
ದುಬೈ : ವಿಶ್ವ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್ ) ಅಂತಾರಾಷ್ಟ್ರ ಸಮಿತಿಯು ಗಲ್ಫ್ ಹಾಗೂ ಮಲೇಷ್ಯಾ ರಾಷ್ಟ್ರ ಗಳಲ್ಲಿ ನಡೆಸಲು ತಿರ್ಮಾನಿಸಿರುವ ಇಶ್ಕ್ – ಎ-ರಸೂಲ್ ಕಾನ್ಫ್ ರೆನ್ಷ್ ಅಂಗವಾಗಿ ದುಬೈ ಸಮಿತಿಯ ಕಾರ್ಯಕ್ರಮವು ಜನವರಿ 8 ಶುಕ್ರವಾರ ಸಂಜೆ 6 ಕ್ಕೆ ದುಬೈ ಅಲ್ ರಿಗ್ಗ ಮೆಟ್ರೊ ಸ್ಟೇಷನ್ ಸಮೀಪದ ಫ್ಲೋರಾ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.


ಇದೇ ಕಾರ್ಯಕ್ರಮದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಹೊರ ತರುವ ಸಂಘಟನೆಯ ಮುಖವಾಣಿ ಗಲ್ಫ್ ಇಶಾರ ಬಿಡುಗಡೆ ಸಮಾರಂಭ ವು ನಡೆಯಲಿದ್ದು. ಸಯ್ಯದ್ ತ್ವಾಹಾ ಬಾಫಖಿ ತಂಙಳ್ ರವರು ಸಂಜೆ ನಡೆಯುವ ಆಧ್ಯಾತ್ಮಿಕ ಮಜ್ಲಿಸ್ ನಲ್ಲಿ ಪ್ರಾರಂಭಿಕ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ನಂತರ ನಡೆಯುವ ಮೌಲಿದ್ ಕಾರ್ಯಕ್ರಮಕ್ಕೆ ಕೆಸಿಎಫ್ ರಾಸಲ್ ಖೈಮ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದ್ ಸಅದಿ ತಂಙಳ್ ಕಿನ್ಯ ನೇತೃತ್ವ ವಹಿಸುವರು.
ಅಬ್ದುರ್ರಶೀದ್ ಹನೀಫಿ ಉಸ್ತಾದ್ ರವರ ನೇತೃತ್ವದಲ್ಲಿ ನಡೆಯುವ ಬುರ್ದಾ-ನಹತೆ ಶರೀಫ್ ಆಲಾಪಣೆ ಯಲ್ಲಿ ರಾಜ್ಯ ಎಸ್ಸೆಸ್ಸೆಫ್ ಪ್ರತಿಭೋತ್ಸವ-2015 ಪ್ರತಿಭೆ ಗಳಾದ ಮುಹಮ್ಮದ್ ಆಶಿಖ್ ಕಾಜೂರು , ಸಲೀಂ ಖಾದ್ರಿ ಉಜಿರೆ ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ವಿಶಿಷ್ಟ ಅತಿಥಿಯಾಗಿ ರಾಜ್ಯದ ಹಿರಿಯ ವಿದ್ವಾಂಸ ಹಾಗೂ ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಉಪ ಖಾಝಿ ಮತ್ತು ಜಿಲ್ಲಾ ಸುನ್ನೀ ವಿದ್ವಾಂಸ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳೂ ಆದ ಶೈಖುನಾ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ ಭಾಗವಹಿಸಿ ಮಾತನಾಡಲಿರುವರು , “ಹುಬ್ಬುರ್ರಸೂಲ್ ” ಎಂಬ ವಿಷಯದಲ್ಲಿ ಕೆಸಿಎಫ್ ಯುಎಇ ಅಸ್ಸುಫ್ಫ ದರ್ಸ್ ನ ನಾಯಕ ಇಬ್ರಾಹೀಂ ಸಖಾಫಿ ಕೆದುಂಬಾಡಿ ಮುಖ್ಯ ಭಾಷಣ ಮಾಡಲಿದ್ದಾರೆ. ನಂತರ ರಾತ್ರಿ 8:15 ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ವಹಿಸುವರು. ರಾಜ್ಯ ಸರ್ಕಾರದ ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಗೌರವಾನ್ವಿತ ಸಚಿವರಾದ ಖಮರುಲ್ ಇಸ್ಲಾಂ ಕಾರ್ಯಕ್ರಮ ಉದ್ಘಾಟಿಸಲಿರುವರು,
ಕನ್ನಡ ಮಾಸಿಕದ ಪ್ರಪ್ರಥಮ ಬಾರಿಯ ಗಲ್ಫ್ ಆವೃತ್ತಿ ” ಗಲ್ಫ್ ಇಶಾರ ” ಪತ್ರಿಕೆಯ ಮೊದಲ ಪ್ರತಿಯನ್ನು ಘನವೆತ್ತ ಭಾರತೀಯ ಕೌನ್ಸಿಲ್ ಜನರಲ್ ಅನುರಾಗ್ ಭೂಷಣ್ ದುಬೈ ರವರಿಗೆ ನೀಡಿ ಬಿಡುಗಡೆ ಮಾಡಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಎನ್. ಕೆ ಮುಹಮ್ಮದ್ ಶಾಫಿ ಸಅದಿ ಬೆಂಗಳೂರು ಮುನ್ನುಡಿ ಭಾಷಣ ನಡೆಸಲಿದ್ದಾರೆ .ಸಮಾರಂಭದಲ್ಲಿ ಸಂಘಟನೆಯ ಮುಖವಾಣಿ ಇಶಾರ ಪಾಕ್ಷಿಕದ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ ” ಅಕ್ಷರಗಳ ಅಕ್ಕರೆಯ ಸ್ಫರ್ಶ” ಎಂಬ ವಿಷಯದಲ್ಲಿ ವಿಚಾರ ಮಂಡಿಸಲಿಕ್ಕಿದ್ದಾರೆ.
ಕಾರ್ಯಕ್ರಮದಲ್ಲಿ ಕೆಸಿಎಫ್ ನ ಅಂತರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ , ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಝೈತ್ , ಸಿರಾಜ್ ಮಲಯಾಳಂ ದೈನಿಕದ ಗಲ್ಫ್ ಆವೃತ್ತಿ ಯ ನಿರ್ದೇಶಕ ಅಬ್ದುಲ್ ಹಮೀದ್ (ಪಿ.ಎಂ.ಎಚ್ )ಈಶ್ವರಮಂಗಲ, ಸಿರಾಜ್ ಮಲಯಾಳಂ ದೈನಿಕದ ಸಂಪಾದಕ ಕೆ.ಎಂ ಅಬ್ಬಾಸ್ , ಐಸಿಎಫ್ ಜಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಮಂಬಾಡ್ , ಪ್ರವಾಸಿ ವಾಯನ ಮಲಯಾಳಂ ಮಾಸಿಕದ ಸಂಪಾದಕ ಮುಹಮ್ಮದ್ ಶರೀಫ್ ಕಾರಶ್ಶೇರಿ, ಡಾII ಸದಾಶಿವ ಬಂಗೇರ ನಿರ್ದೇಶಕರು ತುಂಬೆ ಕ್ಲೀನಿಕ್ ದುಬಾಯಿ. ಬಷೀರ್ ಬೂಳುವಾರ್ (ಅಧ್ಯಕ್ಷರು ಅಲ್ ಖಾದಿಸ ದುಬೈ ) ಎಂ.ಇಬ್ರಾಹಿಂ ಮೂಳೂರು (ಉಪಾಧ್ಯಕ್ಷರು ಬಿಸಿಎಫ್ ದುಬೈ ) ಮೊದಲಾದ ಅನೇಕ ನಾಯಕರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿರುವರು.
ಪತ್ರಿಕಾಗೊಷ್ಟಿಯಲ್ಲಿ ಮಹ್ಬೂಬ್ ಸಖಾಫಿ ಕಿನ್ಯ ( ಅಧ್ಯಕ್ಷರು ಕೆಸಿಎಫ್ ದುಬೈ ), ಕಲಂದರ್ ಕಬಕ (ಪ್ರ:ಕಾರ್ಯದರ್ಶಿ ಕೆಸಿಎಫ್ ದುಬೈ ), ಸೈಫುದ್ದೀನ್ ಸುಳ್ಯ (ಕಾರ್ಯದರ್ಶಿ ಸ್ವಾಗತ ಸಮಿತಿ ), ಮುಹಮ್ಮದ್ ರಫೀಖ್ ಕಲ್ಲಡ್ಕ (ಕಾರ್ಯದರ್ಶಿ ಕೆಸಿಎಫ್ ಆಡಳಿತ ವಿಭಾಗ ದುಬೈ) ಉಪಸ್ಥಿತರಿದ್ದರು.