ಕರಾವಳಿ

‘ಆಪರೇಶನ್ ಚೀತಾ’; ಆಹಾರಕ್ಕಾಗಿ ಬಂದು ಉರುಳಿಗೆ ಬಿದ್ದ ಚಿರತೆಯ ರಕ್ಷಣೆ

Pinterest LinkedIn Tumblr

ಕುಂದಾಪುರ: ಹೆಚ್ಚುತ್ತಿರುವ ಕಾಂಕ್ರಿಟ್ ಕಾಡುಗಳಿಂದ ನೈಸರ್ಗಿಕ ಕಾಡುಗಳು ನಾಶವಾಗುತ್ತಿದೆ. ಇದ್ರಿಂದ ಕಾಡಲ್ಲಿರಬೇಕಾದ ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವ ಉದಾಹರಣೆಗಳು ವರದಿಯಾಗುತ್ತಲೇ ಇವೆ. ಕುಂದಾಪುರದ ಗ್ರಾಮೀಣ ಭಾಗದಲ್ಲಿ ವನ್ಯಜೀವಿಗಳ ಕಾಟ ಸಿಕ್ಕಾಪಟ್ಟೆ ಜಾಸ್ಥಿಯಾಗಿದೆ. ಕುಂದಾಪುರದ ಹಟ್ಟಿಯಂದ್ಗಡಿ ಸಮೀಪದ ಕನ್ಯಾಣ ಭಾಗಕ್ಕೆ ಆಹಾರವನ್ನು ಅರಸಿಬಂದ ಚಿರತೆಯೊಂದು ಉರುಳಿಗೆ ಬಿದ್ದು ಮಾಡಿದ ಪಜೀತಿ ಅಷ್ಟಿಷ್ಟಲ್ಲ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

kundapura_operation_cheetha-2 kundapura_operation_cheetha-4 kundapura_operation_cheetha-3

kundapura_operation_cheetha-14 kundapura_operation_cheetha-13 kundapura_operation_cheetha-15 kundapura_operation_cheetha-11 kundapura_operation_cheetha-17 kundapura_operation_cheetha-21 kundapura_operation_cheetha-20 kundapura_operation_cheetha-19 kundapura_operation_cheetha-10 kundapura_operation_cheetha-9 kundapura_operation_cheetha-8 kundapura_operation_cheetha-7 kundapura_operation_cheetha-23 kundapura_operation_cheetha-24 kundapura_operation_cheetha-26 kundapura_operation_cheetha-18 kundapura_operation_cheetha-27 kundapura_operation_cheetha-22 kundapura_operation_cheetha-12 kundapura_operation_cheetha-16 kundapura_operation_cheetha-2 kundapura_operation_cheetha-4 kundapura_operation_cheetha-3 kundapura_operation_cheetha-5 kundapura_operation_cheetha-1 kundapura_operation_cheetha-6 kundapura_operation_cheetha-25

kundapura_operation_cheetha-5

ಕುಂದಾಪುರದಲ್ಲಿ ಇತ್ತಿಚ್ಚೇಗೆ ಕಾಡು ಪ್ರಾಣಿಗಳ ಹಾವಳಿ ತುಂಬಾನೇ ಹೆಚ್ಚಾಗಿದೆ. ಕಾಡು ಪ್ರಾಣಿಗಳು ಕಾಡನ್ನು ಬಿಟ್ಟು ನಾಡನ್ನು ಸೇರುತ್ತಿವೆ . ಕಾಡಿನಲ್ಲಿ ಆಹಾರಗಳು ಸಿಗದಿದ್ದಾಗ ತನ್ನ ಆಹಾರವನ್ನು ಹುಡುಕಿಕೊಂಡು ನಾಡಿಗೆ ಬರುತ್ತಿರುದು ಸಾಮಾನ್ಯವಾಗಿದೆ. ಜನರ ಸಾಕು ಪ್ರಾಣಿಗಳಾದ ದನ ಕರುಗಳು ನಾಯಿ ಕೋಳಿಗಳು ಇಂದು ವನ್ಯಜೀವಿಗಳ ಆಹಾರವಾಗಿದೆ . ಕಾಡು ಪ್ರದೇಶದಲ್ಲಿ ಇರುವ ಮನೆಗಳಿಗೆ ಕಾಡು ಪ್ರಾಣಿಗಳು ನಿರಂತವಾಗಿ ತನ್ನ ಆಹಾರವನ್ನು ಹುಡುಕಿಕೊಂಡು ಬೇಟಿ ನೀಡುತ್ತಿರುವುದು ಸಾಮನ್ಯವಾಗಿದೆ. ಅಂತೆಯೇ ಹಟ್ಟಿಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕನ್ಯಾಣದ ಬಾಡಬೆಟ್ಟು ಎಂಬಲ್ಲಿಗೆ ಆಹಾರವನ್ನರಿಸಿ ಬಂದ ಚಿರತೆಯೊಂದು ಉರುಳಿಗೆ ಸಿಕ್ಕಿಬಿದ್ದಿದ್ದು ಭತ್ತ ಕಟಾವಿಗೆಂದು ಬಂದ ಜನರು ಅದನ್ನು ನೋಡಿ ಸ್ಥಳಿಯರಿಗೆ ಮಾಹಿತಿ ನೀಡಿದ್ರು. ಬಳಿಕ ಅರಣ್ಯ ಇಲಾಖೆಯವರು ಆಗಮಿಸಿ ಬೋನು ಹಾಗೂ ಬಲೆಯನ್ನು ತಂದು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ರು.

ಮಧ್ಯಾಹ್ನದ ಸುಮಾರಿಗೆ ಕಾಡು ಹಾಗೂ ಗ್ರಾಮದ ಅಂಚಿನ ಪೊದೆಯಲ್ಲಿ ಚಿರತೆ ಸಿಕ್ಕಿಬಿದ್ದಿದ್ದು ಗಮನಕ್ಕೆ ಬಂದಿದ್ದೇ ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ರು. ಎಲ್ಲರ ಮುಖದಲ್ಲಿಯೂ ತುಂಬಾನೇ ಆತಂಕ ಹಾಗೂ ಕುತೂಹಲ. ಅರಣ್ಯಾಧಿಕಾರಿಗಳು ತಂದ ಬಲೆಯೂ ಹೇಳುವಷ್ಟು ಗಟ್ಟಿಯಾಗಿರಲಿಲ್ಲ. ಅಲ್ಲಲ್ಲಿ ತೂತುಗಳಿದ್ದ ಬಲೆಯನ್ನು ಸರ್ವಜನಿಕರೇ ಸರಿಪಡಿಸಿ ಬೋನನ್ನು ಸಿದ್ದಪಡಿಸಿ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಯ ಸಮೀಪವಿಟ್ಟಿದ್ದಾರೆ. ಬಲೆಯನ್ನು ಚಿರತೆ ಮೇಲೆ ಎಸೆದು ಯಾವ ಕಡೆಯಿಂದಲೂ ಚಿರತೆ ತಪ್ಪಿಸಿಕೊಳ್ಳದಂತೆ ದಿಗ್ಬಂಧನ ಹಾಕಿ ಬಳಿಕ ಚಿರತೆಗೆ ಸಿಕ್ಕಿದ್ದ ಉರುಳನ್ನು ನಾಜೂಕಾಗಿ ಕತ್ತರಿಸಿದ್ದಾರೆ. ಒಂದೆಡೆ ಭಯಹಾಗೂ ಸಿಟ್ಟು ಇನ್ನೊಂದೆಡೆ ಆಯಾಸದಿಂದ ಬಳಲಿದ್ದ ಚಿರತೆ ಘರ್ಜನೆ ನೆರೆದವರಲ್ಲಿ ಆತಂಕವನ್ನು ಇನ್ನಷ್ಟು ಹುಟ್ಟುಹಾಕಿತ್ತು. ಸ್ಥಳಿಯರು, ಅರಣ್ಯ ಇಲಾಖೆಯವರು ಹಾಗೂ ಮೆಸ್ಕಾಂ ಇಲಾಖೆಯ ಹಲವರು ನಡೆಸಿದ ಸತತ ಮೂರು ಗಂಟೆ ಕಾರ್ಯಾಚರಣೆ ಮೂಲಕ ಅಂತೂ ಇಂತೂ ಚೀತಾ ಬೋನಿಗೆ ಸುರಕ್ಷಿತವಾಗಿ ಬಿದ್ದಿತ್ತು. ಅದನ್ನು ನೋಡಲು ಜನರು ಮುಗಿಬಿದ್ರು, ಮಾತ್ರವಲ್ಲದೇ ಮೊಬೈಲುಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ್ರು. ಆದರೇ ಅರಣ್ಯ ಇಲಾಖೆಯವರ ಬಳಿ ಚಿರತೆ ರಕ್ಷಣೆ ಅಥವಾ ಬೇರ್ಯಾವುದೇ ಕಾಡು ಪ್ರಾಣಿ ಹಿಡಿಯಲು ಬೇಕಾದ ಕೆಲವೊಂದು ಉಪಯೋಗಕಾರಿ ಪರಿಕರಗಳಿಲ್ಲದಿರುವುದು ನೆರೆದವರಲ್ಲಿ ಅಸಮಾಧಾನವನ್ನುಂಟು ಮಾಡಿತ್ತು.

ಅರಣ್ಯದಲ್ಲಿ ತಮ್ಮ ಆಹಾದಲ್ಲಿ ಕೋರತೆ ಉಂಟಾದಗ ತನ್ನ ಆಹಾರಕ್ಕಾಗಿ ವನ್ಯ ಜೀವಿಗಳು ನಾಡಿನತ್ತ ಪ್ರಯಾಣ ಬೆಳೆಸುತ್ತವೆ. ನಾಡಿಗೆ ಬಂದರೂ ಅವುಗಳಿಗೆ ಸುರಕ್ಷತೆ ಮಾತ್ರ ಇಲ್ಲ. ಹೀಗೆ ಅಪಾಯಕ್ಕೆ ಸಿಲುಕಿದ ಚಿರತೆಯೊಂದು ಅದ್ರಷ್ಟವಶಾತ್ ಪಾರಾಗಿದ್ದು ಸುರಕ್ಷಿತ ಸ್ಥಳಕ್ಕೆ ತಲುಪಿದ್ದು ಮಾತ್ರ ನಿಜಕ್ಕೂ ಉತ್ತಮ ಸಂಗತಿಯಾಗಿದೆ.

‘ಆಪರೇಶನ್ ಚೀತಾ’ದಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಬ್ರಿಜೇಶ್ ವಿನಯಕುಮಾರ್, ಕುಂದಾಪುರ ಉಪವಲಯ ಅರಣ್ಯಾಧಿಕಾರಿಗಳಾದ ದಿಲೀಪ್ ಕುಮಾರ್, ಹೇಮಾ, ಗುರುರಾಜ್ ಕಾವ್ರಾಡಿ, ಅರಣ್ಯ ರಕ್ಷಕರಾದ ಶಿವಕುಮಾರ್, ಸಿಬ್ಬಂದಿಗಳಾದ ಉದಯ್, ಅಶೋಕ್, ಹಟ್ಟಿಯಂಗಡಿ ಗ್ರಾಮಪಂಚಾಯತ್ ಅಧ್ಯಕ್ಷ ರಾಜೀವ್ ಶೆಟ್ಟಿ, ಸದಸ್ಯ ಉದಯಕುಮಾರ್, ಸ್ಥಳೀಯ ಹತ್ತು ಹಲವರು, ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಿದ್ದರು.

ಚಿತ್ರ ಮತ್ತು ವರದಿ- ಯೋಗೀಶ್ ಕುಂಭಾಸಿ

Comments are closed.