ಕರಾವಳಿ

ಕುಂದಾಪುರದಲ್ಲಿಯೂ ಆರಂಭವಾದ ಹೆಲಿಟೂರಿಸಂ: ಚಾಲನೆ ನೀಡಿದ ಖ್ಯಾತ ಉದ್ಯಮಿ ವಿ.ಕೆ. ಮೋಹನ್

Pinterest LinkedIn Tumblr

Kundapura_Heli Tourisam_Uva Meridian (17)

ಕುಂದಾಪುರ: ಉಡುಪಿಯಲ್ಲಿ ಸಕ್ಸಸ್ ಕಂಡು ಇದೀಗಾ ಸುಂದರ ಕುಂದಾಪುರ ನಗರಕ್ಕೆ ಹೆಲಿ ಟೂರಿಸಂ ಪಾದಾರ್ಪಣೆ ಮಾಡುವ ಮೂಲಕ ಕುಂದಾಪುರದ ಟೂರಿಸಂ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.

ಆನೆಗುಡ್ಡೆ, ಕೊಲ್ಲೂರು ಸೇರಿದಂತೆ ಪ್ರಸಿದ್ದ ಪುಣ್ಯ ಕ್ಷೇತ್ರಗಳು, ಮರವಂತೆಯಂತಹ ಸುಂದರ ಕಡಲತಡಿ, ಪಶ್ಚಿಮ ಘಟ್ಟದ ಸಾಲು ಸುಸಜ್ಜಿತ ತಾರಾ ಹೋಟೇಲ್‌ಗಳನ್ನು ಹೊಂದಿರುವ ಕುಂದಾಪುರ ಮತ್ತು ಪರಿಸರದ ನಗರಗಳ ಪ್ರವಾಸಿಗಳಿಗೆ ಹೆಲಿಟೂರಿಸಂ ಒಂದು ವರದಾನ ಎಂದೇ ಪರಿಗಣಿಸಲಾಗಿದೆ. ದೆಹಲಿಯ ಚಿಪ್ಸನ್ ಎವಿಯೇಶನ್ ಕಂಪೆನಿ ಜಿಲ್ಲಾಡಳಿತದ ಅನುಮೋದನೆಯೊಂದಿಗೆ ಕುಂದಾಪುರಕ್ಕೆ ಹೆಲಿಟೂರಿಸಂ ಪರಿಚಯಿಸುತ್ತಿದ್ದೆ. ಎವಿಯೇಶನ್ ಕಂಪೆನಿ ಕೋಟೇಶ್ವರದ ಯುವಮೆರಿಡಿಯನ್ ಹೋಟೆಲ್‌ನಲ್ಲಿ ಎರ್ಪಡಿಸಿದ ಪತ್ರಿಕಾಗೊಷ್ಟಿಯಲ್ಲಿ ಕಂಪೆನಿಯ ಸುರೇಶ್ ಮಾಹಿತಿ ನೀಡಿದರು.

Kundapura_Heli Tourisam_Uva Meridian (1)

Kundapura_Heli Tourisam_Uva Meridian (2)

Kundapura_Heli Tourisam_Uva Meridian (3)

Kundapura_Heli Tourisam_Uva Meridian (4)

Kundapura_Heli Tourisam_Uva Meridian (5)

Kundapura_Heli Tourisam_Uva Meridian (6)

Kundapura_Heli Tourisam_Uva Meridian (7)

Kundapura_Heli Tourisam_Uva Meridian (8)

ಚಿಪ್ಸನ್ ಎವಿಯೇಶನ್ ಕಂಪೆನಿ ಜಿಲ್ಲಾ ಕೇಂದ್ರ ಉಡುಪಿಯಲ್ಲಿ ಈಗಾಗಲೇ ಹೆಲಿಟೂರಿಸಂ ಪರಿಚಯಿಸಿದ್ದು, ಅದರ ಯಶಸ್ಸಿನಿಂದ ಪ್ರೇರಿತವಾಗಿ ಕುಂದಾಪುರದಲ್ಲೂ ಈ ಸೇವೆ ಆರಂಭಿಸಿದೆ. ಕಂಪೆನಿಯು ಜಾಯ್ ರೈಡ್, ಎಡ್ವೆಂಚರ್ ರೈಡ್, ರಿಲಿಜಿಯಸ್ ರೈಡ್, ಹೆಲ್ತ್ ರೈಡ್ ಎಂಬ ಪ್ಯಾಕೇಜ್‌ಗಳನ್ನು ಹೊಂದಿದ್ದು, ಆರಂಭದಲ್ಲಿ ಕುಂದಾಪುರದಲ್ಲಿ ಜಾಯ್‌ರೈಡ್ ಮತ್ತು ಎಡ್ವೆಚರ್ ರೈಡ್‌ಗಳನ್ನು ಮಾತ್ರ ಪರಿಚಯಿಸುತ್ತಿದೆ. ಒಮ್ಮೆಗೆ ಆರು ಮಂದಿ ಕುಳಿತು ಹಾರಾಡಬಹುದಾದ ಒಂಟಿ ಇಂಜಿನ್‌ನ ಹೆಲಿಕಾಫ್ಟರ್ ಯುವಮೆರಿಡಿಯನ್ ಹೋಟೇಲ್ ಹೆಲಿಪ್ಯಾಡ್‌ನಿಂದ ಯಾನ ಆರಂಭಿಸುತ್ತದೆ. ಮೇ ಮೊದಲವಾರದಿಂದ ರೈಡ್‌ಗಳು ಶುರುವಾಗಲಿದ್ದು. ಆಸಕ್ತರು ಬುಕ್ ಮಾಡಬಹುದಾಗಿದೆ. ಒಬ್ಬರಿಗೆ ಎಂಟು ನಿಮೀಷಗಳ ಜಾಯ್ ರೈಡ್‌ಗೆ ರೂ ೨೨೦೦ ಹಾಗೂ ೧೩ ನಿಮಿಷಗಳ ಎಡ್ವೆಂಚರ್ ರೈಡ್‌ಗೆ ರೂ ೩೫೦೦ ದರ ನಿಗದಿಪಡಿಸಲಾಗಿದೆ.

Kundapura_Heli Tourisam_Uva Meridian (9)

Kundapura_Heli Tourisam_Uva Meridian (10)

Kundapura_Heli Tourisam_Uva Meridian (11)

Kundapura_Heli Tourisam_Uva Meridian (12)

Kundapura_Heli Tourisam_Uva Meridian (13)

Kundapura_Heli Tourisam_Uva Meridian (14)

Kundapura_Heli Tourisam_Uva Meridian (15)

Kundapura_Heli Tourisam_Uva Meridian (16)

Kundapura_Heli Tourisam_Uva Meridian (18)

Kundapura_Heli Tourisam_Uva Meridian (19)

Kundapura_Heli Tourisam_Uva Meridian (20)

ಕುಂದಾಪುರದಲ್ಲಿ ಪ್ರಥಮಥವಾಗಿ ಆರಂಭಗೊಂಡ ಹೆಲಿ ಟೂರಿಸಂಗೆ ಫುಲ್ ರೆಸ್ಫಾನ್ಸ್ ಸಿಗುವ ನಿರೀಕ್ಷೆಗಳಿದೆ. ಯಾಕೆಂದರೇ ಸ್ವಯಂಪ್ರೇರಿತರಾಗಿ ಆಸಕ್ತಿಗೊಂಡು ಕುಟುಂಬ ಸಮೇತರಾಗಿ ಬಂದ ಕುಂದಾಪುರದ ವಕ್ವಾಡಿ ಮೂಲದ ಖ್ಯಾತ ಉದ್ಯಮಿ ವಿ.ಕೆ. ಮೋಹನ್ ಅವರು ಅರ್ಧ ಗಂಟೆಗಳ ತಮ್ಮ ಫ್ಯಾಮಿಲಿಯ ಆರು ಮಂದಿ ಜೊತೆ ಅರ್ಧ ಗಂಟೆಗಳ ಕಾಲ ಕುಂದಾಪುರ ರೌಂಡ್ ಹಾಕಿದ್ರು. ಅಲ್ಲದೇ ಇದೇ ಸಂದರ್ಭ ಹೆಲಿ ಟೂರಿಸಂ ಯಶಸ್ವಿಯಾಗಲಿ ಎಂದು ಕೂಡ ಹಾರೈಸಿದ್ರು.

ಇನ್ನು ಈ ಹೆಲಿ ಟೂರಿಸಂ ಮೂಲಕ ರಸ್ತೆ, ಕಟ್ಟಡ, ನದಿ, ಸಮುದ್ರ, ಬೆಟ್ಟಗಳು ಎಲ್ಲವೂ ವಾಯುಮಾರ್ಗದಲ್ಲಿ ಹಾರಾಡುತ್ತಾ ವೀಕ್ಷಿಸಲು ನಯನಮನೋಹರವಾಗಿರುತ್ತದೆ. ಅಲ್ಲದೇ ಆಸಕ್ತರು ಬುಕ್ ಮಾಡಿದರೆ ಕುಂದಾಪುರದಿಂದ ಉಡುಪಿ, ಮಂಗಳೂರು, ಬೆಂಗಳೂರಿಗೂ ಹೆಲಿಕಾಫ್ಟರ್‌ನಲ್ಲಿ ಕರೆದೊಯ್ಯುವ ವ್ಯವಸ್ಥೆಯಿದೆ. ಈಗಾಗಲೇ ಕುಂದಾಪುರದಲ್ಲಿ ಕೆಲವು ಬುಕ್ಕಿಂಗ್‌ಗಳಾಗಿದ್ದು ಮೇ೧ರಿಂದ ಸಂಜೆ ೩-೬ಗಂಟೆವರೆಗೆ ಹಾರಾಟ ನಡೆಸಲಾಗುತ್ತದೆ. ಬುಕ್ಕಿಂಗ್ ಜಾಸ್ತಿಯಾದರೆ ಬೆಳಿಗ್ಗೆಯೂ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳುತ್ತಾರೆ ಚಿಪ್ಸನ್ ಎವಿಯೇಶನ್ ಕಂಪೆನಿ ಸುರೇಶ್.

Kundapura_Heli Tourisam_Uva Meridian (21)

Kundapura_Heli Tourisam_Uva Meridian (22)

Kundapura_Heli Tourisam_Uva Meridian (23)

Kundapura_Heli Tourisam_Uva Meridian (24)

Kundapura_Heli Tourisam_Uva Meridian (25)

Kundapura_Heli Tourisam_Uva Meridian (26)

Kundapura_Heli Tourisam_Uva Meridian (27)

Kundapura_Heli Tourisam_Uva Meridian (28)

Kundapura_Heli Tourisam_Uva Meridian (29)

ಮೆರಿಡಿಯನ್ ಹೋಟೆಲ್‌ನ ಆಡಳಿತ ನಿರ್ದೇಶಕ ಉದಯ್‌ಕುಮಾರ್ ಶೆಟ್ಟಿ ಮಾತನಾಡಿ, ಈ ಪ್ರದೇಶದಲ್ಲಿ ಹೆಲಿಟೂರಿಸಂ ಪರಿಚಯಿಸುವ ಉದ್ದೇಶದಿಂದ ತಾತ್ಕಾಲಿಕ ನೆಲೆಯಲ್ಲಿ ಹೋಟೆಲ್ ಹೆಲಿಪ್ಯಾಡ್ ಬಳಸಲು ಅನುಮತಿ ನೀಡಲಾಗಿದೆ. ಜನತೆ ನೂತನ ಟೂರಿಸಂ ವ್ಯವಸ್ಥೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಯುವ ಮೆರಿಡಿಯನ್ ಹೋಟೆಲ್‌ನ ಇನ್ನೋರ್ವ ಆಡಳಿತ ನಿರ್ದೇಶಕರಾದ ವಿನಯ್ ಕುಮಾರ್ ಶೆಟ್ಟಿ, ಪೈಲೆಟ್ ಕ್ಯಾಪ್ಟನ್ ಅರ್ಪಿತ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment