ಕರಾವಳಿ

ವಿಮಾನದ ಅವಶೇಷಗಳು ಪತ್ತೆ : ಭಾರತೀಯ ನೌಕಾಪಡೆಗೆ ಮಾಹಿತಿ

Pinterest LinkedIn Tumblr

Flight_wings_Found

ಅಲಪ್ಪುಳ, ಜು.29: ಮಿಲಿಟರಿ ಏರ್ಕ್ರಾಪ್ ಗ್ರೂಪ್‌ಗೆ ಸೇರಿದೆ ಎನ್ನಲಾದ ವಿಮಾನದ ಅವಶೇಷಗಳು ಅಲಪ್ಪುಳ ಚೇತಿ ಬೀಚ್ ಸಮೀಪ ಗುರುವಾರ ಸಂಜೆ ಪತ್ತೆಯಾಗಿವೆ. ಸ್ಥಳದಲ್ಲಿ ವಿಮಾನದ ಎರಡು ರೆಕ್ಕೆಗಳು ಕಂಡು ಬಂದಿದ್ದೆ.

ಇದರಲ್ಲಿ ಇಸ್ರೇಲ್ ಇಂಡಸ್ಟ್ರೀಸ್ ಲಿಮಿಟೆಡ್, ಐಎಐ ಮಾಲತ್ ಡಿವಿಷನ್, ಮಿಲಿಟರಿ ಏರ್ಕ್ರಾಪ್ ಗ್ರೂಪ್ ಎಂಬ ಹೆಸರಿದೆ ಎಂದು ಮರಾರಿಕುಳಂ ವೃತ್ತನಿರೀಕ್ಷಕ ಉಮೇಶ್ ಕುಮಾರ್ ಪ್ರಕಟಿಸಿದ್ದಾರೆ.ಆದರೆ ಇದು ಯಾವ ವಿಮಾನದ ಅವಶೇಷಗಳು ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಪತ್ತೆಯಾದ ರೆಕ್ಕೆಗಳು ಎರಡು ಮೀಟರ್ ಉದ್ದವಿದ್ದು, ಸ್ಥಳೀಯ ಮೀನುಗಾರರು ಇದನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚೆರ್ತಾಲ ಡಿಎಸ್ಪಿ ಎಂ.ರಮೇಶ್ ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಾರತೀಯ ನೌಕಾಪಡೆಗೆ ಮಾಹಿತಿ ನೀಡಿದ್ದಾರೆ. ಈ ಅವಶೇಷಗಳನ್ನು ಅರ್ತುನ್ಕಲ್ ಠಾಣೆಗೆ ಸ್ಥಳಾಂತರಿಸಲಾಗಿದೆ.

ಕೊಚ್ಚಿನ್ನಿಂದ ಭಾರತೀಯ ನೌಕಾಪಡೆ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಚಿತ್ರಗಳನ್ನು ವಾಟ್ಸಾಪ್ನಲ್ಲಿ ಹಾಕಿದ್ದೇವೆ. ನೌಕಾಪಡೆ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿದ ಬಳಿಕ ವಿವರ ಲಭ್ಯವಾಗಲಿದೆ ಎಂದು ಪೊಲೀಸರು ಮಾಹಿತಿ ನಿಡೀದ್ದಾರೆ.

Comments are closed.