ಕರಾವಳಿ

ಮುಂದುವರಿದ ಮಂಗಗಳ ನಿಗೂಢ ಸಾವು; ಮರಣೋತ್ತರ ಪರೀಕ್ಷೆ ವರದಿಯ ನಿರೀಕ್ಷೆ

Pinterest LinkedIn Tumblr

ಕುಂದಾಪುರ: ತಾಲೂಕಿನಲ್ಲಿ ಮಂಗಗಳ ನಿಗೂಢ ಸಾವು ಮುಂದುವರಿದಿದ್ದು, ಮಂಗಳವಾರ ಮತ್ತೆ ನಾಲ್ಕು ಮಂಗಗಳ ಮೃತದೇಹ ಪತ್ತೆಯಾಗಿದೆ.

(ಸಂಗ್ರಹ ಚಿತ್ರ)

ಹೊಸಂಗಡಿಯಲ್ಲಿ 1, ಯಡಮೊಗೆಯಲ್ಲಿ 2, ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂಬಲ್ಲಿ 1 ಮಂಗನ ಮೃತದೇಹ ಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಸ್ಥಳೀಯರು ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಸುಟ್ಟು ಹಾಕಿದ್ದಾರೆ. ತಾಲೂಕಿನಲ್ಲಿ ಈವರೆಗೆ 20 ಮಂಗಗಳ ಸಾವು ವರದಿಯಾಗಿದೆ. ಅವುಗಳ ಪೈಕಿ 12 ಮಂಗಗಳ ಮೃತದೇಹ ಮರಣೋತ್ತರ ಪರೀಕ್ಷೆಗೆ ಲಭ್ಯವಾಗಿದೆ. ಸ್ಯಾಂಪಲ್‌ನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

Comments are closed.