ಹಣ್ಣುಗಳ ರಾಜ’ ಎಂದೇ ಕರೆಸಿಕೊಳ್ಳುವ ಮಾವು ಇಂದು ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿವೆ. ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದೆ ಆದರೂ, ಅದನ್ನು ವಿಪರೀತ ತಿನ್ನುವುದು ಬೇಡ ಎಂದು ನೂತನ ಸಮೀಕ್ಷೆ ಹೇಳಿದೆ. ವೈದ್ಯರ ತಂಡವೊಂದು ಈ ಸಮೀಕ್ಷೆ ನಡೆಸಿದ್ದು, ಮಾವಿನ ಹಣ್ಣಿನ ಬಗ್ಗೆ ವರದಿಯೊಂದು ಹೇಳಿದೆ.
ಮಾವಿನ ಹಣ್ಣಿನಲ್ಲಿ ಭಾರೀ ಪ್ರಮಾಣದ ಕಾರ್ಬೋಹೈಡ್ರೇಟ್ಸ್, ಸಕ್ಕರೆ ಅಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಇತ್ಯಾದಿಗಳಿವೆ. ಇದರಲ್ಲಿ ಅತ್ಯಧಿಕ ಸಕ್ಕರೆ ಅಂಶವಿರುವುದರಿಂದ ಕ್ಯಾಲರಿ ಪ್ರಮಾಣವೂ ಹೆಚ್ಚಾಗಿದ್ದು, ಮಧುಮೇಹ ಖಾಯಿಲೆ ಯುಳ್ಳವರಿಗೆ ಒಳ್ಳೆಯದಲ್ಲ. ಇದರೊಂದಿಗೆ ಕೊಲೆಸ್ಟ್ರಾಲ್ ಅಂಶ ಹೆಚ್ಚು ಕಾಣಿಸಿಕೊಂಡಿರುವವರಿಗೂ ಮಾವಿನ ಹಣ್ಣು ಒಳ್ಳೆಯದಲ್ಲವೆಂದು ವೈದ್ಯರ ತಂಡ ಹೇಳಿದೆ.
ಸಂಶೋಧನೆಗಾಗಿ, ಸತತ ಒಂದು ವಾರಗಳ ಕಾಲ ಕೆಲ ವ್ಯಕ್ತಿಗಳಿಗೆ ಮಾವಿನ ಹಣ್ಣುಗಳನ್ನು ನಿತ್ಯವೂ ಸೇವಿಸಲು ಹೇಳಿದ್ದು, ಅವರಲ್ಲಿ ಸಕ್ಕರೆ ಕಾಯಿಲೆ ರೋಗಿಗಳೂ ಇದ್ದರು. ವಾರದ ನಂತರ ರಕ್ತ ಪರೀಕ್ಷೆಯಲ್ಲಿ ಎಲ್ಲರ ರಕ್ತದಲ್ಲೂ ಸಕ್ಕರೆ ಪ್ರಮಾಣ ಏರಿಕೆಯಾಗಿದೆ. ಸಕ್ಕರೆ ಕಾಯಿಲೆ ರೋಗಿಗಳ ದೇಹದಲ್ಲಿ ಸಕ್ಕರೆ ಪ್ರಮಾಣ ಅಪಾಯದ ಮಟ್ಟದಲ್ಲಿತ್ತು. ಆದ್ದರಿಂದ ಹಿತ ಮಿತವಾಗಿ ಮಾವು ತಿಂದರೆ ಸಾಕು ಎಂದು ವೈದ್ಯರು ಕಿವಿಮಾತು ಹೇಳಿದ್ದಾರೆ. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಮತ್ತು ಹಲಸಿನ ಹಣ್ಣು ಹೆಚ್ಚಾಗಿ ದೊರೆಯುತ್ತದೆ. ಮಾವಿನ ಕಾಯಿ ಮತ್ತು ಹಣ್ಣಿನಿಂದ ವಿಧ-ವಿಧದ ಖಾದ್ಯಗಳನ್ನು ಮತ್ತು ಜ್ಯೂಸ್‍ಗಳನ್ನು ತಯಾರಿಸುತ್ತಾರೆ. ಮಾವಿನ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಅದರಲ್ಲೂ ಕೆಲವು ಆರೋಗ್ಯಕ್ಕೆ ಪೂರಕವಾಗುವ ಗುಣಗಳಿವೆ. ಬೇಸಿಗೆಯಲ್ಲಿ ಇತಿಮಿತಿಯಲ್ಲಿ ಮಾವಿನ ಹಣ್ಣನ್ನು ಸವಿಯುವುದರಿಂದ ಆರೊಗ್ಯಕ್ಕಾಗುವ ಲಾಭಗಳು ಇಲ್ಲಿವೆ…
* ಮಾವು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳಿಗೆ ಒಂದು ಮೆಡಿಸಿನ್ ನಂತೆ ಕೆಲಸಮಾಡುತ್ತದೆ. ಆದ್ದರಿಂದ ಊಟದೊಂದಿಗೆ ಮಾವಿನ ಹಣ್ಣಿನ ಸೇವನೆ ಮಾಡುವುದು ಒಳ್ಳೆಯದು.
* ಮಾವಿನ ಹಣ್ಣಿನಲ್ಲಿ ವಿಟಮಿನ್ ‘ಇ’ ಅಂಶವಿರುವುದರಿಂದ ಲೈಂಗಿಕ ಹಾರ್ಮೋನ್‍ಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
* ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
* ಮಾವಿನ ಹಣ್ಣನ್ನು ಕತ್ತರಿಸಿ ಅದರ ಚಿಕ್ಕ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.
* ಮಾವಿನ ಹಣ್ಣಿನಲ್ಲಿ ಅಧಿಕ ಕಬ್ಬಿಣಾಂಶವಿದೆ. ಮಹಿಳೆಯರಲ್ಲಿ 40ರ ನಂತರ ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣ ಇಳಿಮುಖವಾಗುತ್ತಾ ಸಾಗುತ್ತದೆ. ಆದ್ದರಿಂದ 40ರ ನಂತರ ಕಬ್ಬಿಣದಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.
*ಮಾವಿನ ಮತ್ತೊಂದು ವಿಶೇಷತೆ ಏನೆಂದರೆ ಕ್ಯಾನ್ಸರ್ ಮತ್ತು ಹೃದಯಾಘಾತ ಕಾಯಿಲೆಗಳನ್ನು ದೂರವಿಡುವಲ್ಲಿ ಮಾವಿನ ಹಣ್ಣು ಸಹಕಾರಿಯಾಗಿದೆ.
ಮಾವಿನಹಣ್ಣಿನ ಸಾರ
ಮಾವಿನ ಹಣ್ಣು , ಹಣ್ಣುಗಳ ರಾಜ ಎಂದು ಪರಿಗಣಿಸಲ್ಪಟ್ಟಿದೆ. ಮಾವಿನ ಹಣ್ಣಿನ ಆಲ್ಫಾನ್ಸೋ ಜಾತಿಯ 100 ಗ್ರಾಂ ಹಣ್ಣಿನಲ್ಲಿ ಇರುವ (ಅಂದಾಜು) ಸಾರ ;
ನೀರು -81.6 ಗ್ರಾಂ.
ಪೆÇ್ರೀಟೀನ್ -0.9ಗ್ರಾಂ.
ಕೊಬ್ಬು -0.4 ಗ್ರಾಂ.
ಕಾರ್ಬೋಹೈಡ್ರೇಟ್ (ಸಕ್ಕರೆ) -16.3ಗ್ರಾಂ
ನಾರು – 0.4 ಗ್ರಾಂ.
ಸುಣ್ಣ -0.40 ಮಿ ಗ್ರಾಂ.
ರಂಜಕ -16.0ಮಿ ಗ್ರಾಂ.
ಪೆÇಟ್ಯಾಸಿಯಂ -2000.0ಮಿ ಗ್ರಾಂ.
ಸೋಡಿಯಂ -9.0 ಮಿಗ್ರಾಂ.
ವಿಟಮಿನ್ ಎ – 20,000 ಐ.ಯು.
ವಿಟಮಿನ್ ಬಿ 1 – 0.08ಮಿ ಗ್ರಾಂ.
ವಿಟಮಿನ್ ಬಿ 2 -0.09 ಮಿಗ್ರಾಂ
ವಿಟಮಿನ್ ಸಿ – 125.0 ಮಿ ಗ್ರಾಂ.
ನಿಯಾಚಿನ್ – 4.1 ಮಿ ಗ್ರಾಂ.
ಕ್ಯಾಲರೀಗಳು -50
ವಿಟಮಿನ್’ಎ’ ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳಲಾಗಿದೆ. ತೊಳೆಯದ, ಅತಿ ಗಳಿತ(ಕೊಳೆ ಆರಂಭದ) ಹಣ್ಣು, ಅರ್ಧ ಮಾಗಿದ ಹಣ್ಣು ಅತಿಸಾರಕ್ಕೆ ಕಾರಣವಾಗಬಹುದು. ಮಾಗಿದ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.
ಲೈಂಗಿಕ ಶಕ್ತಿ ವರ್ಧನೆಗೆ ಸಹಕಾರಿ :
ಸಾಮಾನ್ಯವಾಗಿ ಲೈಂಗಿಕ ಶಕ್ತಿ ವರ್ಧನೆಗೆ ಬೇಕಾದ ವಿಟಮಿನ್ ‘ಇ’ ಮಾವಿನ ಹಣ್ಣಿನಲ್ಲಿದೆ. ಈಸ್ಟ್ರೋಜೆನ್ ಹಾರ್ಮೋನ್‍ಗಳಂತೆ ಕೆಲಸ ಮಾಡುವ ಗುಣ ಮಾವಿನ ಹಣ್ಣಿನ ಸತ್ವದಲ್ಲಿದೆ. ಹೀಗಾಗಿ ಪುರುಷರು ಮತ್ತು ಮಹಿಳೆಯರ ಸೆಕ್ಸ್‍ಲೈಫ್ ಉತ್ತಮಗೊಳಿಸಲು, ಹೆಚ್ಚಿಸಿಕೊಳ್ಳಲು ಮಾವಿನ ಹಣ್ಣು ಸಹಕಾರಿ ಎನ್ನುತ್ತಾರೆ ವೈದ್ಯರು.