ಕರಾವಳಿ

ಅಧಿಕವಾದ ಬಿ.ಪಿಯನ್ನು ತಕ್ಷಣವೇ ಹತೋಟಿಗೆ ತರಲು ಹೀಗೆ ಮಾಡಿ

Pinterest LinkedIn Tumblr

ಇಂದಿನ ಧಾವಂತ ಜೀವನದಲ್ಲಿ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ. ಆಹಾರ ಪದ್ಧತಿ, ಕೆಲಸದೊತ್ತಡದಿಂದ ಹಲವರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಸದಾ ಔಷಧಗಳನ್ನು ಉಪಯೋಗಿಸುತ್ತಿದ್ದರೂ , ಆಗಾಗ ಹೃದಯಾಘಾತಕ್ಕೊಳಗಾಗುವ ಅವಕಾಶವಿದೆ. ಬಿ.ಪಿ.ಅಧಿಕವಾದಾಗ ಸಣ್ಣಗೆ ನಡುಕ, ಸುಸ್ತಾಗುವುದು, ಹೃದಯದ ಬಡಿತ ಹೆಚ್ಚಾಗುವಂತಹ ಬದಲಾವಣೆಗಳನ್ನು ಕಾಣಬಹುದು. ಅಕಸ್ಮಾತ್ತಾಗಿ ಬಿ.ಪಿ. ಅಧಿಕವಾದಲ್ಲಿ ಒಂದು ಚಿಕ್ಕ ಉಪಾಯದಿಂದ ಮಾಮೂಲಿನಂತೆ ಆಗುವ ಅವಕಾಶವೂ ಇದೆ. ಅದೇನೆಂದು ನೋಡೋಣ.

ಹೀಗೆ ಮಾಡಿ ….
ಬಿ.ಪಿ. ಅಧಿಕವಾದ ತಕ್ಷಣವೇ ಬಿಸಿ ನೀರನ್ನು ಬಟ್ಟಲಲ್ಲಿ ಹಾಕಿ ಪಾದಗಳನ್ನು ಮುಳುಗುವಂತೆ ನೀರಿನಲ್ಲಿಟ್ಟುಕೊಂಡು 10 ನಿಮಿಷಗಳ ಕಾಲ ಇರಬೇಕು.
ನಂತರ ನಿಂಬೆರಸವನ್ನು (ಉಪ್ಪು ಸೇರಿಸಬಾರದು) ಸೇವಿಸಿದರೆ ತಕ್ಷಣವೇ ಬಿ.ಪಿ ಹತೋಟಿಗೆ ಬರುತ್ತದೆ. ಅದರೆ ಇದು ತಾತ್ಕಾಲಿಕ ಮಾತ್ರವಷ್ಟೆ.

ಬಿ.ಪಿ.ಯನ್ನು ಪೂರ್ತಿಯಾಗಿ ನಿವಾರಿಸಿಕೊಳ್ಳಲು…..

ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ ಅವಶ್ಯಕವಾದ 6 ಗ್ರಾಂ. ಉಪ್ಪು, ಹಣ್ಣು ಹಾಗೂ ತರಕಾರಿಗಳಲ್ಲಿ ಸಹಜವಾಗಿರುತ್ತದೆ. ಇವು ನಮ್ಮ ದೇಹವು ಕಾರ್ಯನಿರ್ವಹಿಸಲು ಸಹಕರಿಸುತ್ತದೆ. ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಕೆಳಕಂಡಂತೆ ಕೆಲವು ಜಾಗ್ರತೆಗಳನ್ನು ವಹಿಸಿದರೆ ಸಾಕು.
* ಶೇಖರಿಸಿದ ಹಾಗೂ ಹೊರಗೆ ಸಿಗುವಂತಹ ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪು ಹೆಚ್ಚಾಗಿರುವುದರಿಂದ ಅವುಗಳನ್ನು ತ್ಯಜಿಸಬೇಕು.
* ಊಟ ಮಾಡುವಾಗ ಉಪ್ಪನ್ನು ಮುಂದೆ ಇಡಬಾರದು.
* ಉಪ್ಪಿಗೆ ಬದಲಾಗಿ ರುಚಿ ನೀಡುವಂತಹ ಸುಗಂಧದ್ರವ್ಯಗಳು, ನಿಂಬೆರಸ, ವೆನಿಗಾರ್, ಮೆಣಸು ಪುಡಿ, ಈರುಳ್ಳಿಯನ್ನು ಬಳಸಬೇಕು.
* ಶೇಖರಿಸಿಟ್ಟ ಆಹಾರಕ್ಕೆ ಬದಲಾಗಿ ತಾಜಾ ಹಣ್ಣು ತಿನ್ನಬೇಕು.
* ಹಾಗೂ ಚಿಪ್ಸ್ ಅನ್ನು ತಿನ್ನಲೇಬಾರದು.
* ಮಜ್ಜಿಗೆಗೆ ಉಪ್ಪು ಬೆರೆಸಿಕೊಳ್ಳಬಾರದು.
* ಪೊಟಾಶಿಯಂ ಅಧಿಕವಾಗಿರುವ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ಶರೀರದಲ್ಲಿ ಸೋಡಿಯಂ ಸ್ಥಾನವನ್ನು ಸಮತೋಲನದಲ್ಲಿ ಇರಿಸಬಹುದು.
* ನಮ್ಮ ಎತ್ತರ ಹಾಗೂ ವಯಸ್ಸಿಗೆ ತಕ್ಕಂತೆ ತೂಕವಿರಬೇಕು.
* ಆಹಾರದಲ್ಲಿ ಹೆಚ್ಚಿನ ಉಪ್ಪು ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು.
* ಆಲ್ಕೋಹಾಲ್ ಹಾಗೂ ಧೂಮಪಾನವನ್ನು ಮಾಡಬಾರದು.
* ತಂಪು ಪಾನೀಯಗಳನ್ನು ಕುಡಿಯಬಾರದು.

Comments are closed.