ಗಲ್ಫ್

ವಿಜ್ರಂಭಣೆಯಿಂದ ಜರುಗಿದ ಅಲ್ ಖಮರ್ ಮೂಳೂರು ಫಾಮಿಲಿ ಮೀಟ್ 2018

Pinterest LinkedIn Tumblr

ಅಲ್ ಖಮರ್ ವೆಲ್ಫೇರ್ ಎಸೋಸಿಯೇಶನ್ ಮೂಳೂರು ದುಬಾಯಿ ಘಟಕದ ವತಿಯಿಂದ ಹಮ್ಮಿಕೊಂಡ ” ಅಲ್ ಖಮರ್ ಮೂಳೂರು ಫಾಮಿಲಿ ಮೀಟ್ 2018 ” ಕಾರ್ಯಕ್ರಮವು 19/01/2018 ಶುಕ್ರವಾರದಂದು ದುಬಾಯಿಯ ಪ್ರತಿಷ್ಠಿತ ಹೋಟೇಲ್ ” pearl city suits ” ಇದರ ಸಭಾಂಗಣದಲ್ಲಿ ಬಹಳ ಅದ್ದೂರಿಯಾಗಿ ಜರುಗಿತು.

ಸಂಜೆ 5:30 ಕ್ಕೆ ಕಾರ್ಯಕ್ರಮವು ಜನಾಬ್!! ಅಕ್ಬರ್ ಅಲಿ ಇವರ ಸ್ವಾಗತ ಗಾನ ಹಾಡುವೂದರೊಂದಿಗೆ ಆರಂಭವಾಗಿ ನಂತರ ಮಕ್ಕಳ ಕನ್ನಡ ಸಾಂಸ್ಕ್ರತಿಕ ಜಾನಪದ ನ್ರತ್ಯ , ಒಪ್ಪನ ಹಾಡು , ಅಲ್ ಖಮರ್ ಸೀನಿಯರ್ ದಫ್ ತಂಡದಿಂದ ದಫ್ ಪ್ರದರ್ಶನ , ಇನ್ನು ಹಲವಾರು ಪ್ರಕಾರದ ಸ್ಟೇಜ್ ಗೇಮ್ಸ್ , ಜರುಗಿದವು.

ಮಕ್ಕಳ ವಿವಿಧ ಪ್ರತಿಭೆಗಳನ್ನು ಹಾಡಿ ನಟಿಸಿ ತೋರಿಸಲಾಯಿತು , ಬ್ಯಾರಿ ನಾಟಕ ” ಸೂಫಿಯಾಕಡೆ ಸಾಲೆ ” ಎಂಬ ಬ್ಯಾರಿ ಸಾಂಸ್ಕ್ರತಿಕ ನಾಟಕವನ್ನು ಎಂ.ಇ ಉಸ್ಮಾನ್ ಹಾಗೂ ತಂಡ ಪ್ರದರ್ಶಿಸಿತು, ಅಕ್ಬರ್ ಅಲಿ ಸುರತ್ಕಲ್ ಇವರಿಂದ ಬಹುಬಾಷಾ ಮಿಮಿಕ್ರಿಯನ್ನು ನಟಿಸಿ ತೋರಿಸಿದರು. ತುಂಬಿ ತುಲುಕಿದ ಸಮಾಂಗಣದಲ್ಲಿ ಸಭಿಕರ ಕರತಾಡನವು ಅಷ್ಟೇ ಯಶಸ್ವಿಯನ್ನು ತೋರಿಸುತ್ತಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಲ್ಲಿ ಯೂತ್ ವಿಂಗ್ ದಫ್ ತಂಡದಿಂದ ವಿನೂತನ ಶೈಲಿಯಲ್ಲಿ ಮತ್ತೊಂದು ದಫ್ ಕಲೆಯನ್ನು ಪ್ರದರ್ಶಿಸಿದರು.

ವೇಧಿಕೆಯಲ್ಲಿ ಉಪಸ್ಥಿತರಿದ್ದ ಅನಿವಾಸಿ ಭಾರತೀಯರ ಹಲವಾರು ಸಂಘಟನೆಯ ಪ್ರಮುಖರು ಅಲ್ ಖಮರ್ ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು. ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ” ಅಲ್ ಖಮರ್ ನಾಲೇಜ್ ಬುಕ್ ” ಅನ್ನು ಬಿಡುಗಡೆ ಗೊಳಿಸಲಾಯಿತು.

ಅಲ್ ಖಮರ್ ಸಂಸ್ಥೆಯ ಉದಯ , ಸಂಸ್ಥೆಯು ನಡೆದು ಬಂದ ದಾರಿ , ಸಂಸ್ಥೆಯ ಕಾರ್ಯ ವೈಖರಿ , ಹಾಗೂ ಸಂಸ್ಥೆಯ ಸದಸ್ಯರ ಹುಮ್ಮಸ್ಸನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಜನಾಬ್! ಎಂ.ಇ ಮೂಳೂರು ಇವರುಗಳು ನೆರೆದ ಜನಸ್ತೋಮದ ಮುಂದಿಟ್ಟರು. ಸಂಸ್ಥೆಯ ಅಧ್ಯಕ್ಷರಾದ ಜನಾಬ್ !!ಅಬ್ದುಲ್ ಸಮದ್ ಬೀರಾಲಿ , ಇವರು ಸಂಸ್ಥೆಯ ಸದಸ್ಯರು ಯಾವ ರೀತಿ ಸಂಸ್ಥೆ ಕಾರ್ಯ ವೈಖರಿಗೆ ತನಗೆ ಬೆನ್ನಲುಬಾಗಿ ನಿಂತಿರುವರು ಎಂಬುವೂದನ್ನ ವಿವರಿಸಿದರು. ಕಾರ್ಯಕ್ರಮದ ಚೇರ್ಮ್ಯಾನ್ ಜನಾಬ್ !! ಎಂ.ಇ ಸುಲೈಮಾನ್ , ರವರು ಈ ಕಾರ್ಯಕ್ರಮಕ್ಕೆ ಅನಿವಾಸಿ ಭಾರತೀಯರು ಯಾವ ರೀತಿ ಸಹಾಯ ಸಹಕಾರವನ್ನು ನೀಡಿದರು ಎಂಬುದನ್ನು ತಿಳಿಸಿದರು. ರಾತ್ರಿಯ ಉಪಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು..

Comments are closed.