ಕರಾವಳಿ

ಅತೀಯಾದ ಆಮಶಂಕೆ ಕಡಿಮೆಯಾಗಿಸಲು ಸರಳ ಮನೆ ಮದ್ದು

Pinterest LinkedIn Tumblr

ಹೌದು ಆಮಶಂಕೆ ಭೇದಿ ಸಾಮಾನ್ಯವಾಗಿ ಹೆಚ್ಚು ಉಷ್ಣವಾದಾಗ ಅಥವಾ ಕಲುಷಿತ ನೀರು ಕುಡಿಯುವುದರಿಂದ ಮತ್ತು ನೀವು ಅಭ್ಯಾಕ್ಷ ಪದಾರ್ಥಗಳನ್ನು ಸೇವಿಸುವುದರಿಂದ ಆಮಶಂಕೆ ರೋಗ ಉಂಟಾಗುತ್ತದೆ ಈ ಸಂದರ್ಭದಲ್ಲಿ ಪದೇ ಪದೇ ನೀರು ಭೇದಿಯಾಗುತ್ತದೆ ಇದರ ಪರಿಣಾಮ ಕರುಗಳಲ್ಲಿ ಮತ್ತು ಕಿಬ್ಬೊಟ್ಟೆ ನೋವು ಮತ್ತು ಸೆಳೆತ ಉಂಟಾಗುತ್ತದೆ.

ಮಲದೊಡನೆ ಬುರುಗಿನಂತಹ ಶ್ಲೇಷ್ಮ ಕೂಡ ವಿಸರ್ಜನೆಯಾಗುತ್ತದೆ, ಕೆಲವೊಮ್ಮೆ ಶ್ಲೇಷ್ಮದೊಡನೆ ರಕ್ತ ಕೂಡ ಬೀಳುತ್ತದೆ ಇದರಿಂದ ದೇಹದಲ್ಲಿ ನೀರು ಮತ್ತು ರಕ್ತದ ಕೊರೆತೆಯಾಗಿ ರೋಗಿಯು ದೈಹಿಕವಾಗಿ ದುರ್ಬಲತೆಯ ಅನುಭವ ಪಡೆಯುತ್ತಾನೆ.

ದೇಹದಲ್ಲಿ ಆಲಸ್ಯ ಮನೆ ಮಾಡುತ್ತದೆ ಆಹಾರ ಪಾನೀಯಗಳು ರುಚಿಸುವುದಿಲ್ಲ ತಲೆ ಸುತ್ತಿ ಬರುತ್ತದೆ ಮತ್ತು ಕಣ್ಣುಗಳ ಮುಂದೆ ಕತ್ತಲೇ ಕವಿಯುತ್ತದೆ ಇದಕ್ಕೆ ಕೆಳಗಿನ ಮನೆಮದ್ದುಗಳನ್ನು ಪಡೆದುಕೊಳ್ಳುವುದು ಉತ್ತಮ.

ನೇರಳೆ ಹಣ್ಣಿನ ಗಿಡದ ತೊಗಟೆಯನ್ನು ಹತ್ತು ಗ್ರಾಂ ಚೂರ್ಣಮಾಡಿ ಜೇನುತುಪ್ಪದಲ್ಲಿ ಬೆರೆಸಿ ಸೇವಿಸಿ, ಇನ್ನು ಜೇನುತುಪ್ಪದಲ್ಲಿ ಎರಡು ಚಮಚ ನೆರೆಳೆಹಣ್ಣಿನ ರಸವನ್ನು ಸೇರಿಸಿ ಸೇವಿಸಿ, ನೆಲ್ಲಿಕಾಯಿ ಚೂರ್ಣದಲ್ಲಿ ಜೇನುತುಪ್ಪು ಸೇರಿಸಿ ಸೇವಿಸಬೇಕು ಇದರ ಜೊತೆಗೆ ಬಾಳೆ ಫಲವನ್ನು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿ ಇದರ ನಾಲ್ಕು ಚಮಚ ಪುಡಿಯೊಂದಿಗೆ ಜೇನುತುಪ್ಪ ಸೇರಿಸಿ ಸೇವಿಸದರೆ ನಿಮ್ಮ ಆಮಶಂಕೆ ಭೇದಿ ಕಡಿಮೆಯಾಗುತ್ತದೆ.

Comments are closed.