ಕರಾವಳಿ

ಅಂತರ್ ಜಿಲ್ಲಾ ಬಂಟರ ಕ್ರೀಡೋತ್ಸವ ; ಸುರತ್ಕಲ್ ಬಂಟರ ಸಂಘಕ್ಕೆ ಸಮಗ್ರ ಪ್ರಶಸ್ತಿ

Pinterest LinkedIn Tumblr

ಮಂಗಳೂರು : ಬಂಟರ ಸಂಘ(ರಿ) ಕಾವೂರು ಇದರ ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ೯ನೇ ಅಂತರ್‌ಜಿಲ್ಲಾ ಬಂಟರ ಕ್ರೀಡೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘವು 24 ಚಿನ್ನ, 14 ಬೆಳ್ಳಿ, 14ಕಂಚಿನ ಪದಕಗಳನ್ನು ಗಳಿಸಿ ಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು.

qಸಮಾರಂಭದ ಅಧ್ಯಕ್ಷತೆಯನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ವೇಣೂರು ವಹಿಸಿದ್ದರು. ಮೇಯರ್ ಭಾಸ್ಕರ್, ಶಾಸಕ ಡಾ. ವೈ ಭರತ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಗಿರೀಶ್ ಎಂ. ಶೆಟ್ಟಿ ಕಟೀಲು, ಜಗನ್ನಾಥ ಚೌಟ, ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಮಗ್ರ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ , ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ತಡಂಬೈಲ್ ಗುತ್ತು. ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮಂಚೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಬೇಬಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ, ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ ಕುಡುಂಬೂರು, ಗುಣ ಶೇಖರ ಶೆಟ್ಟಿ, ಲೀಲಾಧರ ಶೆಟ್ಟಿ, ಬಬಿತಾ ಶೆಟ್ಟಿ, ದೇವೇಂದ್ರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಸುರತ್ಕಲ್ ಬಂಟರ ಸಂಘದ ಸದಸ್ಯೆ ಬಬಿತಾ ಶೆಟ್ಟಿ ಶಾಟ್‌ಪುಟ್, 100 ಮತ್ತು 50 ಮೀ. ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕ, ಭವಿಷ್ ಶೆಟ್ಟಿ ಚೇಳಾರ್ ೧೦೦ಮೀ ೨೦೦ಮೀ ಹಾಗೂ ರಿಲೇಯಲ್ಲಿ ಚಿನ್ನದ ಪದಕ ಪಡೆದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿದ್ಯಾಚರಣ್ ಶೆಟ್ಟಿ ನೇತೃತ್ವದಲ್ಲಿ ಸುರತ್ಕಲ್ ಬಂಟರ ಸಂಘವು ರನ್ನರ್‍ಸ್ ಆಫ್ ಪ್ರಶಸ್ತಿ ಪಡೆಯಿತು.

ಸಮಾರಂಭದಲ್ಲಿ ಕಾವೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅವಿನಾಶ್ ನಾಯ್ಕ್ , ಉಪಾಧ್ಯಕ್ಷರಾದ ಗಿರಿಜಾತೆ ಆರ್. ಭಂಡಾರಿ, ನಿಟ್ಟೆ ಶಶಿಧರ ಶೆಟ್ಟಿ, ಡಿ.ಸುಧಾಕರ ಶೆಟ್ಟಿ ಮುಗ್ರೋಡಿ, ವಾಮನ ಶೆಟ್ಟಿ ಉರುಂದಾಡಿ ತುಕರಾಮ ಶೆಟ್ಟಿ ತೋಡ್ಲ , ಕ್ರೀಡಾ ಕಾರ್ಯದರ್ಶಿ ಚಂದ್ರರಾಜ್ ಶೆಟ್ಟಿ ದೋಣಿಂಜೆಗುತ್ತು ಕೋಶಾಧಿಕಾರಿ ಲಕ್ಷ್ಮೀನಾರಾಯಣ ಶೆಟ್ಟಿ, ಎಂ ಎಸ್ ಶೆಟ್ಟಿ, ಸದಾಶಿವ ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಜಯ ಎಸ್. ಶೆಟ್ಟಿ ರೇಖಾ ವಿ. ಶೆಟ್ಟಿ, ಶ್ವೇತಾ ಆರ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Comments are closed.