ಮನೋರಂಜನೆ

ಮೂರನೇ ಸ್ಥಾನಕ್ಕೇರಿದ ಮುಂಬೈ; ನೈಟ್‌ರೈಡರ್ಸ್‌ಗೆ ನಿರಾಸೆ; ರೋಹಿತ್‌, ಪೊಲಾರ್ಡ್‌ ಅಬ್ಬರಕ್ಕೆ ಒಲಿದ ಜಯ

Pinterest LinkedIn Tumblr

pollard-rohit-2804

ಮುಂಬೈ (ಪಿಟಿಐ): ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ರನ್‌ ಮಳೆ ಸುರಿಸಿದ ರೋಹಿತ್‌ ಶರ್ಮಾ (ಔಟಾಗದೆ 68; 49ಎ, 8ಬೌಂ, 2ಸಿ) ಮತ್ತು ಕೀರನ್‌ ಪೊಲಾರ್ಡ್‌ (ಔಟಾಗದೆ 51; 17ಎ, 2ಬೌಂ, 6ಸಿ) ತವರಿನ ಅಭಿಮಾನಿಗಳನ್ನು ಮನರಂಜನೆಯ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಇವರಿಬ್ಬರ ಸ್ಫೋಟಕ ಆಟದ ಬಲದಿಂದ ಹಾಲಿ ಚಾಂಪಿಯನ್‌ ಮುಂಬೈ ಐಪಿಎಲ್‌ ಟೂರ್ನಿಯ ಪಂದ್ಯ ದಲ್ಲಿ 6 ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿತು.

ಇದರೊಂದಿಗೆ ರೋಹಿತ್‌ ಶರ್ಮಾ ಸಾರಥ್ಯದ ತಂಡ ಆಡಿದ ಎಂಟು ಪಂದ್ಯ ಗಳಿಂದ ಇಷ್ಟೇ ಪಾಯಿಂಟ್ಸ್‌ ಕಲೆ ಹಾಕಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ಟಾಸ್ ಗೆದ್ದ ಮುಂಬೈ ತಂಡ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ನೈಟ್ ರೈಡರ್ಸ್ ಈ ಅವ ಕಾಶವನ್ನು ಚೆನ್ನಾಗಿಯೇ ಬಳಸಿಕೊಂ ಡಿತು. 2014ರ ಟೂರ್ನಿಯ ಚಾಂಪಿ ಯನ್‌ ರೈಡರ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 174 ರನ್ ಕಲೆ ಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್‌ 18 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆಘಾತ: ಗುರಿ ಬೆನ್ನಟ್ಟುವ ಹಾದಿಯಲ್ಲಿ ಮುಂಬೈ ಆರಂಭಿಕ ಆಘಾತಕ್ಕೆ ಒಳಗಾ ಯಿತು. ಕಿಂಗ್ಸ್‌ ಇಲೆವೆನ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಪಾರ್ಥೀವ್‌ ಪಟೇಲ್‌ (1) ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

ಉಮೇಶ್‌ ಯಾದವ್‌ ಬೌಲ್‌ ಮಾಡಿದ ಇನಿಂಗ್ಸ್‌ನ ಎರಡನೇ ಓವ ರ್‌ನ ಮೊದಲ ಎಸೆತದಲ್ಲಿ ಪಾರ್ಥೀವ್‌, ಯೂಸುಫ್‌ ಪಠಾಣ್‌ ಹಿಡಿದ ಸೊಗಸಾದ ಕ್ಯಾಚ್‌ಗೆ ಬಲಿಯಾದರು.

ಆ ಬಳಿಕ ಅಂಬಟಿ ರಾಯುಡು (32; 20ಎ, 5ಬೌಂ, 1ಸಿ) ಜತೆಗೂಡಿದ ನಾಯಕ ರೋಹಿತ್‌ ಸೊಗಸಾದ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ಎರ ಡನೇ ವಿಕೆಟ್‌ಗೆ 5.4 ಓವರ್‌ಗಳಲ್ಲಿ 59ರನ್‌ ಕಲೆಹಾಕಿ ತಂಡವನ್ನು ಅಪಾಯ ದಿಂದ ಪಾರು ಮಾಡಿತು.

ಈ ಜೋಡಿಯನ್ನು ಮುರಿಯಲು ನೈಟ್‌ ರೈಡರ್ಸ್‌ ನಾಯಕ ಗಂಭೀರ್‌ ಬೌಲಿಂಗ್‌ನಲ್ಲಿ ಹಲವು ಬಾರಿ ಬದಲಾ ವಣೆ ಮಾಡಿದರು. ಅವರು 7ನೇ ಓವರ್‌ ಬೌಲ್‌ ಮಾಡಲು ಶಕೀಬ್‌ ಅಲ್‌ ಹಸನ್‌ ಕೈಗೆ ಚೆಂಡು ಕೊಟ್ಟಿದ್ದು ಫಲ ನೀಡಿತು.

ಬಾಂಗ್ಲಾದೇಶದ ಎಡಗೈ ಸ್ಪಿನ್ನರ್‌ ಶಕೀಬ್‌, ಓವರ್‌ನ ಐದನೇ ಎಸೆತದಲ್ಲಿ ರಾಯುಡು ವಿಕೆಟ್‌ ಉರುಳಿಸಿದರು. ಆ ಬಳಿಕ ಬಂದ ಕೃಣಾಲ್‌ ಪಾಂಡ್ಯ (6) ಮತ್ತು ಜಾಸ್‌ ಬಟ್ಲರ್‌ (15; 15ಎ, 2ಸಿ.) ಅವರನ್ನು ಸುನಿಲ್‌ ನಾರಾಯಣ ತಮ್ಮ ಸ್ಪಿನ್‌ ಬಲೆಯಲ್ಲಿ ಕೆಡವಿ ನೈಟ್‌ ರೈಡರ್ಸ್‌ ಪಾಳಯದಲ್ಲಿ ಸಂತಸ ಉಕ್ಕಿ ಹರಿಯುವಂತೆ ಮಾಡಿದರು.

ಒಂದು ಹಂತದಲ್ಲಿ ಮುಂಬೈ ಗೆಲುವಿಗೆ 42 ಎಸೆತಗಳಲ್ಲಿ 69ರನ್‌ಗಳು ಬೇಕಿದ್ದವು. ಕ್ರೀಸ್‌ನಲ್ಲಿ ರೋಹಿತ್‌ ಮತ್ತು ಪೊಲಾರ್ಡ್‌ ಇದ್ದುದ್ದರಿಂದ ಆತಿಥೇ ಯರ ಗೆಲುವು ನಿಶ್ಚಿತ ಎಂದೇ ಭಾವಿಸ ಲಾಗಿತ್ತು. ಅಭಿಮಾನಿಗಳ ನಿರೀಕ್ಷೆಯನ್ನು ಇವರು ಹುಸಿ ಮಾಡಲಿಲ್ಲ. ಕ್ರೀಡಾಂಗಣ ದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಈ ಜೋಡಿ ನೈಟ್‌ರೈಡರ್ಸ್‌ ಬೌಲರ್‌ಗಳ ಚಳಿ ಬಿಡಿಸಿತು.

ಈ ಜೋಡಿ ಐದನೇ ವಿಕೆಟ್‌ಗೆ 30 ಎಸೆತಗಳಲ್ಲಿ 14.40ರ ಸರಾಸರಿಯಲ್ಲಿ 72ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಟ ಮುಟ್ಟಿಸಿತು.

ಗಟ್ಟಿ ಬುನಾದಿ: ಮೊದಲು ಬ್ಯಾಟ್‌ ಮಾಡಿದ ನೈಟ್‌ರೈಡರ್ಸ್‌ ಪರ ರಾಬಿನ್‌ ಉತ್ತಪ್ಪ ಮತ್ತು ಗೌತಮ್ ಗಂಭೀರ್‌ ಮೊದಲ ವಿಕೆಟ್‌ಗೆ 69 ರನ್ ಕಲೆ ಹಾಕಿ ಗಟ್ಟಿ ಬುನಾದಿ ನಿರ್ಮಿಸಿದರು. ಕರ್ನಾ ಟಕದ ಉತ್ತಪ್ಪ 20 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 36 ರನ್ ಕಲೆ ಹಾಕಿದರು.
ಗಂಭೀರ್ 59 ರನ್ ಬಾರಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 45 ಎಸೆತಗಳಷ್ಟೇ. ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದರು.

ಉತ್ತಮ ಆರಂಭ ಲಭಿಸಿದ ಕಾರಣ ನೈಟ್‌ ರೈಡರ್ಸ್ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌, ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಸೂರ್ಯಕುಮಾರ್ ಯಾದವ್ ಮತ್ತು ಆ್ಯಂಡ್ರೆ ರಸೆಲ್‌ ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್ ಕಲೆ ಹಾಕಲು ವಿಫಲರಾದರು.

ಆರಂಭದಲ್ಲಿ ಹೆಚ್ಚು ರನ್‌ಗಳನ್ನು ಕೊಟ್ಟಿದ್ದ ಮುಂಬೈ ತಂಡದ ಬೌಲರ್‌ಗಳು ಕೊನೆಯಲ್ಲಿ ರನ್ ವೇಗವನ್ನು ನಿಯಂತ್ರಿಸಿ ದರು. ಇಲ್ಲವಾದರೆ ನೈಟ್‌ ರೈಡರ್ಸ್ ತಂಡಕ್ಕೆ ಇನ್ನಷ್ಟು ರನ್ ಕಲೆ ಹಾಕಲು ಅವಕಾಶವಿತ್ತು. ನಾಲ್ಕು ಓವರ್ ಬೌಲ್ ಮಾಡಿದ ಟಿಮ್‌ ಸೌಥಿ 38 ರನ್ ಕೊಟ್ಟು ಎರಡು ವಿಕೆಟ್‌ ಕಬಳಿಸಿದರು. ಸಹೋದ ರರಾದ ಹಾರ್ದಿಕ್‌ ಮತ್ತು ಕೃಣಾಲ್‌ ಪಾಂಡ್ಯ ತಲಾ ಎರಡು ಓವರ್ ಬೌಲ್ ಮಾಡಿದರು. ಕೃಣಾಲ್‌ಗೆ ವಿಕೆಟ್‌ ಸಿಗಲಿಲ್ಲ.

ಸ್ಕೋರ್‌ಕಾರ್ಡ್‌

ಕೋಲ್ಕತ್ತ ನೈಟ್‌ ರೈಡರ್ಸ್‌ 5 ಕ್ಕೆ 174 (20 ಓವರ್‌ಗಳಲ್ಲಿ)
ರಾಬಿನ್ ಉತ್ತಪ್ಪ ಸಿ. ಕೀರನ್‌ ಪೊಲಾರ್ಡ್‌ ಬಿ. ಹರಭಜನ್‌ ಸಿಂಗ್ 36
ಗೌತಮ್ ಗಂಭೀರ್‌ ಸಿ. ಕೀರನ್‌ ಪೊಲಾರ್ಡ್‌ ಬಿ. ಮಿಷೆಲ್‌ ಮೆಕ್‌ಲಾಗನ್‌ 59
ಶಕೀಬ್‌ ಅಲ್‌ ಹಸನ್‌ ಸಿ. ಪಾರ್ಥಿವ್‌ ಪಟೇಲ್‌ ಬಿ. ಹಾರ್ದಿಕ್‌ ಪಾಂಡ್ಯ 06
ಸೂರ್ಯಕುಮಾರ್ ಯಾದವ್ ಸಿ. ಮತ್ತು ಬಿ. ಟಿಮ್‌ ಸೌಥಿ 21
ಆ್ಯಂಡ್ರೆ ರಸೆಲ್‌ ಬಿ. ಟಿಮ್ ಸೌಥಿ 22
ಕ್ರಿಸ್‌ ಲ್ಯಾನ್‌ ಔಟಾಗದೆ 10
ಯೂಸುಫ್‌ ಪಠಾಣ್‌ ಔಟಾಗದೆ 19

ಇತರೆ: (ಲೆಗ್‌ ಬೈ–1 ) 01
ವಿಕೆಟ್‌ ಪತನ: 1–69 (ಉತ್ತಪ್ಪ; 7.4), 2–77 (ಶಕೀಬ್‌; 8.5), 3–121 (ಗಂಭೀರ್‌; 13.5), 4–130 (ಸೂರ್ಯಕುಮಾರ್‌; 15.5), 5–145 (ರಸೆಲ್‌; 17.2).

ಬೌಲಿಂಗ್‌: ಟಿಮ್ ಸೌಥಿ 4–0–38–2, ಮಿಷೆಲ್‌ ಮೆಕ್‌ಲಾಗನ್‌ 4–0–33–1, ಜಸ್‌ಪ್ರೀತ್‌ ಬೂಮ್ರಾ 4–0–34–0, ಹರಭಜನ್ ಸಿಂಗ್ 4–0–32–1, ಹಾರ್ದಿಕ್‌ ಪಾಂಡ್ಯ 2–0–15–1, ಕೃಣಾಲ್‌ ಪಾಂಡ್ಯ 2–0–21–0.

ಮುಂಬೈ ಇಂಡಿಯನ್ಸ್‌ 4 ಕ್ಕೆ 178 (18 ಓವರ್‌ಗಳಲ್ಲಿ)
ರೋಹಿತ್‌ ಶರ್ಮಾ ಔಟಾಗದೆ 68
ಪಾರ್ಥೀವ್‌ ಪಟೇಲ್‌ ಸಿ ಯೂಸುಫ್‌ ಬಿ ಉಮೇಶ್‌ ಯಾದವ್‌ 01
ಅಂಬಟಿ ರಾಯುಡು ಸಿ ಸೂರ್ಯಕುಮಾರ್‌ ಬಿ ಶಕೀಬ್‌ ಅಲ್‌ ಹಸನ್‌ 32
ಕೃಣಾಲ್‌ ಪಾಂಡ್ಯ ಬಿ ಸುನಿಲ್‌ ನಾರಾಯಣ 06
ಜಾಸ್‌ ಬಟ್ಲರ್‌ ಸಿ ಕ್ರಿಸ್‌ ಲಿನ್‌ ಬಿ ಸುನಿಲ್‌ ನಾರಾಯಣ 15
ಕೀರನ್‌ ಪೊಲಾರ್ಡ್‌ ಔಟಾಗದೆ 51

ಇತರೆ:( ವೈಡ್‌–5) 05

ವಿಕೆಟ್‌ ಪತನ: 1–8 (ಪಾರ್ಥೀವ್‌; 1.1), 2–67 (ರಾಯುಡು; 6.5), 3–78 (ಕೃಣಾಲ್‌ 8.6), 4–106 (ಬಟ್ಲರ್‌; 12.6).

ಬೌಲಿಂಗ್‌: ಜಯದೇವ್‌ ಉನದ್ಕತ್‌ 3–0–49–0, ಉಮೇಶ್‌ ಯಾದವ್‌
2–0–19–1, ಶಕೀಬ್‌ ಅಲ್‌ ಹಸನ್‌ 4–0–30–1, ಸುನಿಲ್‌ ನಾರಾಯಣ
4–0–22–2, ರಾಜಗೋಪಾಲ್‌ ಸತೀಶ್‌ 2–0–30–0, ಆ್ಯಂಡ್ರೆ ರಸೆಲ್‌
3–0–28–0.
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 6 ವಿಕೆಟ್‌ ಗೆಲುವು.
ಪಂದ್ಯಶ್ರೇಷ್ಠ: ರೋಹಿತ್‌ ಶರ್ಮಾ

Write A Comment