ಕರಾವಳಿ

ವಿದ್ವಾಂಸ ಕದ್ರಿ ಪ್ರಭಾಕರ‌ ಅಡಿಗರ ಬೃಹತೀ ಸಹಸ್ರಮ್ಕೃತಿ ಬಿಡುಗಡೆ

Pinterest LinkedIn Tumblr

ಮಂಗಳೂರು : ವೇದ ವಿಧಿತವಾದ ಸಹಸ್ರನಾಮಗಳಿಗೆ ಮೂಲವೇ ಬೃಹತೀ ಸಹಸ್ರಮ್. ಸ್ವರ ಸಹಿತವಾಗಿ ‌ಉಚ್ಚರಿಸಲು ಅನುಕೂಲ ವಾಗುವಂತೆ ರಚಿಸಿ, ಸ್ವತಃ ಯಾಗದಲ್ಲಿ‌ ಇದನ್ನು ಪ್ರಯೋಗಿಸಿ ಯಶಸ್ಸು ಕಂಡ ವಿದ್ವಾಂಸ ಕದ್ರಿ ಪ್ರಭಾಕರ‌ ಅಡಿಗರ ಬೃಹತೀ ಸಹಸ್ರಮ್ಕೃತಿ‌ ಅವರ‌ ಅನನ್ಯ ಸಾಧನೆಯ ದ್ಯೋತಕ‌ ಎಂಬುದಾಗಿ ಕಾಣಿಯೂರು ಮಠದ ಯತಿವರ್ಯರಾದ ಶ್ರೀ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜೀ ಯವರು ಶ್ಲಾಘಿಸಿ ಕೃತಿ ಲೋಕಾರ್ಪಣೆಗೈದು ಆಶೀರ್ವದಿಸಿದರು.

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಂದ್ರಿ ಕಂಬ್ಳ ಮಂಜುಪ್ರಸಾದದ ವಾದಿರಾಜ ಮಂಟಪದಲ್ಲಿಕೃತಿ ಬಿಡುಗಡೆಗೊಂಡಿತು. ಕೃತಿ ಪರಿಚಯ ಗೈದ ವಿದ್ವಾಂಸಕಲ್ಯ ಭಾಸ್ಕರ‌ ಆಚಾರ್ಯರು, ವೇದ‌ ಅಪೌರುಷೇಯ. ಭಗವಂತನೇ‌ ಉಸುರಿದ ಪವಿತ್ರ ಸಂದೇಶ ಸಹಸ್ರ ಸಹಸ್ರ ವರ್ಷ ಕಳೆದರೂ ವೇದಕ್ಕೆಯಾವುದೇಕುಂದು ಬಂದಿಲ್ಲ ಕಲಬೆರಕೆ ಸೇರಿಲ್ಲ. ಛಂದ ಶಾಸ್ತ್ರದಲ್ಲಿ ಸ್ವಲ್ಪವೂ ವ್ಯತ್ಯಾಸ‌ ಆಗಿಲ್ಲ. ಆಗುವ ಹಾಗೂ ಇಲ್ಲ. ಯಷಿ ಮುನಿಗಳು ತಪಸ್ಸಿನ ಮೂಲಕ ಕಂಡುಕೊಂಡ ಭಗವಂತನ ನಲ್ನುಡಿ‌ ಇದು‌ ಎಂದರು.

ಕೃತಿಕಾರಡಾ. ಪ್ರಭಾಕರ‌ಅಡಿಗರುಬೃಹತೀ ಸಹಸ್ರಮ್ಯಾಗ ನೆರವೇರಿಸಬೇಕಾದ ಸಂದರ್ಭ ಸ್ವರಸಹಿತವಾಗಿ ಈ ಕೃತಿ ರಚಿಸಲಾಗಿದೆ‌ ಎಂಬುದಾಗಿ ತಿಳಿಸಿ ಸಹಕರಿಸಿದವರೆಲ್ಲರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ ಶ್ರೀ ಪ್ರದೀಪ ಕುಮಾರ ಕಲ್ಕೂರ ಮಾತಾಡುತ್ತಾ ನಮ್ಮ ದೇಶ ಧರ್ಮದ ತಳ ಹದಿಯಲ್ಲಿ ಕಟ್ಟಲ್ಪಟ್ಟಿದೆ. ಸಾವಿರಾರು ಋಷಿ ಪ್ರಣೀತ ಗ್ರಂಥಗಳಿಗೆ. ವೇದ ಮೂರ್ತಿ ಪ್ರಭಾಕರ‌ ಅಡಿಗರು‌ ಅನರ್ಘ್ಯ ರತ್ನದಂತಿರುವ ವೇದ ಮೂಲವಾದ ವಿಚಾರಗಳನ್ನು ಮಥಿಸಿ ಹಲವಾರು ಕೃತಿಗಳನ್ನು ರಚಿಸಿ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಬೃಹತೀ ಸಹಸ್ರಮ್ಕೃತಿ ವೈದಿಕ ಪರಂಪರೆಗೆ ಬಹಳಷ್ಟು ಪ್ರಯೋಜನ ನೀಡುವ ಸಂಶೋಧನಾ ಕೃತಿಯಾಗಿದೆ‌ ಎಂದರು.

ವೇದಮೂರ್ತಿಗಣಪತಿ‌ಆಚಾರ್ಯ, ಕಾವೂರುದೇವಸ್ಥಾನದ‌ಅರ್ಚಕ ಶ್ರೀ ಶ್ರೀನಿವಾಸ ಭಟ್, ಕದ್ರಿದೇವಸ್ಥಾನದ‌ಅರ್ಚಕ ಶ್ರೀ ರಾಮಣ್ಣ‌ ಅಡಿಗರೇ ಮೊದಲಾದವರು ಶುಭ ಹಾರೈಸಿದರು.

ಶ್ರೀ ಸುಧಾಕರ ರಾವ್ ಪೇಜಾವರ‌ ಇವರು ಸ್ವಾಗತಿಸಿ ಸಭಾ ನಿರ್ವಹಣೆಗೈದರು. ಯಕ್ಷಧಾಮದ ಶ್ರೀ ಜನಾರ್ದನ ಹಂದೆಯವರು ಧನ್ಯವಾದ ಸಮರ್ಪಿಸಿದರು.

Comments are closed.