ಕರಾವಳಿ

ಮಕ್ಕಳ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸೋಷಿಯಲ್ ಮೀಡಿಯಾ ಪಾತ್ರ

Pinterest LinkedIn Tumblr

ಹೌದು, ಆಶ್ಚರ್ಯವಾದರೂ ಇದು ಸತ್ಯ..! ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಈ ಹಿಂದೆ ಕೆಲ ಅಧ್ಯಯನಗಳು, ಸಂಶೋಧನೆಗಳಿಂದ ಕೇಳಿದ್ದೇವೆ. ಆದ್ರೆ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿರುವ ಸಂಗತಿಯೆಂದರೆ ಸೋಷಿಯಲ್ ಮೀಡಿಯಾ ಆರೋಗ್ಯಕ್ಕೆ ಒಳ್ಳೆಯದಂತೆ. ಸೋಷಿಯಲ್ ಮೀಡಿಯಾದಿಂದ ಆರೋಗ್ಯದ ಪ್ರಯೋಜನಗಳು ಏನೆಲ್ಲಾ ಇವೆ? ಇಲ್ಲಿದೆ ಕಂಪ್ಲಿಟ್ ಡಿಟೇಲ್ಸ್​:

ಅಮೆರಿಕಾ ಮೂಲದ ಮಿಚಿಗನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಪ್ರಕಾರ, ಒಂಟಿತನವನ್ನು ನಿವಾರಿಸುವಲ್ಲಿ, ಮಾನಸಿಕ ಯೋಗಕ್ಷೇಮವನ್ನು ಕಾಪಾಡುವಲ್ಲಿ ಸೋಷಿಯಲ್ ಮೀಡಿಯಾ ‘ಕೀ’ ಇದ್ದಂತೆ ಎಂದು ಲೇಖಕರಾದ ಶಾನನ್ ಆಂಗ್ ಅಭಿಪ್ರಾಯಪಟ್ಟಿದ್ದಾರೆ.

Gerontology ಜರ್ನಲ್‌ನಲ್ಲಿ ಈ ಸಂಶೋಧನೆ ಪ್ರಕಟವಾಗಿದ್ದು, ಸಾಮಾಜಿಕ ಮಾಧ್ಯಮದಿಂದ ಆರೋಗ್ಯದ ಮೇಲೆ ಉಂಟು ಮಾಡಬಹುದಾದ ನೆಗೆಟಿವ್ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಧೃಡಪಡಿಸಿದ್ದಾರೆ. ಹಿರಿಯರಲ್ಲಿ ವಯಸ್ಸಾಗುವಿಕೆಯ ಭಾವನೆಯನ್ನು ಸಾಮಾಜಿಕ ಮಾಧ್ಯಮ ಕಡಿಮೆ ಮಾಡುತ್ತದೆ. ಅಲ್ಲದೇ ಹಿರಿಯರು ಹೆಚ್ಚು ಆ್ಯಕ್ಟಿವ್ ಆಗಿರಲು ಸಾಮಾಜಿಕ ಮಾಧ್ಯಮ ಸಹಾಯ ಮಾಡುತ್ತದೆ. ಅಲ್ಲದೇ ಹಿರಿಯ ವಯಸ್ಕರ ಒಂಟಿತನವನ್ನು ಕಡಿಮೆ ಮಾಡಿ ಆರೋಗ್ಯ ಉತ್ತಮವಾಗಿರಲು ಸಹಾಯಕಾರಿಯಾಗುತ್ತದೆ ಎಂದು ಸಂಶೋಧನೆಯಿಂದ ಧೃಡಪಟ್ಟಿದೆ.

ಮುಖ್ಯವಾಗಿ ಹಿರಿಯ ವಯಸ್ಸಿನವರಲ್ಲಿ ಸಾಮಾಜಿಕ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಬಾರಿಯೂ ಹಿರಿಯ ವಯಸ್ಕರು ಮುಖಾಮುಖಿಯಾಗಿ ಸಂಭಾಷಣೆ ಮಾಡಲು ಬಯಸುತ್ತಾರೆ. ಆದ್ರೆ ಹೆಚ್ಚಿನವರು ಸಾಮಾಜಿಕ ಮಾಧ್ಯಮವನ್ನು ಬಳಸಲು ಮುಂದೆ ಬರುವುದಿಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಬಳಕೆ ಉತ್ತಮವಾದ್ರೂ, ಇತಿ-ಮಿತಿ ಇರಲೇಬೇಕು..!

ಸಾಮಾಜಿಕ ಮಾಧ್ಯಮ ಎಷ್ಟು ಅಗತ್ಯ ಎಂಬುದು ಮುಖ್ಯ. ಹದಿಹರೆಯದ ಮಕ್ಕಳು ಅನಗತ್ಯವಾಗಿ ಸೋಷಿಯಲ್ ಮೀಡಿಯಾ ಬಳಕೆ ಮಾಡಕೂಡದು. ಕೆಲ ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮ ಸಕಾರಾತ್ಮಕ ಅಂಶಗಳನ್ನು ಉಂಟು ಮಾಡುತ್ತದೆ. ಒಳ್ಳೆಯದನ್ನು ಅನುಸರಿಸಲು ಪ್ರೇರೇಪಿಸಬಹುದು. ತಂತ್ರಜ್ಞಾನವನ್ನು ತಿಳಿದುಕೊಳ್ಳುವಲ್ಲಿ ಸಹಾಯ ಮಾಡಬಹುದು. ಆದ್ರೆ ಟ್ವಿಟರ್, ಫೇಸ್‌ಬುಕ್‌, ಮತ್ತು ಇತರ ನೆಟ್‌ವರ್ಕ್‌ಗಳು ನಿಮಗೆ ಬೇಕಾದ ಮಾಹಿತಿ ಒದಗಿಸುತ್ತವೆಯಾದ್ರೂ, ಇವನ್ನೆಲ್ಲಾ ಇತಿ ಮಿತಿಯಲ್ಲೇ ಬಳಕೆ ಮಾಡಿದ್ರೆ ಸೂಕ್ತ.

ಆದ್ರೆ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಇತಿ ಮಿತಿ ಇರದೇ ಹೋದರೆ.. ಅತಿಯಾಗಿ ಹೆಚ್ಚಾದರೆ ಕೆಲ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಅವಶ್ಯಕತೆ ಇದ್ದಾಗ ಮಾತ್ರ ಇದರ ಬಳಕೆ ಉತ್ತಮ. ಅನಗತ್ಯವಾಗಿ ಸೋಷಿಯಲ್ ಮೀಡಿಯಾ ಬಳಕೆ ಮಾಡದಿರಿ. ಫೇಸ್‌ಬುಕ್, ಟ್ವಿಟರ್, ಇಂಟರ್‌ನೆಟ್ ಬಳಕೆಯಿಂದ ಕೆಲ ಸಂದರ್ಭಗಳಲ್ಲಿ ಮನಸ್ಸು ಘಾಸಿಗೊಳ್ಳುವ ಸಂದರ್ಭಗಳು ಹೆಚ್ಚು. ಸಾಮಾನ್ಯವಾಗಿ ಮಕ್ಕಳು ಹಾಗೂ ಹದಿಹರೆಯದವರು ತಾಂತ್ರಿಕ ಹಾಗೂ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸೋಷಿಯಲ್ ಮೀಡಿಯಾ ಸಹಾಯಕಾರಿಯಾಗಬಲ್ಲದ್ದು

Comments are closed.