ಕರಾವಳಿ

ಸರಕಾರ ಮಠವನ್ನು ಸ್ವಾಧೀನ ಮಾಡಿಕೊಂಡರೇ ಮಠ ತ್ಯಜಿಸುವೆ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಮಠಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡಿಸುವ ಸರಕಾರದ ನಿರ್ಧಾರವನ್ನು ಉಡುಪಿಯಲ್ಲಿ ಪೇಜಾವರ ಶ್ರೀಗಳು ವಿರೋಧಿಸಿದ್ದಾರೆ. ಸರಕಾರವೇ ವಿಪಕ್ಷಗಳ ಕೈಯಲ್ಲಿ ದೊಡ್ಡ ಅಸ್ತ್ರ ಕೊಟ್ಟಿದೆ. ನಾನು ಹೋರಾಟ ಮಾಡುವುದಿಲ್ಲ, ಎಲ್ಲವೂ ಜನತೆಯ ನಿರ್ಧಾರಕ್ಕೆ ಬಿಟ್ಟಿದ್ದು ಇದನ್ನು ಜನ ತೀರ್ಮಾನ ಮಾಡಲಿ ಎಂದಿದ್ದಾರೆ.

ಹಿಂದೂ ಮಠಗಳನ್ನ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಮೂಲಕ ಈ ಸರಕಾರ ಹಿಂದೂ ವಿರೋಧಿ ಸರ್ಕಾರ ಅನ್ನುವುದು ಸ್ಪಷ್ಟವಾಗಿದೆ. ಜಾತ್ಯತೀತ ಸರ್ಕಾರ ಈ ರೀತಿ ಮಾಡುವುದು ಸೂಕ್ತವಲ್ಲ. ಎಲ್ಲರನ್ನೂ ಸಮಾನವಾಗಿ ನೋಡಬೇಕು. ಆರಂಭದಿಂದಲೂ ಅಲ್ಪ ಸಂಖ್ಯಾತರು ಬಹು ಸಂಖ್ಯಾತರನ್ನು ಸಮಾನವಾಗಿ ನೋಡಬೇಕು ಎಂದು ಹೇಳುತ್ತಾ ಬಂದಿದ್ದೇನೆ. ಆದ್ರೆ ಈ ಸರ್ಕಾರ ಅದಕ್ಕೆ ವೃತಿರಿಕ್ತವಾಗಿ ನಡೆಯುತ್ತಿದೆ.

ಇತ್ತೀಚೆಗೆ ಕೋಮು ಗಲಭೆಯಲ್ಲಿ ಭಾಗಿಯಾದ ಅಲ್ಪಸಂಖ್ಯಾತರನ್ನು ಮಾತ್ರ ಬಿಡುಗಡೆ ಮಾಡಲು ಸರಕಾರ ಮುಂದಾಗಿತ್ತು .ಎಲ್ಲಾ ಧರ್ಮದ ಮುಗ್ದರನ್ನು ಬಿಡುಗಡೆ ಮಾಡಬೇಕಿತ್ತು.ಸರಕಾರ ಹಿಂದೂ ವಿರೋಧಿ ಎನ್ನುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಮಠದಿಂದ ಹೊರಬರುವೆ:
ಯಾವಾಗ ನಮ್ಮ ಮಠವನ್ನು ಸ್ವಾಧೀನ ಮಾಡುತ್ತಾರೋ..ನಾನು ಮಠ ಬಿಟ್ಟು ಹೊರಗೆ ಬರುತ್ತೇನೆ. ಮಠದಲ್ಲಿ ಇರೋದೇ ಇಲ್ಲ. ಸರಕಾರ ಸ್ವಾಧೀನ ಮಾಡಿದರೆ ನಾವು ಅವರ ನೌಕರಾರಿಗೆ ಇರೋದಿಲ್ಲ. ನಾನು ಮಠವನ್ನು ಸಂಪೂರ್ಣ ಬಿಟ್ಟು,ಸಮಾಜವನ್ನು ಅವಲಂಬಿಸಿಕೊಂಡು ಇರುತ್ತೇನೆ.

Comments are closed.