಿಗೆ ಗಾಯ

Pinterest LinkedIn Tumblr

ಉಡುಪಿ: ಸರಕಾರಿ ಬಸ್ಸು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ಕುಕ್ಕುಂದೂರು ಎಂಬಲ್ಲಿ ಬುಧವಾರ ನಡೆದಿದೆ. ಕಾರ್ಕಳ ಕುಕ್ಕುಂದೂರು ನಿವಾಸಿ ದಿನೇಶ್ (27) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಗಾಯಗೊಂಡ ಇನ್ನಿಬ್ಬರು ಬೈಕ್ ಸವಾರರು ಮುರುಗೇಶ್ ಮತ್ತು ವೇಲು ಎಂದು ತಿಳಿದುಬಂದಿದೆ.

ಕಾರ್ಕಳ ಮೂಲಕ ಉಡುಪಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸುತ್ತಿದ್ದಾಗ ಕುಕ್ಕ್ಕುಂದೂರು ಗಣಿತನಗರ ಬಳಿಯಲ್ಲಿ ಬೈಕ್ ಸವಾವರರು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಬಸ್ಸಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು ಇವರಲ್ಲಿ ದಿನೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.