ಕರಾವಳಿ

ದಂತಕ್ಷಯದಿಂದ ಉಪಶಯನ ಪಡೆಯಲು ಈ ಟಿಪ್ಸ್

Pinterest LinkedIn Tumblr

ಇಂದು ಬಹಳಷ್ಟು ಮಂದಿ ಎದುರಿಸುತ್ತಿರುವ ದಂತ ಸಮಸ್ಯೆಗಳಲ್ಲಿ ಒಂದು ದಂತ ಕ್ಷಯ. ಇದರ ಕಾರಣದಿಂದ ಹಲ್ಲುಗಳು ಹುಳುಕಾಗುತ್ತವೆ. ಆ ಬಳಿಕ ಅವನ್ನು ಕೀಳಬೇಕಾಗುತ್ತದೆ. ಆದರೆ ಆ ಸಮಯದಲ್ಲಿ ಆಗುವ ನೋವು ಭರಿಸಲು ಸಾಧ್ಯವಾಗದಂತೆ ಇರುತ್ತದೆ. ಏನು ಮಾಡಬೇಕೋ ಅರ್ಥವಾಗಲ್ಲ. ಇದರಿಂದ ದಂತಗಳನ್ನು ಕಡ್ಡಾಯವಾಗಿ ತೆಗೆಯಬೇಕಾದ ಪರಿಸ್ಥಿತಿ ಬರುತ್ತದೆ. ಆದರೆ ಅಂತಹ ತೊಂದರೆ ಅನುಭವಿಸದೆ ಕೆಳಗೆ ಕೊಟ್ಟ ಸೂಚನೆಗಳನ್ನು ಪಾಲಿಸಿದರೆ ದಂತಕ್ಷಯದಿಂದ ಉಪಶಮನ ಪಡೆಯಬಹುದು. ಹಾಗಿದ್ದರೆ ಆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣ.

1. ಆಹಾರಾಭ್ಯಾಸ
ಸೂಕ್ತ ಪೋಷಕಗಳುಳ್ಳ ಆರೋಗ್ಯಕರವಾದ ಆಹಾರವನ್ನು ತೆಗೆದುಕೊಂಡರೆ ಅದರಿಂದ ಎಲ್ಲಾ ರೀತಿಯ ಅನಾರೋಗ್ಯ ಸಮಸ್ಯೆಗಳು ಮಾತ್ರವಲ್ಲ, ದಂತಕ್ಷಯ ಸಮಸ್ಯೆ ಸಹ ದೂರವಾಗುತ್ತದೆ. ನಾವು ನಿತ್ಯ ತೆಗೆದುಕೊಳ್ಳುವ ಆಹಾರಗಳೇ ದಂತಕ್ಷಯಕ್ಕೆ ಕಾರಣವಾಗುತ್ತವೆ. ಸಕ್ಕರೆ ಅಧಿಕವಾಗಿ ಇರುವ ಆಹಾರ ತಿಂದರೆ ಅದರಿಂದ ದಂತಕ್ಷಯ ಬೆಳೆಯುತ್ತದೆ. ಆದಕಾರಣ ಈ ತರಹ ಆಹಾರಗಳನ್ನು ತಿನ್ನಬಾರದು. ಸಕ್ಕರೆಯಿಂದ ದೇಹಕ್ಕೆ ಕ್ಯಾಲ್ಸಿಯಂ ಸರಿಯಾಗಿ ಲಭ್ಯವಾಗಲ್ಲ. ಇದರಿಂದ ದಂತಗಳು ಪೆಡುಸಾಗುತ್ತವೆ. ದಂತಕ್ಷಯ ಬರುತ್ತದೆ. ಅದೇ ರೀತಿ ಕ್ಯಾಲ್ಸಿಯಂ ಹೆಚ್ಚಾಗಿರುವ ಹಾಲು, ಮೊಸರು, ಕ್ರೀಂ, ಚೀಸ್ ನಂತಹ ಡೈರಿ ಉತ್ಪನ್ನಗಳು ನಿತ್ಯ ಆಹಾರದ ಭಾಗವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ಕ್ಯಾಲ್ಸಿಯಂ ಚೆನ್ನಾಗಿ ಲಭಿಸುತ್ತದೆ. ದಂತ ಸಮಸ್ಯೆಗಳು ಬರದಂತೆ ಇರುತ್ತವೆ. ಅದೇ ರೀತಿ ಶೀತಲಪಾನೀಯಗಳು, ಸೋಡಾ, ಆಲ್ಕೋಹಾಲ್, ಜ್ಯೂಸ್‍ಗಳು, ಫಿಜ್ಜಿ ಡ್ರಿಂಕ್ಸ್ ಕುಡಿಯಬಾರದು. ನೀರು, ಫ್ರೂಟ್ ಸ್ಮೂತಿಗಳು, ಸಕ್ಕರೆ ಇಲ್ಲದ ಟೀ, ಕಾಫಿ ಕುಡಿಯಬಹುದು. ನೀರು ಧಾರಾಳವಾಗಿ ಕುಡಿದರೆ ಲಾಲಾರಸ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಅದು ದಂತಕ್ಷಯ ಬಾರದಂತೆ ತಡೆಯುತ್ತದೆ.

2. ಶುಗರ್ ಲೆಸ್ ಚೂಯಿಂಗ್ ಗಮ್
ಸಕ್ಕರೆ ಇಲ್ಲದ ಶುಗರ್ ಲೆಸ್ ಚೂಯಿಂಗ್ ಗಮ್‌ಗಳನ್ನು ಜಗಿದರೆ ದಂತಕ್ಷಯ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತಿವೆ. ಶುಗರ್‌ಲೆಸ್ ಚೂಯಿಂಗ್ ಗಮ್‌ನಲ್ಲಿ ಜೈಲಿಟಾಲ್ ಎಂಬ ಪದಾರ್ಥ ಇರುತ್ತದೆ. ಇದು ಸಹಜ ಸಿದ್ಧ ಸ್ವೀಟ್ನರ್. ಇದು ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ಮಾಡುತ್ತದೆ. ಇದರಿಂದ ಲಾಲಾರಸ ಹೆಚ್ಚು ಉತ್ಪತ್ತಿಯಾಗುವಂತೆ ಮಾಡುತ್ತದೆ. ಇದರಿಂದ ದಂತಕ್ಷಯ ಬರಲ್ಲ.

3. ಟೂತ್ ಬ್ರಷ್
ಹೆಚ್ಚು ಕಾಲ ಟೂತ್‍ಬ್ರಷ್ ಬಳಸಿದರೂ ಅದು ದಂತಕ್ಷಯಕ್ಕೆ ಕಾರಣವಾಗುತ್ತದೆ. ಆದಕಾರಣ ಟೂತ್‍ಬ್ರಷ್ ಕನಿಷ್ಟ ಆರುತಿಂಗಳಿಗೊಮ್ಮೆ ಬದಲಾಯಿಸಿ. ಅದೇ ರೀತಿ ನಿಮ್ಮ ಬಾಯಿಗೆ ಸರಿಹೊಂದುವ ಚಿಕ್ಕ ಅಥವಾ ಮೀಡಿಯಂ ಸೈಜ್ ಟೂತ್ ಬ್ರಷ್ ಬಳಸಬೇಕು. ಅದರ ಬ್ರಿಜಿಲ್ಸ್ ಸಾಫ್ಟ್ ಆಗಿ ಇರಬೇಕು. ಇದರಿಂದ ದಂತಗಳ ನಡುವೆ ಇರುವ ಆಹಾರ ಸುಲಭವಾಗಿ ಹೋಗುತ್ತದೆ. ಟೂತ್ ಬ್ರಷ್ ಬ್ರಿಜಿಲ್ಸ್‌ಗೆ ಕ್ಯಾಪ್ ಹಾಕಬಾರದು. ಹಾಕಿದರೆ ಬ್ರಿಜಿಲ್ಸ್‌ನಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಅದು ದಂತಕ್ಷಯ ಉಂಟುಮಾಡುತ್ತದೆ. ಟಾಯ್ಲೆಟ್‌‍ಗಳಿಗೆ ಸಾಧ್ಯವಾದಷ್ಟು ದೂರವಾಗಿ ಟೂತ್‌ಬ್ರಷ್ ಇಡಬೇಕು. ಇಲ್ಲದಿದ್ದರೆ ಟಾಯ್ಲೆಟ್‍ಗಳಿಂದ ಬರುವ ಬ್ಯಾಕ್ಟೀರಿಯಾ ನೇರವಾಗಿ ಬ್ರಷ್ ಮೇಲೆ ಬೆಳೆಯುತ್ತದೆ. ಅದು ದಂತಕ್ಷಯ ಉಂಟು ಮಾಡುತ್ತದೆ.+

4. ಡೆಂಟಲ್ ಕೇರ್
ನಿತ್ಯ ಎರಡು ಕನಿಷ್ಠ 2 ನಿಮಿಷಗಳ ಕಾಲವಾದರೂ ಬ್ರಷ್ ಮಾಡಬೇಕು. ದಂತದ ಮೂಲೆಮೂಲೆಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಒಳಗೆ, ಹೊರಗೆ ಕ್ಲೀನ್ ಮಾಡಬೇಕು. ಫ್ಲಾಸಿಂಗ್ ಕಡ್ಡಾಯವಾಗಿ ಮಾಡಬೇಕು. ಇದು ದಂತದ ಸಂಧಿಗಳಲ್ಲಿ ಸಿಕ್ಕಿರುವ ಆಹಾರ ಪದಾರ್ಥವನ್ನು ತೊಲಗಿಸುತ್ತದೆ. ಮೌತ್ ವಾಷ್ ಬಳಸಬೇಕು. ಇದು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುತ್ತದೆ. ಬಾಯಲ್ಲಿರುವ ಬ್ಯಾಕ್ಟೀರಿಯಾ ತೊಲಗಿಸುತ್ತದೆ.

5. ಡೆಂಟಿಸ್ಟ್
ದಂತ ಸಮಸ್ಯೆಗಳು ಇರಲಿ ಬಿಡಲಿ ದಂತವೈದ್ಯರನ್ನು ಆಗಾಗ ಭೇಟಿಯಾಗಿ ಸಲಹೆಗಳನ್ನು ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ಔಷಧಿಗಳನ್ನು ಬಳಸಬೇಕು. ಅಗತ್ಯ ಎಂದುಕೊಂಡರೆ ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದೆ ದಂತ ಸಮಸ್ಯೆಗಳು ಬರದಂತೆ ಇರುತ್ತದೆ. ಡೆಂಟಿಸ್ಟ್‌ಗಳ ಬಳಿ ಬಾಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಇದರಿಂದ ದಂತಕ್ಷಯ ಬರುವ ಅವಕಾಶಗಳು ತುಂಬಾ ಕಡಿಮೆಯಾಗುತ್ತವೆ. ಕನಿಷ್ಠ ವರ್ಷದಲ್ಲಿ ಎರಡು ಸಲವಾದರೂ ದಂತವೈದ್ಯರನ್ನು ಸಂಪರ್ಕಿಸಬೇಕು.

6. ಸಪ್ಲಿಮೆಂಟ್ಸ್
ವಿಟಮಿನ್‌ಗಳೂ, ಮಿನರಲ್ಸ್ ಇರುವ ಆಹಾರವನ್ನು ನಿತ್ಯ ಸೇವಿಬೇಕು. ನಾರು ಹೆಚ್ಚಾಗಿರುವ ಇರುವ ಹಣ್ಣು, ತರಕಾರಿ ತಿನ್ನಬೇಕು. ಆಪಲ್ಸ್, ಬಾಳೆಹಣ್ಣು, ಮೊಳಕೆಬೀಜಗಳನ್ನು ತಿನ್ನಬೇಕು. ತೃಣಧಾನ್ಯಗಳು, ವಿಟಮಿನ್ ಬಿ, ಐರನ್ ಇರುವ ಆಹಾರ ತೆಗೆದುಕೊಳ್ಳಬೇಕು. ಮೆಗ್ನಿಷಿಯಂ, ವಿಟಮಿನ್ ಡಿ ಇರುವ ಆಹಾರ ಸಹ ನಿಯಮಿತವಾಗಿ ತೆಗೆದುಕೊಂಡರೆ ದಂತಕ್ಷಯ ಬರದಂತೆ ನೋಡಿಕೊಳ್ಳಬಹುದು.

7. ಆಯಿಲ್ ಪುಲ್ಲಿಂಗ್
ನಿತ್ಯ ಬೆಳಗ್ಗೆ ಒಂದು ಟೇಬಲ್ ಸ್ಫೂನ್ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದನ್ನು ಬಾಯಲ್ಲಿ ಹಾಕಿಕೊಂಡು 20 ನಿಮಿಷಗಳ ಕಾಲ ಆಯಿಲ್ ಪುಲ್ಲಿಂಗ್ ಮಾಡಬೇಕು. ಆಯಿಲನ್ನು ಬಾಯಲ್ಲಿ ಹಾಕಿಕೊಂಡು ಹಾಗೆಯೇ ಇದ್ದು ಮುಕ್ಕಳಿಸುತ್ತಿರಬೇಕು. ಬಾಯಲ್ಲಿ ಲಾಲಾರಸ, ಆಯಿಲ್ ಎರಡೂ ಬೆರೆತು ಹಾಲಿನ ತರಹ ಬದಲಾಗುತ್ತದೆ. ಆದರೆ ಈ ಮಿಶ್ರಣವನ್ನು ನುಂಗಬಾರದು. ಉಗಿಯಬೇಕು. ನಿತ್ಯ ಈ ರೀತಿ ಮಾಡುವುದರಿಂದ ದಂತ ಸಮಸ್ಯೆಗಳು ನಿವಾರಣೆಯಾಗುತ್ತವೆ. ದಂತಕ್ಷಯ ಬರಲ್ಲ. ಇದ್ದರೂ ಕಡಿಮೆಯಾಗುತ್ತದೆ.

8. ಸ್ವಂತ ಟೂತ್‍ಪೇಸ್ಟ್
ಮಾರುಕಟ್ಟೆಯಲ್ಲಿ ಸಿಗುವ ಟೂತ್‌ಪೇಸ್ಟ್‌ಗಿಂತಲೂ ಮನೆಯಲ್ಲಿ ನೀವೇ ಸ್ವತಃ ಟೂತ್‍ಪೇಸ್ಟ್ ತಯಾರಿಸಿಕೊಂಡು ಬಳಸಬಹುದು. ಅದು ಹೇಗೆಂದರೆ…

4 ಟೇಬಲ್ ಸ್ಫೂನ್ ಕ್ಯಾಲ್ಸಿಯಂ ಪೌಡರ್, 1 ಟೇಬಲ್ ಸ್ಫೂನ್ ಸ್ಟಿವಿಯಾ, 1 ಟೇಬಲ್ ಸ್ಫೂನ್ ಸಮುದ್ರದ ಉಪ್ಪು, 2 ಟೇಬಲ್ ಸ್ಫೂನ್ ಬೇಕಿಂಗ್ ಸೋಡಾ, 1/4 ಕಪ್ ಕೋಕೋನಟ್ ಆಯಿಲ್ ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಕಲೆಸಬೇಕು. ಇದರಿಂದ ಪೇಸ್ಟ್ ತಯಾರಾಗುತ್ತದೆ. ಇದನ್ನು ದಂತ ಸ್ವಚ್ಛಗೊಳಿಸಿಕೊಳ್ಳಲು ಬಳಸಬಹುದು. ಹೊರಗೆ ಸಿಗುವ ಟೂತ್‌ಪೇಸ್ಟ್‌ಗಿಂತ ಇದು ಶೇ.100ರಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ. ದಂತ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ತಯಾರಿಸಿಕೊಳ್ಳುವ ಟೂತ್‌ಪೇಸ್ಟ್ 30 ದಿನಗಳ ಒಳಗೆ ಬಳಸಬೇಕು. ಹೆಚ್ಚಿನ ದಿನ ಇಡಬಾರದು. ಅಗತ್ಯ ಬಿದ್ದರೆ ಮತ್ತೆ ತಯಾರಿಸಿಕೊಳ್ಳಬೇಕು.

Comments are closed.