ಕರಾವಳಿ

ಪ್ರತಿ ದಿನವೂ ನಿಮ್ಮ ಸಮಯವ್ಯರ್ಥ ವಾಗುತ್ತಿದೆ ಎಂದು ನಿಮಗನ್ನಿಸುತ್ತಿದೆಯೇ..? ಹಾಗದರೆ ಹೀಗೆ ಮಾಡಿ

Pinterest LinkedIn Tumblr

ಸೋಮಾರಿತನವು ಒಂತರ ಆರಾಮದಾಯಕವಾಗಿರುತ್ತದೆ ಆದರೆ ನಮಗೆ ಜೀವನದ ಜವಾಬ್ದಾರಿ ಬರುವತನಕ ಮಾತ್ರ. ರಜಾ ದಿನಗಳಲ್ಲಿ ಸುಮ್ಮನೆ ಕಾಲ ಕಳೆಯುವುದು ಒಳ್ಳೆಯದೇ, ಆದರೆ ಪ್ರತಿ ದಿನವೂ ನಾನು ಸಮಯವ್ಯರ್ಥ ಮಾಡುತ್ತಿದ್ದೇನೆಂದು ನಿಮಗನ್ನಿಸುತ್ತಿದ್ದರೆ ಹೀಗೆ ಮಾಡಿ

ಒಂದು ಉದ್ದೇಶವನ್ನು ಹೊಂದಿ
ಯೋಗದಲ್ಲಿ, ಪ್ರತಿ ಅಭ್ಯಾಸದ ಪ್ರಾರಂಭದಲ್ಲಿ ಉದ್ದೇಶವನ್ನು ಹೊಂದಿಸಲು ಅವರು ನಿಮಗೆ ಹೇಳುತ್ತಾರೆ. ನಿಮ್ಮ ಸಮಯದ ಉದ್ದಕ್ಕೂ ಮತ್ತು ನಿಮ್ಮ ದಿನದಲ್ಲಿ ನೀವು ಆ ಉದ್ದೇಶಕ್ಕೆ ಅಂಟಿಕೊಂಡಿರಬೇಕು. ನೀವು ಸೋಮಾರಿಯಾಗಿದ್ದರೆ ನಿಮಗೆ ನೀವೇ ಒಂದು ಗುರಿಯನ್ನು ನಿಗದಿ ಪಡಿಸಿಕೊಳ್ಳಿ,ಅದಕ್ಕೆ ಸಮಯನೀಡಿ ಮತ್ತು ಅದರಕಡೆ ಗಮನಕೊಡಿ. ಗುರಿ ಏನಾದರು ಆಗಿರಬಹುದು ಆದರೆ ಉದ್ದೇಶ ನೀವುಇ ಸೋಮಾರಿತನದಲ್ಲಿ ಮೈಮರೆಯದಂತೆ ಮಾಡುವುದು.

ಧ್ಯಾನ ಮಾಡಿ
ನೀವು ಸೋಮಾರಿಯಾಗಿದ್ದರೆ ಯಾವುದೇಕೆಲ್ಸದಲ್ಲಿ ಗಮನಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಪ್ರತಿ ದಿನ ಒಂದುಬಾರಿ ಯಾದರು ಧ್ಯಾನವನ್ನು ಮಾಡಿ ಕನಿಷ್ಠ 20ನಿಮಿಷಗಳಕಾಲ. ಧ್ಯಾನಮಾಡುವುದರಿಂದ ಹೊಸ ಚೈತನ್ಯ ನಿಮ್ಮಲ್ಲಿ ಬೆಳೆಯುತ್ತದೆ. ಮನಸ್ಸಿಗೆ ಉಲ್ಲಾಸ ಹಾಗು ದಿನಪೂರ್ತಿ ಖುಷಿ ಯಾಗಿರುವಿರಿ. ಧ್ಯಾನಿಸಲು ಸರಿಯಾದ ಸಮಯ ಬೆಳಿಗ್ಗೆ ಅಥವಾ ಮಲಗುವಮುನ್ನ.

ಬೆಳಿಗ್ಗೆ ಏಳುವ ಸಮಯ ನಿಗಧಿಪಡಿಸಿ
ನೀವು ಪ್ರತಿ ದಿನವೂ ಒಂದೊಂದು ಸಮಯದಲ್ಲಿ ಏಳುತ್ತಿದ್ದರೆ ಆ ಅಭ್ಯಾಸ ನಿಲ್ಲಿಸಿ. ಪ್ರತಿ ದಿನ ಒಂದೇ ಸಮಯದಲ್ಲಿ ಎದ್ದೇಳುವುದನ್ನು ರೂಢಿಮಾಡಿಕೊಳ್ಳಿ. ನೀವು ಬೆಳಿಗ್ಗೆ ತಡವಾಗಿ ಎದ್ದರೆ ನಿಮ್ಮ ಎಲ್ಲ ಕೆಲಸಗಳು ಮಂದಗತಿಯಲ್ಲೇ ಸಾಗಬಹುದು. ನೀವು ಬೇಗನೆ ಎದ್ದಷ್ಟೂ ಬೇಗ ಕೆಲಸ ಪ್ರಾರಂಭಿಸುವಿರಿ .

ಹೊರಗೆ ತಿರುಗಾಡಿ
ಮನೆಯಲ್ಲಿ ಕೂತಿದ್ದರೆ ಇಲ್ಲದ ಯೋಚನೆಗಳೆಲ್ಲ ನಿಮ್ಮ ತಲೆಗೆ ಬರುವವು. ಹೊರಗೆ ತಿರುಗಾಡುವುದರಿಂದ ಮನಸ್ಸಿಗೆ ಒಂತರ ನೆಮ್ಮದಿ ಸಿಗುವುದು. ಪ್ರತಿ ದಿನ ಒಂದು ಗಂಟೆಯಾದರೂ ಹೊರಗೆ ಹೋಗಿ ಬನ್ನಿ

ಯಾವುದಾದರು ತಿಂಡಿ ತಯಾರಿಸಿ
ಮನೆಯಲ್ಲಿ ನಿಮಗೆ ಬೋರ್ ಆಗುತ್ತಿದ್ದರೆ ಯಾವುದಾದರೊಂದು ಹೊಸ ರುಚಿ ತಿಂಡಿ ಮಾಡಿ, ಅಡುಗೆ ಮಾಡುವ ವಿಧಾನದ ಪುಸ್ತಕದಲ್ಲಿ, ಅಥವಾ ಟಿವಿ ಯಲ್ಲಿ ಬರುವ ಹೊಸ ರುಚಿ ಮಾಡುವ ವಿಧಾನಗಳನ್ನು ಮಾಡಲು ಪ್ರಯತ್ನಿಸಿ

ಬೇರೆಯವರೊಂದಿಗೆ ಮಾತನಾಡಿ
ನೀವು ಪ್ರತಿದಿನ ನಿಮಗೆ ಏನು ಮಾಡುವುದೆಂದು ತಿಳಿಯದೆ ಇದ್ದಾರೆ ನಿಮ್ಮ ಗೆಳಯ ಗೆಳತಿಯರಿಗೆ ಫೋನ್ ಮಾಡಿ ವಿಚಾರಿಸಿ, ಟಿವಿ ಮುಂದೆ ಕೂತು ಕಾಲಹರಣ ಮಾಡುವುದಕ್ಕಿಂತ ಒಬ್ಬರ ಸ್ನೇಹದಲ್ಲಿ ಬೆರೆತು ಮಾತನಾಡುವುದು ಉತ್ತಮ.

Comments are closed.