ಕರಾವಳಿ

ಸಿ.ಸಿ.ಬಿ ಮತ್ತು ಪಾಂಡೇಶ್ವರ್ ಪೊಲೀಸರ ಕಾರ್ಯಾಚರಣೆ : 2 ಕಡೆಗಳಲ್ಲಿ ಮಟ್ಕಾ ದಾಳಿ – ಐವರ ಬಂಧನ – ನಗದು ವಶ

Pinterest LinkedIn Tumblr

arrest_crime_news

ಮಂಗಳೂರು, ಜು. 29: ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಹಾಗೂ ಸಿಸಿಬಿ ಪೊಲೀಸ್ ತಂಡ ನಡೆಸಿದ ಎರಡು ಪ್ರತ್ಯೇಕವಾಗಿ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಆಟದಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 90 ಸಾವಿರ ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ನಾಗುರಿ ಬಸ್ ಸ್ಟಾಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಎಂಬ ಅದೃಷ್ಠದ ಆಟವಾಡುತ್ತಿದ್ದ 4 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 27ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಬಸ್ ಸ್ಟಾಂಡ್ ಬಳಿಯಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಅದೃಷ್ಠದ ಆಟವಾದ ಮಟ್ಕಾವನ್ನು ಆಡುತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ವರ್ತಮಾನದಂತೆ ಮಟ್ಕಾ ಆಟವನ್ನು ನಡೆಸುತ್ತಿದ್ದ ನಾಗುರಿಯ ನಿವಾಸಿಗಳಾದ ಎಂ. ಜಯರಾಮ ಶೆಟ್ಟಿ (49), ರಿತೇಶ್ (35), ಕಂಕನಾಡಿಯ ಬಿಪಿನ್ ಸಾಲ್ಯಾನ್ (50), ನಾಗುರಿಯ ಕೀರ್ತನ್ ಕರ್ಕೇರಾ (31) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ 9ರೂ. 90,900/-, 3 ಮೊಬೈಲ್ ಫೋನ್ ಗಳು ಹಾಗೂ ಮಟ್ಕಾ ಬರೆಯುವ ಚೀಟಿಯನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್ ಕಾರ್ಯಾಚರಣೆ ನಡೆಸಿದ್ದರು.

ಪಾಂಡೇಶ್ವರ್ ಪೊಲೀಸರ ದಾಳಿ :

ನಗರದ ನಿರೇಶ್ವಾಲ್ಯ ಜಂಕ್ಷನ್ ಕಡೆಯಿಂದ ಹೊಗೆ ಬಜಾರ್ ಕಡೆಗೆ ಹೋಗುವ ಗೂಡ್ ಶೆಡ್ಡೆ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ಲಾರಿಗಳು ನಿಲ್ಲುವ (ಯಾರ್ಡ್) ಸಾರ್ವಜನಿಕ ಸ್ಥಳದಲ್ಲಿ ನಂಬರಿನ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ದಕ್ಷಿಣ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಜುಲೈ 28ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ ಯು ಇವರಿಗೆ ನಗರದ ನಿರೇಶ್ವಾಲ್ಯ ಜಂಕ್ಷನ್ ಕಡೆಯಿಂದ ಹೊಯ್ಗೆ ಬಜಾರ್ ಕಡೆಗೆ ಹೋಗುವ ಗೂಡ್ ಶೆಡ್ಡೆ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ಲಾರಿಗಳು ನಿಲ್ಲುವ (ಯಾರ್ಡ್) ಸಾರ್ವಜನಿಕ ಸ್ಥಳದಲ್ಲಿ ನಂಬರಿನ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಅದೃಷ್ಟದ ಆಟವಾದ ಮಟ್ಕಾ ಜೂಜಾಟ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾಳಿ ನಡೆಸಿ, ಈ ಸಂದರ್ಭದಲ್ಲಿ ಮಟ್ಕಾದಲ್ಲಿ ನಿರತನಾಗಿದ್ದ ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ಸೊತ್ತುಗಳನ್ನು ಸ್ವಾಧೀನಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ಗೂಡುಶೆಡ್ಡೆಯ ನಿವಾಸಿ ಶಿವಾನಂದ ಶ್ಯಾನುಬೋಗ್ (53) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ ಮಟ್ಕ ಜೂಜಾಟಕ್ಕೆ ಬಳಿಸಿಕೊಂಡಿರುವ ನಗದು ಹಣ 4,740/- ರೂ, ಮಟ್ಕಾ ನಂಬರನ್ನು ಬರೆದಿಟ್ಟುಕೊಳ್ಳುವ ಚೀಟಿ-1, ಪೆನ್ನು ಒಂದನ್ನು ಸ್ವಾಧೀನಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ದಕ್ಷಿಣ ಠಾಣೆ ಪೊಲೀಸ್ ಉಪ ನಿರೀಕ್ಷಕ ಅನಂತ ಮುರುಡೇಶ್ವರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Comments are closed.