ಕರಾವಳಿ

ಭಾರಿ ಮಳೆಗೆ ಮನೆ ಕುಸಿತ : ಶಾಸಕ ಕಾಮಾತ್‌ರಿಂದ ಪರಿಹಾರ ಚೆಕ್ ಹಸ್ತಾಂತರ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ಮನೆ ಕುಸಿದು ಸಾಕಷ್ಟು ನಷ್ಟ ಅನುಭವಿಸಿದ ಗುಡ್ಡೆ ತೋಟದ ನಾಗೋರಿ ಪರಿಸರದ ನಿವಾಸಿ ಪುಷ್ಪ ಸೈಮನ್ ಅವರಿಗೆ ಪ್ರಕೃತಿ ವಿಕೋಪ ನಿಧಿಯ ಅಡಿಯಲ್ಲಿ 95100 ರೂಪಾಯಿ ಚೆಕ್ ಅನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಭಾಸ್ಕರಚಂದ್ರ ಶೆಟ್ಟಿ, ಕಿರಣ್ ರೈ, ಸಂದೀಪ್ ಗರೋಡಿ, ಪ್ರಕಾಶ್ ಗರೋಡಿ, ಸಂದೀಪ್ ಶೆಟ್ಟಿ, ಪೂಜಾ, ಮಧುಪ್ರಸಾದ್ ಹಾಗೂ ವಿಲೇಜ್ ಅಕೌಂಟೆಂಟ್ ರಾಜಕುಮಾರ್ ಉಪಸ್ಥಿತರಿದ್ದರು.

Comments are closed.