
ಬೆಂಗಳೂರು: ನಟಿ ಮಾಳವಿಕಾ ಹಾಗು ಕಾವ್ಯ ಅವರಿಂದ ಪ್ರಚೋದನೆಗೊಂಡ ಸಂಜನಾ ನಿನ್ನೆ ಬಿಗ್‌ಬಾಸ್ ಮನೆಯಲ್ಲಿ ಒಳ್ಳೆ ಹುಡುಗ ಪ್ರಥಮ್ ಮೇಲೆ ಕೈ ಮಾಡಿ ಸುದ್ದಿಯಾಗಿದ್ದಾಳೆ.

ಲಕ್ಸುರಿ ಬಜೆಟ್ ಕೈತಪ್ಪಿದ ಕಾರಣ ಬಿಗ್‌ಬಾಸ್ 2 ಟಾಸ್ಕ್‌ಗಳನ್ನ ಮನೆಯ ಸದಸ್ಯರಿಗೆ ನೀಡಿದ್ದರು. ಒಂದು ಡ್ಯಾನ್ಸಿಂಗ್ ಸ್ಟಾರ್ ಮತ್ತೊಂದು ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಡ್ಯಾನ್ಸಿಂಗ್ ಸ್ಟಾರ್ ಚಟುವಟಿಕೆಯ ಅನುಸಾರ ಚಿತ್ರಗೀತೆಯೊಂದು ಪ್ಲೇ ಆದತಕ್ಷಣ ಒಬ್ಬೊಬ್ಬ ಸ್ಪರ್ಧಿ ಬಂದು ಪುಟ್ಟ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಬೇಕಾಗಿತ್ತು.
ಒಂದೇ ಸಂದರ್ಭದಲ್ಲಿ ಎರಡು ಚಿತ್ರಗೀತೆಗಳು ಪ್ರಾರಂಭವಾದಾಗ ಇಬ್ಬರು ಸದಸ್ಯರು ಒಟ್ಟಿಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಬೇಕಿತ್ತು. ಆಗ ಸಂಜನಾ ಮತ್ತು ಪ್ರಥಮ್ ಒಂದೇ ವೇದಿಕೆಯ ಮೇಲೆ ಎರಡು ಬಾರಿ ಎದುರಾದರು. ಎರಡೂ ಸಮಯದಲ್ಲಿ ಸಂಜನಾ, ಪ್ರಥಮ್ ಜೊತೆ ಕಿರಿಕ್ ಮಾಡಿಕೊಂಡರು. ಒಂದು ಸಾರಿ ಪ್ರಥಮ್‌ಗೆ ಒದೆಯುವ ರೀತಿಯಲ್ಲಿ ಆ್ಯಕ್ಷನ್ ಮಾಡಿದರೆ ಮತ್ತೊಮ್ಮೆ ಜೋರಾಗಿ ಪ್ರಥಮ್ ಎದೆಗೆ ಮೊಣಕೈಯಿಂದ ಹೊಡೆದರು. ಈ ವೇಳೆ ಒಮ್ಮೆಗೆ ಡ್ಯಾನ್ಸ್ ನಿಲ್ಲಿಸಿದ ಪ್ರಥಮ್, ಬಳಿಕ ಜೋರಾಗಿ ಡ್ಯಾನ್ಸ್ ಮಾಡಿ ಕೈಯನ್ನು ಸಂಜನಾಳ ತಲೆಗೆ ತಾಗಿಸಿ ತನ್ನ ಸಿಟ್ಟನ್ನು ವ್ಯಕ್ತ ಪಡಿಸಿದರು.
ಇದಕ್ಕೂ ಮೊದಲು ವೇದಿಕೆ ಮೇಲೆ ಡ್ಯಾನ್ಸ್ ಮಾಡುವಾಗ ಪ್ರಥಮ್’ನ ಡ್ಯಾನ್ಸ್ ಸಂಜನಾಳಿಗೆ ಇರಿಸುಮುರಿಸು ತಂದಿತ್ತು. ಈ ವೇಳೆ ಮನೆಯ ಹಿರಿಯರಾದ ಮಾಳವಿಕಾ ಹಾಗು ಕಾವ್ಯ ನೆಕ್ಸ್ ಟೆಮ್ ಅದೇ ರೀತಿ ಮಾಡಿದರೆ ಹೊಡೆಯುವಂತೆ ಸಂಜನಾಗೆ ಹೇಳಿಕೊಡುತ್ತಾರೆ. ಹಾಗೇಯೇ ಸಂಜನಾ ಪ್ರಥಮ್ ಎದೆಗೆ ಮೊಣಕೈಯಿಂದ ಹೊಡೆದಿದ್ದಾರೆ.
Comments are closed.