ಮಂಗಳೂರು : ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ – ನಿರ್ದೇಶಕ ಶ್ರೀ ಹೆಚ್. ಶ್ರೀಧರ ಹಂದೆಯವರನ್ನು, ಮೊಡಂಕಾಪು ದೀಪಿಕಾ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ. ಎಂ.ಪಿ. ಪ್ರಭಾಕರ ಜೋಶಿ, ಫಾ| ಎಲ್. ಮ್ಯಾಕ್ಸಿಂ ನೊರೊನ್ಹಾ, ವಾಲ್ಟರ್ ಡಿ’ಮೆಲ್ಲೊ, ಜನಾರ್ದನ ಹಂದೆ, ಮೋಹನ ರಾವ್, ಮಹಾಬಲೇಶ್ವರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಕೀರ್ತಿ ಶೇಷ ಕಾರ್ಕಡ ಶ್ರೀನಿವಾಸ ಉಡುಪರ ಸಂಸ್ಮರಣೆ ಹಾಗೂ ಮೇಳದ ‘ವೀರ ವೃಷಸೇನ’ ಬಯಲಾಟ ನಡೆಯಿತು.