ಕರಾವಳಿ

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪದಕ ಪಡೆದ ಮಂಗಳೂರಿನ ಕರಾಟೆ ಪಟುಗಳು

Pinterest LinkedIn Tumblr

ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 16 ಚಿನ್ನ, 22 ಬೆಳ್ಳಿ, 21 ಕಂಚಿನ ಪದಕ ಪಡೆದ ಕರಾಟೆ ಪಟುಗಳು ಬಜಾಲಿನ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಾಗು ಜಪ್ಪಿನ ಮೊಗೇರಿನ ಬಂಟರ ಸಂಘದಲ್ಲಿ ಕರಾಟೆ ತರಬೇತು ಪಡೆಯುತ್ತಿದ್ದಾರೆ.

ಪದಕ ಪಡೆದವರಲ್ಲಿ ಅಧಿತಿ 1ಬೆಳ್ಳಿ, ನಿಹಾರಿಕಾ 3 ಬೆಳ್ಳಿ, ಗ್ರೀಷ್ಮಾ 1 ಚಿನ್ನ, ಮಾನ್ವಿತಾ 1 ಚಿನ್ನ, ಅನ್ವಿತಾ 1 ಬೆಳ್ಳಿ,1 ಕಂಚು, ಸ್ವಸ್ತಿಕ್ 1 ಬೆಳ್ಳಿ,1 ಕಂಚು, ಪ್ರಥ್ವಿಶ್ 1 ಬೆಳ್ಳಿ,1 ಕಂಚು, ರಕ್ಷಿತ್ 1ಬೆಳ್ಳಿ, ವೈಭವ್ 1 ಚಿನ್ನ,2 ಕಂಚು , ಲಾನ್ವಿಲ್ 2 ಬೆಳ್ಳಿ, ಅಮೃತ 1 ಚಿನ್ನ,1 ಕಂಚು, ಅತಿಷ 1 ಕಂಚು, ವೈಷ್ಣವಿ 1 ಚಿನ್ನ,1 ಬೆಳ್ಳಿ, ಪ್ರಾರ್ಥನಾ 1 ಚಿನ್ನ,1 ಬೆಳ್ಳಿ, ಪ್ರಥಮ್ 1 ಕಂಚು, ಕೃಷಿವ್ 1 ಚಿನ್ನ,1 ಬೆಳ್ಳಿ, ನಿಧಿತ್ 1 ಕಂಚು, ಶ್ರೀವತ್ಸ 1 ಕಂಚು, ಪ್ರಖ್ಯಾತ್ 1 ಚಿನ್ನ,2 ಬೆಳ್ಳಿ, ಅಧೀಶ್ 1 ಬೆಳ್ಳಿ,1 ಕಂಚು, ಸುಶ್ವಿತ್ 1ಕಂಚು, ರಜತ್ 1 ಚಿನ್ನ, ಎ.ಕೃಷ್ಣ ಶೆಟ್ಟಿ 1 ಕಂಚು, ಸರ್ವೇಶ್ 2 ಕಂಚು, ಧಾನಿಷ್ 1 ಚಿನ್ನ,1 ಬೆಳ್ಳಿ, ಪ್ರದೀಪ್ 2 ಕಂಚು, ಸಬ್ರಿನಾ 1 ಕಂಚು. ಪ್ರಾಪ್ತಿ 1 ಚಿನ್ನ,1 ಬೆಳ್ಳಿ,1 ಕಂಚು, ಸಾನ್ವಿ 1 ಚಿನ್ನ,1 ಬೆಳ್ಳಿ,1 ಕಂಚು, ನಿಶ್ಮಿತಾ 1 ಚಿನ್ನ,1 ಬೆಳ್ಳಿ, ಧೃತಿ 3 ಚಿನ್ನ.

ಇವರೆಲ್ಲರೂ ಕರಾಟೆ ಶಿಕ್ಷಕ ಶ್ರೀ ನಾಗೇಶ್ ಎಕ್ಕೂರು ಅವರಿಂದ ತರಬೇತು ಪಡೆಯುತ್ತಿದ್ದಾರೆ.

Comments are closed.