ಮಂಗಳೂರು / ಸುರತ್ಕಲ್ : ಸುರತ್ಕಲ್ ಸಮೀಪದ ಕಾಟಿಪಳ್ಳ ರಸ್ತೆಯ ಎಂ ಆರ್.ಪಿಲ್ ಸಮೀಪವಿರುವ ಬಿ.ಎಸ್ ಎಫ್ ಪ್ಯಾಕ್ಟರಿ ಸಮೀಪದ ಖಾಲಿ ಸ್ಥಳದಲ್ಲಿ ಸಂಗ್ರಹಿಸಿಡಲಾಗಿದ್ದ ಬಿಟಮಿನ್ ಶೀಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಸ್ಮವಾದ ಪರಿಣಾಮ ಸ್ಥಳೀಯರಲ್ಲಿ ಆತಂಕ ಉಂಟಾದ ಘಟನೆ ಶನಿವಾರ ಸಂಭವಿಸಿದೆ.
ಬಿ.ಎಸ್ ಎಫ್ ಪ್ಯಾಕ್ಟರಿ ಆವರಣದ ಹೊರಭಾಗದಲ್ಲಿದ್ದ ಸಂಗ್ರಹ ಮಾಡಿ ಇಡಲಾಗಿದ್ದ ಬಿಟಮಿನ್ ಶೀಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಕೂಡಲೇ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾದರು ಎನ್ನಲಾಗಿದೆ.
ರಬ್ಬರ್ ಮಾದರಿಯ ಈ ಶೀಟ್ ಗಳು ಬೆಂಕಿ ಕೆನ್ನಾಲಗೆಗೆ ಸಿಲುಕಿ ಭಸ್ಮವಾಗಿದೆ. ಭಾರೀ ಪ್ರಮಾಣದಲ್ಲಿ ಹೊಗೆ ಕವಿದ ಕಾರಣ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣವಿತ್ತೆಂದು ಹೇಳಲಾಗಿದೆ. ಈ ಹಿಂದೆಯೂ ಇದೇ ರೀತಿಯ ಇಲ್ಲಿ ಆಕಸ್ಮಿಕ ಸಂಭವಿಸಿತ್ತೆನ್ನಲಾಗಿದೆ.


