ಕರಾವಳಿ

ಕುಂಪಲ ಬಾಲಕೃಷ್ಣ ಮಂದಿರದ ಪ್ರತಿಷ್ಟಾ ಮಹೋತ್ಸವ : ಆತ್ಲೆಟಿಕ್ ಕ್ರೀಡಾಪಟುಗಳಿಗೆ ಗೌರವ ಸನ್ಮಾನ

Pinterest LinkedIn Tumblr

kumpala_atletics_sanmana

ಮಂಗಳೂರು : ಮನಸ್ಸಿನ ಏಕಾಗ್ರತೆ, ಮಾನಸಿಕ ಅಸಮೋತಲನ ನಿವಾರಿಸಲು ಭಗವಂತನ ನಾಮಸ್ಮರಣೆ ಏಕೈಕ ಮಾರ್ಗ, ದೈವೀಕ ಕಾರ್ಯಗಳನ್ನು ನಡೆಸುವುದರಿಂದ ಊರಿನ ಜನರನ್ನು ಸಾಮೂಹಿಕವಾಗಿ ಒಗ್ಗಟ್ಟು ಮತ್ತು ಸಾಂಸ್ಕ್ರತಿಕವಾಗಿಯೂ ಗುರುತಿಸಲು ಅವಕಾಶ ನೀಡಿದಂತಾಗುತ್ತದೆ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಹಲವಾರು ಜನರಿಗೆ ನಾಯಕತ್ವಕ್ಕೆ ಆಡಿಪಾಯ ಕೊಟ್ಟ ಬಾಲಕೃಷ್ಣ ಮಂದಿರ ಇನ್ನಷ್ಟು ಬೆಳೆಯಲಿ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯ ಪಟ್ಟರು.

ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ 9 ನೇ ವರ್ಷದ ಏಕಾಹ ಭಜನೆ, ಪ್ರತಿಷ್ಟಾ ಮಹೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೀಪ ಪ್ರಜ್ವಲನೆಯನ್ನು ಕೊಲ್ಯ ನಾಗಮಂಡಲೋತ್ಸವದ ಧರ್ಮದರ್ಶಿ ಭಾಸ್ಕರ ಐತಳ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಕೇಶವ ಶಿಶು ಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ, ಜಾಗೃತ ವಿವಿದ್ದೋದೇಶ ಸಹಕಾರಿ ಸಂಘದ ನಿರ್ದೇಶಕ ಪ್ರೇಮ್‌ನಾಥ ಪುತ್ರನ್, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ತುಂಬೆ, ಉದ್ಯಮಿ ಜೀವನ್ ಪೂಜಾರಿ ಬೋಳಾರ, ಮಂದಿರದ ಮಹಾಪೋಷಕ ಕೇಶವದಾಸ್ ಬಗಂಬಿಲ, ಅಧ್ಯಕ್ಷರಾದ ಸತೀಶ್ ಕುಂಪಲ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ನಳಿನಿ ಕುಶಾಲಪ್ಪ, ಅಶೋಕ್.ಕೆ, ವಿಶ್ವಾಸ್ ಕುಲಾಲ್ ಉಪಸ್ಥಿತರಿದ್ದರು.

ಆತ್ಲೆಟಿಕ್ ಕ್ರೀಡಾಪಟುಗಳಿಗೆ ಗೌರವ ಸನ್ಮಾನ :
ಈ ಸಂದರ್ಬದಲ್ಲಿ ಅಂತರಾಷ್ಟ್ರೀಯ ಆತ್ಲೆಟಿಕ್ ಕ್ರೀಡಾಪಟು ಲಲಿತಾ ಜಯರಾಮ್, ತಾಲೂಕು ಪಂಚಾಯತ್ ಸದಸ್ಯರುಗಳಾದ ರಾಮಚಂದ್ರ ಕುಂಪಲ, ರವಿಶಂಕರ ಸೋಮೇಶ್ವರ, ಜಿಲ್ಲಾಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಇವರನ್ನು ಅಭಿನಂದಿಸಲಾಯಿತು.

ಭಜನಾ ಸಂಚಾಲಕ ಸಂಜೀವ ಕುಲಾಲ್ ಸ್ವಾಗತಿಸಿದರು, ಪ್ರಧಾನ ಸಂಘಟನಾ ಕಾರ್ಯದರ್ಶಿ ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಆನಂದ ಎನ್. ವಂದಿಸಿದರು.

Comments are closed.