ಕರಾವಳಿ

ಉಡುಪಿ : ರೌಡಿ ಶೀಟರ್ ವರ್ವಾಡಿ ಪ್ರವೀಣ್ ಹಾಡುಹಗಲೇ ಭೀಕರ ಹತ್ಯೆ

Pinterest LinkedIn Tumblr

prveen-kullal_murder_1

ಉಡುಪಿ, ಡಿ.19: ರೌಡಿ ಶೀಟರ್ ವರ್ವಾಡಿ ಪ್ರವೀಣ್ ಕುಲಾಲ್(32) ನನ್ನು ಇಂದು ಮಧ್ಯಾಹ್ನ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಕೋಟನಕಟ್ಟೆಯಲ್ಲಿ ಬಾರ್ ನಲ್ಲಿ ಕುಡಿದು ಗಲಾಟೆ ಮಾಡಿ ಹೊರನಡೆಯುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರವೀಣ್ ನನ್ನುತಲವಾರ್ ನಿಂದ ಕಡಿದು ಪರಾರಿಯಾಗಿದ್ದಾರೆ.

prveen-kullal_murder_2

ಹಳೆವೈಶ್ಯಮದಿಂದ ಹತ್ಯೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಪ್ರವೀಣ್ ಕೊಲೆ, ವಸೂಲಿ, ಧಮ್ಕಿ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ಹೇಳಲಾಗಿದೆ. ಸ್ಥಳಕ್ಕೆ ಎಸ್ಪಿ ಕೆ.ಟಿ ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Comments are closed.