ಕರಾವಳಿ

ಹೆತ್ತವರು ಮಕ್ಕಳಿಗೆ ಕೊಡಿಸಲೇಬೇಕಾದ 7 ಮುಖ್ಯ ಲಸಿಕೆಗಳು

Pinterest LinkedIn Tumblr

ಅಮ್ಮನ ಪ್ರೀತಿ ಮತ್ತು ಕಾಳಜಿಯ ನಂತರ ಮಗುವಿಗೆ ಬೇಕಿರುವ ಇನ್ನೊಂದು ಅತ್ಯಂತ ಮುಖ್ಯವಾದ ವಸ್ತು ಎಂದರೆ ಅದು ಲಸಿಕೆಗಳು. ಮಗುವಾದ ಮೊದಲ ಕೆಲವು ತಿಂಗಳುಗಳು ನೀವು ಅದಕ್ಕೆ ಲಸಿಕೆ ನೀಡಿಸಲು ಆಸ್ಪತ್ರೆಗೆ ಸುತ್ತುತ್ತಲೇ ಇರಬೇಕಾಗುತ್ತದೆ. ನಾವು ಚಿಕ್ಕವರಿದ್ದಾಗ ಚುಚ್ಚುಮದ್ದು ಕೊಡಿಸಿಕೊಳ್ಳಬೇಕು ಎಂದರೆ ಎಷ್ಟು ಹೆದರುತ್ತಿದೆವು ಅನ್ನುವುದು ಇನ್ನೂ ನೆನಪಿದೆ. ದೇಹವೆಲ್ಲಾ ಬೆಚ್ಚಗಾಗುವುದು, ಚುಚ್ಚಿದ ಜಾಗ ನೋವಾಗುವುದು, ನೋವಲ್ಲಿ ಕಿರುಚುತ್ತಿದ್ದೆವು. ಆದರೆ ಅದೆಲ್ಲವೂ ತಾತ್ಕಾಲಿಕ. ದೀರ್ಘಕಾಲದಲ್ಲಿ ಅರೋಗ್ಯ ಕಾಪಾಡಿಕೊಳ್ಳಲ್ಲು ಇವುಗಳೇ ಬೇಕಾಗಿರುವುದು.

ಲಸಿಕೆಗಳು ಮಗುವನ್ನು ರೋಗಗಳಿಂದ ದೂರ ಇಡುತ್ತವೆ. ಹೀಗಾಗಿ, ಇವು ಮಕ್ಕಳಿಗೆ ತುಂಬಾನೇ ಮುಖ್ಯ. ವೈದ್ಯಕೀಯ ಲೋಕದಲ್ಲಿ ಆಗಿರುವ ಬೆಳವಣಿಗೆಗಳಿಗೆ ನಾವೆಲ್ಲಾ ಆಭಾರಿ ಆಗಿರಬೇಕು. ಅದರ ಕಾರಣವೇ ನಾವು ಈಗ ಪೋಲಿಯೊ ಅಥವಾ ಡಿಪಿಥೇರಿಯಾ ಅಂತಹ ಕಾಯಿಲೆಗಳನ್ನು ನಾವು ಅಷ್ಟಾಗಿ ಕಾಣುವುದಿಲ್ಲ.

ಈ ಕೆಳಗಿರುವು ಲಸಿಕೆಗಳೇ ನಿಮ್ಮ ಮಗುವಿಗೆ ಕೊಡಿಸಲೇಬೇಕಾದ ಲಸಿಕೆಗಳು :
1. ಬಿ.ಸಿ.ಜಿ (BCG)
ಈ ಲಸಿಕೆಯು ನಿಮ್ಮ ಮಗುವಿಗೆ ಟ್ಯೂಬರ್ಕ್ಯುಲೋಸಿಸ್ (ಕ್ಷಯ ರೋಗ) ಇಂದ ರಕ್ಷಣೆ ನೀಡುತ್ತದೆ ಮತ್ತು ಇದು ನಿಮಗೆ ಸುಮಾರು 15-20 ವರ್ಷಗಳವರೆಗೆ ಪ್ರತಿರಕ್ಷಣಾ ಶಕ್ತಿ ನೀಡುತ್ತದೆ.

2. ಪೋಲಿಯೊ ಲಸಿಕೆ
ಪೋಲಿಯೊ ಲಸಿಕೆಯ ಶಿಬಿರದಲ್ಲಿ ಹೇಳುವಂತೆಯೇ “ಕೇವಲ 2 ಹನಿಗಳು, ನಿಮ್ಮ ಮಗುವಿನ ಜೀವನ ಬೆಳಗಿಸುತ್ತವೆ”, ಈ ಎರಡು ಹನಿಗಳಷ್ಟು ಲಸಿಕೆ ಮುಂದೆ ನಿಮ್ಮ ಮಗುವು ಪೋಲಿಯೊ ಕಾಯಿಲೆಯಿಂದ ಬಳಲುವುದನ್ನು ತಪ್ಪಿಸುತ್ತದೆ.

ನೀವು ಈ ವಯಸ್ಸಿಗೆ ಲಸಿಕೆ ಹಾಕಿಸಬೇಕು :
ಎರಡು ಹನಿಗಳಷ್ಟು ಲಸಿಕೆ ಪ್ರತಿ 2 ತಿಂಗಳು ವಯಸ್ಸಾಗಿದ್ದಾಗ ಒಮ್ಮೆ,4 ತಿಂಗಳು ವಯಸ್ಸಾಗಿದ್ದಾಗ ಒಮ್ಮೆ,6-18 ತಿಂಗಳು ವಯಸ್ಸಾಗಿದ್ದಾಗ ಒಮ್ಮೆ,4-6 ತಿಂಗಳು ವಯಸ್ಸಾಗಿದ್ದಾಗ ಒಮ್ಮೆ

3. ಡಿ.ಪಿ.ಟಿ (DPT)
ಈ ಲಸಿಕೆಯು ಮಗುವಿಗೆ ಡಿಪಿಥೇರಿಯಾ, ಪೆರ್ಟುಸಿಸ್, ಟೆಟಾನೂಸ್ ಮತ್ತು ಕೆಮ್ಮಿನಿಂದ ರಕ್ಷಣೆ ನೀಡುತ್ತದೆ. ಇದನ್ನು ನೀವು ಮಗುವು ಒಂದೂವರೆ ತಿಂಗಳು/ಎರಡೂವರೆ ತಿಂಗಳು/ಮೂರುವರೆ ತಿಂಗಳು ಇದ್ದಾಗ ಒಮ್ಮೆ ಕೊಡಿಸಬೇಕು. ಎರಡನೇ ಡೋಸ್ ಅನ್ನು ಮಗುವಿಗೆ ಒಂದೂವರೆ ವರ್ಷ ಆದಾಗ ಕೊಡಿಸಬೇಕು. ಟೆಟಾನಸ್ ಇಂಜೆಕ್ಷನ್ ಅನ್ನು ಪ್ರತಿ 10 ವರ್ಷಕ್ಕೊಮೆ ಕೊಡಿಸಬೇಕಾಗುತ್ತದೆ.

4. ಹೆಪಟೈಟಿಸ್ A
ಇದು ನಿಮ್ಮ ಮಗುವು ಹೆಪಟೈಟಿಸ್ A ಕಾಯಿಲೆಗೆ ತುತ್ತಾಗುವುದರಿಂದ ತಡೆಯುತ್ತದೆ. ಮೊದಲ ಡೋಸ್ ಅನ್ನು ಮಗುವು 12-23 ತಿಂಗಳಷ್ಟು ವಯಸ್ಸು ಹೊಂದಿದ್ದಾಗ ಕೊಡಿಸಬೇಕು ಮತ್ತು ಎರಡನೇ ಡೋಸ್ ಅನ್ನು ಮೊದಲ ಡೋಸ್ ಕೊಡಿಸಿದ ನಂತರ 6-18 ತಿಂಗಳ ಒಳಗೆ ಕೊಡಿಸಬೇಕು.

5 ಹೆಪಟೈಟಿಸ್ B
ಇದರ ಒಂದು ಡೋಸ್ ಅನ್ನು ಮಗುವು ಹುಟ್ಟಿದೊಡನೆ ಕೊಡಲಾಗುತ್ತದೆ. ನಂತರ ಇದನ್ನು ಮಗು ಜನಿಸಿದ 6,10,12 ಮತ್ತು 24 ವಾರಗಳ ಕೊನೆಯಲ್ಲಿ ಒಂದೊಂದಾಗಿ ಕೊಡಲಾಗುತ್ತದೆ.

6. ರೋಟಾವೈರಸ್
ಇದು ಕೂಡ ನುಂಗಿಸುವಂತಹ ಲಸಿಕೆ. ಇದು ನಿಮ್ಮ ಮಗುವಿಗೆ ವಾಂತಿ, ಬೇಧಿ ಮತ್ತು ಹೊಟ್ಟೆನೋವಿನ ವಿರುದ್ಧ ರಕ್ಷಣೆ ನೀಡುತ್ತದೆ. ಇದರ ಮೊದಲ ಡೋಸ್ ಅನ್ನು ಮಗುವಿಗೆ 2 ತಿಂಗಳು ತುಂಬಿದಾಗ, ಎರಡನೇ ಡೋಸ್ ಅನ್ನು 4 ತಿಂಗಳು ತುಂಬಿದಾಗ, ಮೂರನೇ ಡೋಸ್ ಅನ್ನು 6 ತಿಂಗಳು ತುಂಬಿದಾಗ ಕೊಡಿಸಲಾಗುತ್ತದೆ.

7. ಎಂ.ಎಂ.ಆರ್ (MMR)
ಇದು ನಿಮ್ಮ ಮಗುವಿಗೆ ಮೀಸಲ್ಸ್ (ದಡಾರ), ಮಂಪ್ಸ್ ಮತ್ತು ರುಬೆಲ್ಲಾ ಇಂದ ರಕ್ಷಣೆ ನೀಡುತ್ತದೆ. ಇದರ ಮೊದಲ ಡೋಸ್ ಅನ್ನು ಮಗುವಿಗೆ 9 ತಿಂಗಳು ತುಂಬಿದಾಗ ನೀಡಲಾಗುತ್ತದೆ ಮತ್ತು ಎರಡನೇ ಡೋಸ್ ಅನ್ನು ಮಗುವಿಗೆ 12-15 ತಿಂಗಳಷ್ಟು ವಯಸ್ಸಾದಾಗ ನೀಡಲಾಗುತ್ತದೆ.

Comments are closed.