ಕರ್ನಾಟಕ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Pinterest LinkedIn Tumblr

ಬೆಂಗಳೂರು: ಭಾರೀ ಸಾಲ ಮಾಡಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸ್ಕಂದ ಶೆಲ್ಟರ್ಸ್ ಮಾಲೀಕ ರವೀಶ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡವರು, ಮಾರತಹಳ್ಳಿ ಬಳಿಯ ಪಣತ್ತೂರಿನ ಗೀತಾಂಜಲಿ ಶಾಲೆಯ ಬಳಿ ಇರುವ ಕಚೇರಿಯ 7 ನೇ ಫ್ಲೋರಿನಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರವೀಶ್ ರೆಡ್ಡಿ ರಿಯಲ್ ಎಸ್ಟೇಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ವಿಲ್ಲಾ ನಿರ್ಮಿಸಿಕೊಡುವುದಾಗಿ ಹೇಳಿ ಹಣ ತೆಗೆದುಕೊಂಡಿದ್ದರು, ವಿಲ್ಲಾ ಬುಕ್ ಮಾಡಿದವರು ನಿನ್ನೆ ಸುಮಾರು 2.20 ರ ವೇಳೆಗೆ ಮಹಳೆ ಸೇರಿ ಮೂವರು ರವೀಶ್ ರೆಡ್ಡಿ ಭೇಟಿ ಮಾಡಲು ಬಂದಿದ್ದರು, ಈ ನಡುವೆ ನಡೆದ ಮಾತುಕತೆ ತೀವ್ರ ವಾಗ್ವಾದಕ್ಕೆ ತಿರುಗಿದೆತ ರೂಂ ನಿಂದ ಹೊರಬಂದ ರೆಡ್ಡಿ ಬಾಲ್ಕನಿಯಿಂಗ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಸಂಸ್ಥೆಯ ಮ್ಯಾನೇಜರ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೆಲವು ವಿಲ್ಲಾ ಹಾಗೂ ಮೂರು ಬೆಡ್ ರೂಂ ಅಪಾರ್ಟ್ ಮೆಂಟ್ ಯೋಜನೆ ಕೈಗೆತ್ತಿಕೊಂಡಿದ್ದರು. ಹೊಸೂರು ರಸ್ತೆ ಎಚ್ ಎಸ್ ಆರ್ ಲೇಔಟ್, ಸೇರಿದಂತೆ ಹಲವು ಕಡೆ ಪ್ರಾಜೆಕ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.

ಕಾಡುಬೀಸನಹಳ್ಳಿ ವ್ಯಾಪ್ತಿಯಲ್ಲಿ ರವೀಶ್ ರೆಡ್ಡಿ ಉತ್ತಮ ಗೌರವ ಸಂಪಾದಿಸಿದ್ದರು. ತನಿಖೆಯ ಪ್ರಕಾರ ರೆಡ್ಡಿ ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ವಿಲ್ಲಾ ಬುಕ್ ಮಾಡಿವರು ಫೋನ್ ಮಾಡಿ ವಿಚಾರಿಸಲು ಆರಂಭಿಸಿದ್ದರು, ಕೆಲವು ತಿಂಗಳ ಹಿಂದೆ ಸುಮಾರು 200 ಕೋಟಿ ರು ವೆಚ್ಚದ ಯೋಜನೆಗೆ ಚಾಲನೆ ನೀಡಿದ್ದರು ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಹೇಳಿದ್ದಾರೆ.

ರೆಡ್ಡಿ ಯಾವುದೇ ಆತ್ಮಹತ್ಯೆ ನೋಟ್ ಬರೆದಿಟ್ಟಿಲ್ಲ, ಆಕಸ್ಮಿಕವಾಗಿ ಬಾಲ್ಕನಿಯಿಂದ ಬಿದ್ದಿರಬಹುದು ಎಂದು ರೆಡ್ಡಿ ಸೋದರ ಸಂಬಂಧಿ ರಘು ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನಿನ್ನೆ ಆತನಿಗೆ ಸಾಲಕೊಟ್ಟಿದ್ದ ಸ್ನೇಹಿತರೆಲ್ಲಾ ಮನೆ ಬಳಿ ಬಂದು ಕೊಟ್ಟ ಹಣ ವಾಪಾಸ್ ನೀಡುವಂತೆ ಜಗಳ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಮನನೊಂದ ಅವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Comments are closed.