ಮನೋರಂಜನೆ

ನಟಿ ರಾಖಿ ಸಾವಂತ್ ತುಂಡುಡುಗೆ ಮೇಲೆ ಪ್ರಧಾನಿ ಮೋದಿ ಚಿತ್ರ: ದಾಖಲಾಯಿತು ಎಫ್ಐಆರ್

Pinterest LinkedIn Tumblr

rakhi-main

ಜೈಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಬಟ್ಟೆಯನ್ನು ತೊಟ್ಟ ಕಾರಣಕ್ಕೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ನಟಿ ರಾಖಿ ಸಾವಂತ್ ಅವರು ಅಮೆರಿಕಾ ಪ್ರವಾಸಕ್ಕೆ ತೆರಳಿದ್ದರು. ಅಮೆರಿದಲ್ಲಿರುವ ನೆಲೆಯೂರಿರುವ ಭಾರತೀಯರು ಸ್ವಾತಂತ್ರ್ಯದಿನದ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಖಿ ಸಾವಂತ್ ಅವರು ಕಪ್ಪು ಬಣ್ಣದ ತುಂಡುಡುಗೆಯನ್ನು ಧರಿಸಿದ್ದರು.

ಈ ಬಟ್ಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಕೆ ಮಾಡಲಾಗಿತ್ತು. ಮೋದಿಯವರ ಭಾವಚಿತ್ರವನ್ನು ಬಳಸಿಕೊಂಡು ವಿನ್ಯಾಸ ಮಾಡಲಾಗಿದ್ದ ಈ ಬಟ್ಟೆಯನ್ನು ರಾಖಿ ಸಾವಂತ್ ಅವರು ತೊಟ್ಟಿದ್ದರು. ಇದರ ಫೋಟೋವನ್ನು ರಾಖಿ ಸಾವಂತ್ ಅವರು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಈಗಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಫೋಟೋ ವಿರೋಧ ವ್ಯಕ್ತಪಡಿಸಿದ್ದ ವಕೀಲ ಪ್ರಜೀತ್ ತಿವಾರಿ ಎಂಬುವವರು ನಿನ್ನೆಯಷ್ಟೇ ಕಂಕ್ರೊಲಿ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದರು. ದೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಉಡುಪವನ್ನು ರಾಖಿ ಸಾವಂತ್ ಅವರು ಧರಿಸಿದ್ದು, ತುಂಡುಡುಗೆಯ ಮೇಲೆ ಮೋದಿಯವರ ಭಾವಚಿತ್ರಗಳಿವೆ. ಈ ಬಟ್ಟೆಯನ್ನು ರಾಖಿ ಸಾವಂತ್ ಅವರು ಧರಿಸಿದ್ದು, ಮೋದಿಯವರಿಗೆ ಅವಮಾನ ಮಾಡಿದ್ದಾರೆಂದು ಹೇಳಿದ್ದರು.

ರಾಖಿ ಸಾವಂತ್ ಅವರ ವಿರುದ್ಧ ಮುಂಬೈ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿದ್ದು, ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.

Comments are closed.