*ಯೋಗೀಶ್ ಕುಂಭಾಸಿ
ಕುಂದಾಪುರ: ತಾನು ಓದಿ, ವಿದ್ಯಾವಂತಳಾಗಿ ತನ್ನ ಬಡ ಕುಟುಂಬಕ್ಕೆ ಬೆನ್ನೆಲುಬಾಗಬೇಕೆಂಬ ಮಹಾದಾಸೆ ಹೊತ್ತ ಆ ಹೆಣ್ಮಗಳು ನಿತ್ಯ ದೂರದ ಕಾಲೇಜಿಗೆ ದುರ್ಗಮ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಿಬರುತ್ತಿದ್ದವಳು. ಆದರೇ ಅಂದು ಮಾತ್ರ ಕಾಲೇಜು ಮುಗಿಸಿ ಹೊರಟ ಆಕೆ ಮನೆಗೆ ಮರಳಿಲ್ಲ. ಸತತ ಹುಡುಕಾಟದ ಬಳಿಕ ಆಕೆ ಸಿಕ್ಕಿದ್ದು ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ.
ಉಡುಪಿ-ದ.ಕ. ಸೇರಿದಂತೆ ರಾಜ್ಯವನ್ನೇ ಬೆಚ್ಚಿಬೇಳಿಸಿದ ಈ ಪ್ರಕರಣ ನಡೆದು ಒಂದು ವರ್ಷವಾದ ಕರಾಳ ನೆನಪು.

(ಅಕ್ಷತಾ ದೇವಾಡಿಗ)
ಒಂದು ವರ್ಷದ ಹಿಂದೆ…….
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಒತ್ತಿನೆಣೆ ಸಮೀಪದ ಹೆನ್ನಬೇರು ಎಂಬ ಪುಟ್ಟ ಊರಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ. ೨೦೧೫ರ ಜೂ. ೧೭ ಬುಧವಾರ ತಾನೂ ಓದುತ್ತಿದ್ದ ಬೈಂದೂರು ಸರಕಾರಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ಈಕೆ ನಿಗೂಢವಾಗಿ ಕಾಣೆಯಾಗಿದ್ದಳು. ಈಗ ಬರಬಹುದು ಆಗ ಬರಬಹುದು ಎಂದು ಹವಣಿಸಿ ಕುಳಿತಿದ್ದ ಈ ಕುಟುಂಬಕ್ಕೆ ಕೊನೆಗೂ ಅಕ್ಷತಾ ಸಿಕ್ಕಿದ್ದು ಹೆಣವಾಗಿ. ಅದು ಮನೆ ಸಮೀಪದ ಅನತಿ ದೂರದ ಎಕೇಶಿಯಾ ಫ್ಲಾಂಟೇಶನಿನಲ್ಲಿ.
ತನ್ನ ಪ್ರೌಢ ಶಿಕ್ಷಣದ ಬಳಿಕ ಬೈಂದೂರಿನ ಪದವಿಪೂರ್ವ ಕಾಲೇಜು ಸೇರಿದ್ದ ಈಕೆ ಅಲ್ಲಿ ವಿಜ್ನಾನ ವಿಭಾಗದಲ್ಲಿ ವ್ಯಾಸಂಗ ಮಾಡಿಕೊಂಡಿದ್ದಳು. ಓದುವ ಆಸೆ ಈಕೆಯದ್ದು.. ಅದಕ್ಕಾಗಿಯೇ ನಿತ್ಯ ಮನೆಯಿಂದ ಒಂದೆರಡು ಕಿ.ಮೀ. ದೂರವಿರುವ ಬೈಂದೂರಿನ ಈ ಕಾಲೇಜಿಗೆ ನಿತ್ಯ ಹೋಗಿ ಬರುತ್ತಿದ್ದಳು. ಬೆಳಿಗ್ಗೆ ಹಾಗೂ ಸಂಜೆ ತನ್ನ ಸೋದರಿಯರು ಮತ್ತು ಗೆಳತಿಯರೊಂದಿಗೆ ಹೋಗಿ ಬರುತ್ತಿದ್ದ ಆಕೆ ಅಂದು ಮಾತ್ರ ಬಂದಿದ್ದು ಒಂಟಿಯಾಗಿ ಬಂದಿದ್ದಳು. ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಸುನೀಲ್ ಎಂಬಾತ ಆಕೆಯನ್ನು ಹಿಂಬಾಲಿಸಿ ಆಕೆಯನ್ನು ಬಲವಂತವಾಗಿ ಎಳೆದೊಯ್ದು ಎಕೇಶಿಯಾ ಪೊದೆಯತ್ತ ಸಾಗಿ ಅಲ್ಲಿ ಆಕೆಯನ್ನು ಮಲಗಿಸಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಆದರೇ ಆಕೆಯನ್ನು ಎಳೆದೊಯ್ಯುವ ನಡುವೆ ದುಪ್ಪಟ್ಟಾದಿಂದ ಕುತ್ತಿಗೆಗೆ ಬಿಗಿದ್ದ ಪರಿಣಾಮ ಆಕೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಳು. ಇಷ್ಟೆಲ್ಲಾ ಘಟನೆ ನಡೆದ ಬಳಿಕ ತನಗೇನು ತಿಳಿದಿಲ್ಲ ಎಂಬಂತೆ ಆತ ಅಲ್ಲಿಂದ ತೆರಳಿದ್ದ. ಇಷ್ಟೆಲ್ಲ ಕ್ರತ್ಯದ ಬಗ್ಗೆ ತನ್ನ ಚಿಕ್ಕಮ್ಮನ ಮಗ ಅಕ್ಷಯನ ಬಳಿ ಹೇಳಿದ್ದು ಆತ ಸಾಕ್ಷ್ಯ ನಾಶಕ್ಕೆ ಸಹಕರಿಸಿದ್ದ. ಇಬ್ಬರು ಬೈಂದೂರು ಯೋಜನಾ ನಗರದ ನಿವಾಸಿಗಳಾಗಿದ್ದರು.

ಘಟನೆಯ ಮಾರನೆದಿನ ಬೆಳಿಗ್ಗೆ ವಿದ್ಯಾರ್ಥಿಗಳು, ನಾಗರೀಕರು, ದೇವಾಡಿಗ ಸಮಾಜದವರು ಬೈಂದೂರಿನಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಉಡುಪಿ ಎಸ್ಪಿ ಅವರಿಗೆ ಮನವಿ ನೀಡಿದ್ದರು. ಎಸ್ಪಿ ಅವರು ನೀಡಿದ ಆಶ್ವಾಸನೆಯಂತೆ ಇಬ್ಬರನ್ನು ಎರಡೇ ದಿನದಲ್ಲಿ ಪೊಲೀಸರು ಬಂಧಿಸಿದ್ದರು. ಇಬ್ಬರ ಅನುಮಾನಾಸ್ಪದ ನಡೆಯ ಮಾಹಿತಿ ಕಲೆ ಹಾಕಿದ ಪೊಲೀಸರು ಸುನೀಲ್ ಹಾಗೂ ಅಕ್ಷಯ್ ಹಾಗೂ ಇವರದ್ದೇ ತಂಡದ ಮಂಜುನಾಥ ಎನ್ನುವರನ್ನು ವಿಚಾರಣೆಗೆಗಾಗಿ ಠಾಣೆಗೆ ಕರೆಸುತ್ತಾರೆ. ಇದೇ ವೇಳೆ ಮಂಜುನಾಥನ ಪಾತ್ರ ಪ್ರಕರಣದಲ್ಲಿ ಅಷ್ಟಾಗಿ ಕಣದ ಕಾರಣ ಆತನನ್ನು ಹೊರತುಪಡಿಸಿ ಸುನೀಲ್ ಮತ್ತು ಅಕ್ಷಯ್ ಇಬ್ಬರನ್ನೂ ತಮ್ಮದೇ ಶೈಲಿಯಲ್ಲಿ ಬಾಯ್ಬಿಡಿಸಲಾರಂಭಿಸುತ್ತಾರೆ. ಒಂದೂ ದಿನವಿಡೀ ಪೊಲೀಸರ ಯಾವುದೇ ಮಾತಿಗೂ ಜಗ್ಗದ ಅವರಿಬ್ಬರು “ನಾವವರಲ್ಲ, ನಮಗೇನು ಗೊತ್ತಿಲ್ಲ, ನಾವುಗಳಿಬ್ಬರು ಅಂದು ಬೈಂದೂರಿನಲ್ಲಿಯೇ ಇರಲಿಲ್ಲ” ಎಂದು ತಾವೇ ಕಟ್ಟಿದ ಕಥೆಯನ್ನು ಎಳೆ ಎಳೆಯಾಗಿ ಪೊಲೀಸರ ಮುಂದೆ ಹೇಳುತ್ತಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಇಬ್ಬರ ಹೇಳಿಕೆಗಳನ್ನೂ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದಾಗ ಅಷ್ಟು ಸತ್ಯ ಹೊರಬಿದ್ದಿತ್ತು.
ಹೇನಬೇರು ಅಭಿವೃದ್ಧಿ..?
ಇದಾದ ತರುವಾಯ ಅಕ್ಷತಾ ದೇವಾಡಿಗಳ ಮನೆಗೆ ಶಿಕ್ಷಣ ಸಚಿವರು, ರಾಜ್ಯಸಭಾ ಸದಸ್ಯರು, ಸಂಸದರು, ದೇವಾಡಿಗ ಸಮಾಜದ ಮುಖಂಡರು ಮೊದಲಾದವರು ಭೇಟಿ ನೀಡಿ ವಿವಿಧ ಆಶ್ವಾಸನೆಗಳನ್ನು ನೀಡಿದ್ದಾರೆ. ದೇವಾಡಿಗ ಸಂಘದವರು ಈಕೆ ಕುಟುಂಬಕ್ಕೆ ಆರ್ಥಿಕ ಸಹಕಾರವನ್ನು ನೀಡಿದ್ದಾರೆ. ಇನ್ನು ಸರಕಾರ ಅಕ್ಷತಾ ದೇವಾಡಿಗ ಕುಟುಂಬಕ್ಕೆ ಪರಿಹಾರ ನೀಡಿದೆ. ಮಾತು ಕೊಟ್ಟಂತೆ ಬೀದಿದೀಪಗಳನ್ನು ಅಳವಡಿಸಿದೆ. ಮೊನ್ನೆಯಷ್ಟೇ ಈ ಭಾಗಕ್ಕೆ ಸರಕಾರಿ ಬಸ್ಸು ನೀಡುವ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದು ಸಾಗುವ ಪರಿಪಾಠಕ್ಕೆ ಬ್ರೇಕ್ ಹಾಕಲಾಗಿದೆ. ಇನ್ನು ಈ ಭಾಗದ ರಸ್ತೆಯನ್ನು ಕೊಂಚ ಅಭಿವೃದ್ಧಿಗೊಳಿಸಲಾಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಹತ್ತುಹಲವು ಕಾರ್ಯಗಳನ್ನು ರೂಪಿಸಿದೆ.
ಪೊಲೀಗಳ ಕಾಟಕ್ಕೆ ಬೀಳಲಿ ಕಡಿವಾಣ…
ಕೊಲೆ ಮಾಡಿದ ಆರೋಪಿಯೂ ಸದ್ಯ ಜೈಲುಕಂಬಿ ಹಿಂದಿದ್ದಾನೆ. ಆದರೇ ಇಂತಹ ಆಪಾಪೋಲಿಗಳ ಕಾಟ ಕುಂದಾಪುರ ತಾಲೂಕಿನ ಹಳ್ಳಿಗಾಡು ಪ್ರದೇಶಗಳಲ್ಲಿ ಜಾಸ್ಥಿಯಾಗಿದೆ. ಒಂಟಿ ಹೆಣ್ಮಕ್ಕಳನ್ನು ಟಾರ್ಗೇಟ್ ಮಾಡುವ ಇವರು ಕಳ್ಳತನ, ಅತ್ಯಾಚಾರ, ಲೈಂಗಿಕ ಪೀಡನೆಯಂತಹ ಕುಕ್ರತ್ಯಗಳನ್ನು ಎಸಗುತ್ತಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ. ಘಟನೆ ನಡೆದ ಬಳಿಕ ಇಲಾಖೆ ಹಾಗೂ ಸರಕಾರ ಎಚ್ಚೆತ್ತುಕೊಳ್ಳುವ ಬದಲು ಆಯಕಟ್ಟಿನ ಸ್ಥಳಗಳ ಮೇಲೆ ಮೊದಲೇ ಕಣ್ಣಿಟ್ಟು ಅಲ್ಲಿಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸಬೇಕಾದ ಜವಬ್ದಾರಿಯೂ ಇದೆ.
ಇನ್ನು ಹೇನಬೇರಿಗೆ ಈಗಾಗ್ಳೆ ಬಸ್ಸು ಸಂಪರ್ಕ ಕಲಿಸಲಾಗಿದೆ. ಆದ್ರ್‍ಏ ಯಾವುದೇ ಕಾರಣಕ್ಕೂ ಅನಗತ್ಯ ಕಾರಣ ನೀಡಿ ಬಸ್ಸು ಸಂಪರ್ಕವನ್ನು ನಿಲ್ಲಿಸಬಾರದು ಎಂಬ ಕೂಗು ಈ ಭಾಗದ ಜನರಿಂದ ಕೇಳಿಬರುತ್ತಿದೆ.
ಒಟ್ಟಿನಲ್ಲಿ ಹೇನಬೇರು ಅಕ್ಷತಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಆಕೆಯ ನೆನಪಿನಲ್ಲಿಯೇ ಆಕೆ ಕುಟುಂಬ ಇನ್ನೂ ದುಃಖದಲ್ಲಿಯೇ ಜೀವನ ಸಾಗಿಸುತ್ತಿದೆ. ಅಕ್ಷತಾಳಿಗೆ ಬಂದ ಪರಿಸ್ಥಿತಿ ಯಾವ ಹೆಣ್ಮಗಳಿಗೂ ಬಾರದಿರಲಿ. ಅಕ್ಷತಾ ಆತ್ಮಕ್ಕೆ ಶಾಂತಿ ಸಿಗಲಿ.
ಇದನ್ನೂ ಓದಿರಿ:
ಕೊಲೆಯಾದ ಬೈಂದೂರು ಹೇನಬೇರು ಅಕ್ಷತಾ ಊರಿಗೆ ವರುಷದ ಬಳಿಕ ಸರಕಾರಿ ಬಸ್ಸು ಓಡಾಟ
‘ನಿಮ್ಮೊಂದಿಗೆ ನಾವಿದ್ದೇವೆ’- ಬೈಂದೂರು ಅಕ್ಷತಾ ಮನೆಗೆ ದೇವಾಡಿಗ ಮುಖಂಡರ ಭೇಟಿ: ಕುಟುಂಬಿಕರಿಗೆ ಸಾಂತ್ವಾನ
ಅಕ್ಷತಾ ದೇವಾಡಿಗ ಮರ್ಡರ್ ಕೇಸ್; 2ನೇ ಆರೋಪಿಗೆ ಜಾಮೀನು
ಮೃತ ಅಕ್ಷತಾ ದೇವಾಡಿಗ ಕುಟುಂಬಕ್ಕೆ 50 ಸಾವಿರ ಧನಸಹಾಯ
ಕಾಮಾಂಧನ ಕುರುಡು ಕಾಮಕ್ಕೆ ಬಲಿಯಾದ ಮುಗ್ಧೆ ಅಕ್ಷತಾ | ಒಬ್ಬ ಕಾಮುಕ ಇನ್ನೊಬ್ಬ ಆತನ ರಕ್ಷಕ ಅಂದರ್ (ಸಂಪೂರ್ಣ ವಿಸ್ತ್ರತ ವರದಿ)
Comments are closed.