ಕರಾವಳಿ

22ನೇ ಸಾಹಿತ್ಯ ಸಮ್ಮೇಳನ : ಮಕ್ಕಳಿಂದ ಅಜ್ಜಿ ಕಥೆಗಳು ಹಾಗೂ ವಿದ್ಯಾರ್ಥಿಗಳಿಂದ ಸಣ್ಣ ಕಥೆಗಳಿಗೆ ಆಹ್ವಾನ

Pinterest LinkedIn Tumblr

ಮಂಗಳೂರು : ಮಾರ್ಚ್ 5ರಿಂದ ಮಾರ್ಚ್ 7ರವರೆಗೆ 3 ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರಗಲಿರುವ 22ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಂಚೆ ಕಾರ್ಡಿನಲ್ಲಿ ಮಕ್ಕಳಿಗಾಗಿ 100 ಅಜ್ಜಿ ಕಥೆಗಳ ಸಂಕಲನ ಪ್ರಕಟಿಸಲು ನಿರ್ಧರಿಸಲಾಗಿದೆ.

ಆಸಕ್ತರು ಅಂಚೆ ಕಾರ್ಡಿನಲ್ಲಿ ಸ್ವಂತಕೈಬರಹದಲ್ಲಿಕಥೆಯನ್ನು ಬರೆದುಫೆಬ್ರವರಿ 28 ರೊಳಗಾಗಿ ಕದ್ರಿ ನವನೀತ ಶೆಟ್ಟಿ, ಅಂಚೆ ಕಾರ್ಡಿನಲ್ಲಿ‌ ಅಜ್ಜಿಕಥೆ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, `ಶ್ರೀಕೃಷ್ಣ ಸಂಕೀರ್ಣ’, ಕೊಡಿಯಾಲ್‌ಬೈಲ್, ಮಂಗಳೂರು-3  ಫೋನ್: 2492239 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಆಯ್ಕೆ ಸಮಿತಿಯಿಂದ‌ ಆಯ್ಕೆಗೊಂಡ100 ಅಜ್ಜಿ ಕಥೆಗಳನ್ನು ಪ್ರಕಟಗೊಳಿಸುವುದಲ್ಲದೆ ಪ್ರಥಮ, ದ್ವಿತೀಯ, ತೃತೀಯ, 3 ಜನಕೃತಿಕಾರರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲಾಗುವುದು. ಎಂದು ದ ಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಂದ ಸಣ್ಣ ಕಥೆಗಳಿಗೆ ಆಹ್ವಾನ:

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರಗಲಿರುವ 22ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಣ್ಣ ಕಥೆಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಯಲ್ಲಿ‌ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮ್ಮೇಳನದ ಕಥಾಗೋಷ್ಠಿಯಲ್ಲಿ ಕಥೆ‌ ಓದಲು‌ ಅವಕಾಶ ಕಲ್ಪಿಸಲಾಗಿದೆ.

ಕಥೆಯು A4 ಸೈಜಿನಕಾಗದದ‌ ಒಂದೇ ಮಗ್ಗುಲಲ್ಲಿ ಬರೆದು, ಎರಡು ಪುಟಗಳಿಗಿಂತ ಮೀರಬಾರದು.ಒಂದನೇ ವಿಭಾಗ: 10ನೇ ತರಗತಿಯ ಒಳಗಿನ ವಿದ್ಯಾರ್ಥಿಗಳು, ಎರಡನೇ ವಿಭಾಗ: ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು. ಪೂರ್ಣ ವಿಳಾಸ, ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆ ತರಗತಿಗಳನ್ನು ನಮೂದಿಸಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರದೃಢೀಕರಣದೊಂದಿಗೆ ಈ ಕೆಳಗಿನ ವಿಳಾಸಕ್ಕೆ ದಿನಾಂಕ 28/02/2018ರೊಳಗೆ ಕಳುಹಿಸಿಕೊಡಬೇಕು.

ಸಂಚಾಲಕರು, ಸಣ್ಣಕಥಾ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, `ಶ್ರೀಕೃಷ್ಣ ಸಂಕೀರ್ಣ’, ಕೊಡಿಯಾಲ್‌ಬೈಲ್, ಮಂಗಳೂರು-3.

ಕಥೆಯೊಂದಿಗೆ ಪಾಸ್‌ಪೋರ್ಟ್‌ಸೈಜಿನ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು.ಆಯ್ದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು‌ ಎಂದುದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಟ್ಯಾಲಯಾ ದಿಂದ “ನೃತ್ಯ ನಮನ” ಕಾರ್ಯಕ್ರಮ 

ಮಂಗಳೂರು : ನಾಟ್ಯಾಲಯಾ ‌ಉರ್ವ(ರಿ) ಸಂಸ್ಥೆಯ ನೃತ್ಯ ನಮನ ಕಾರ್ಯಕ್ರಮವು‌ ಇತ್ತೀಚೆಗೆ ಪುರಭವನದಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯಗುರು ಶ್ರೀ ಉಳ್ಳಾಲ ಮೋಹನ್‌ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ನಂದಳಿಕೆ ಬಾಲಚಂದ್ರರಾವ್, ಶ್ರೀ ವಿನಯ ಭಟ್ ಪಿ.ಜೆ., ಶ್ರೀ ಮೋಹನ್‌ಕುಮಾರ್‌ಕುಂಬ್ಳೇಕಾರ್, ಶ್ರೀ ಶ್ರೀಧರ ಹೊಳ್ಳ ಹಾಗೂ ಸಂಸ್ಥೆಯ ನಿರ್ದೇಶಕರಾದಗುರು ಶ್ರೀಮತಿ ಕಮಲಾಭಟ್ ಉಪಸ್ಥಿತರಿದ್ದರು.

Comments are closed.