ಕರಾವಳಿ

ಕರಾವಳಿ ಉತ್ಸವ ಸಮಾರೋಪ : ಪಣಂಬೂರು ಬೀಚ್‍ನಲ್ಲಿ ನಾಳೆ ಮಣಿಕಾಂತ್ ಕದ್ರಿ ಅವರ ಸಂಗೀತ ವೈವಿಧ್ಯ

Pinterest LinkedIn Tumblr

ಮಂಗಳೂರು ಡಿಸೆಂಬರ್ 29 : ಕರಾವಳಿ ಉತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾಂಭರಂಭ ನಾಳೆ ಸಂಜೆ ಪಣಂಬೂರು ಬೀಚ್‍ನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಇಂದು ಸಂಜೆ 5.30ರಿಂದ ನಗರದ ಖ್ಯಾತ ಸಂಗೀತಾ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ಸಂಗೀತ ವೈವಿಧ್ಯ ಕಾರ್ಯಕ್ರಮ ಜರಗಲಿದೆ.

ಉಳಿದಂತೆ ಕರಾವಳಿ ಉತ್ಸವದಲ್ಲಿ ನಡೆಯಲಿರುವ ಇಂದಿನ ಕಾರ್ಯಕ್ರಮಗಳು ಇಂತಿವೆ.

ಕದ್ರಿ ಉದ್ಯಾನವನದಲ್ಲಿ: ಡಿಸೆಂಬರ್ 29 ರಂದು ಸಂಜೆ 6 ಗಂಟೆಯಿಂದ 7.45 ರವರೆಗೆ ಚೆನೈ, ವಿದ್ವಾನ್ ಎನ್. ರವಿಕಿರಣ್ ಅವರಿಂದ ಚಿತ್ರವೀಣಾ ವಾದನ. 7.45 ರಿಂದ 9.15 ರವರೆಗೆ ಭುವನೇಶ್ವರ, ಗುರು ರತಿಕಾಂತ್ ಮಹಾಪಾತ್ರ, ಸೃಜನ್ ಎನ್ಸೆಂಬಲ್ ಮತ್ತು ತಂಡದಿಂದ ಒಡಿಸ್ಸಿ ನೃತ್ಯ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಡಿಸೆಂಬರ್ 29 ರಂದು ಸಂಜೆ 6 ರಿಂದ 7.15 ರವರೆಗೆ ವಾಸಾಶ್ರಮ, ಮಂಗಳೂರು, ಮೇಧಾ ಉಡುಪ ಮತ್ತು ತಂಡದಿಂದ ಕೊಳಲು ವಾದನ. ಸಂಜೆ 7.15 ರಿಂದ 9.15 ರವರೆಗೆ ಮಂಗಳೂರು, ನಂದಗೋಕುಲ, ಅರೆಹೊಳೆ ಪ್ರತಿಷ್ಠಾನದವರಿಂದ ನೃತ್ಯ ವೈಭವ.

ಪಣಂಬೂರು ಬೀಚ್‍ನಲ್ಲಿ: ಡಿಸೆಂಬರ್ 29 ರಂದು ಬೀಚ್ ವಾಲಿಬಾಲ್, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಾಕೃತಿ ರಚನೆ ಹಾಗೂ ಸಂಜೆ 4 ಗಂಟೆಗೆ ಆಹಾರೋತ್ಸವ, 4.30 ಕ್ಕೆ ಡ್ರಮ್ ಜಾಮ್ ನಡೆಯಲಿದೆ.

Comments are closed.