ಕರಾವಳಿ

ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿ ಇತಿಹಾಸ ಸೃಷ್ಟಿಸಿದ ದೇರಾಜೆ ಸೀತಾರಾಮಯ್ಯ.

Pinterest LinkedIn Tumblr

yaksh_gana_photo_1

ಮಂಗಳೂರು,ನ.26 : ದೇರಾಜೆ ಸೀತಾರಾಮಯ್ಯನವರು ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿತಮ್ಮ ನಿತ್ಯನೂತನ ವಾಕ್-ವೈಖರಿಯಿಂದ, ದ್ವನಿ-ಅರ್ಥ-ರಸ ವಿಲಾಸದಿಂದ, ವಿಶಿಷ್ಟ ರಂಗ ಪ್ರತಿಭೆಯಿಂದ, ಕಾಮನಬಿಲ್ಲಿನಂತೆ ಕಂಗೊಳಿಸಿ,ಇತಿಹಾಸ ಸೃಷ್ಟಿಸಿದವರು. ರಾಮಾಯಣ, ಮಹಾಭಾರತಗಳನ್ನು ತಮ್ಮ ಒಳನೋಟದಿಂದ ನೋಡಿ, ಶ್ರೀರಾಮ ಚರಿತಾಮೃತಂ ಮತ್ತು ಶ್ರೀಮನ್ಮಹಾಭಾರತ ಕಥಾಮೃತಂ ಗ್ರಂಥಗಳನ್ನು ರಚಿಸಿದ್ದಾರೆ. ಒಂದು `ಪಾತ್ರ’ ಹೇಳಲು ಸಾದ್ಯವಾಗದ, ನಿರೂಪಕ ಮಾತ್ರ ಹೇಳಲು ಸಾಧ್ಯವಿರುವ ಸಂಗತಿಗಳನ್ನು ಇದರಲ್ಲಿಕಾಣಬಹುದು.

ಇವರ‌ಇತರಕೃತಿಗಳು :
ಮಹಾಭಾರತದ ಪಾತ್ರಗಳು ತಮ್ಮ ಸ್ವಗತದ ಮಾತುಗಳನ್ನು ಹೇಳುವ `ಕುರುಕ್ಷೇತ್ರಕ್ಕೊಂದು‌ಆಯೋಗ’ ಒಂದು‌ಅಪೂರ್ವ, ಅನನ್ಯಕೃತಿ. ನಮ್ಮೆಲ್ಲರಕನಸು-ಆದರ್ಶವಾದ `ರಾಮರಾಜ್ಯ’ ಸ್ಥಾಪನೆಗೆ ರಾಮನನ್ನು ಸಿದ್ಧಗೊಳಿಸಿದವರು-ಮಹರ್ಷಿ ವಿಶ್ವಾಮಿತ್ರ-ಎನ್ನುವಚಿಂತನೆಯಲ್ಲಿರಚಿತವಾದ `ರಾಮರಾಜ್ಯದರೂವಾರಿ’, ರಾಮರಾಜ್ಯಕ್ಕೆ ಬುನಾದಿ ನಿರ್ಮಿಸಿದಾತ- ಭರತ-ಎನ್ನುವಕಲ್ಪನೆ `ರಾಮರಾಜ್ಯಪೂರ್ವರಂಗ’ದಲ್ಲಿ‌ಇದೆ. ಯಕ್ಷಗಾನ ವಿವೇಚನೆ, ಪ್ರಿಯದರ್ಶನಂ, ವಿಚಾರವಲ್ಲರಿ, ಧರ್ಮದರ್ಶನ‌ಇವರ ಕೃತಿಗಳು. ಭೀಷ್ಮಾರ್ಜುನ, ಸುಭದ್ರಾರ್ಜುನ, ಕೃಷ್ಣಸಂಧಾನ, ಸುಗ್ರೀವ ಸಖ್ಯ- ಅರ್ಥಸಹಿತಯಕ್ಷಗಾನ ಪ್ರಸಂಗಗಳು. ಧರ್ಮದಾಸಿ, ಶೂರ್ಪಖಿಯ ಸ್ವರಾಜ್ಯ – ನಾಟಕಗಳು.

40-50 ರದಶಕದಲ್ಲಿ ಸುಳ್ಯ ತಾಲೂಕಿನಚೊಕ್ಕಾಡಿಯಲ್ಲಿ-ಯಕ್ಷಗಾನ ನಾಟಕತಂಡಕಟ್ಟಿ ಪ್ರದರ್ಶನ ನೀಡಿದ್ದರು. ಆ ಕಾಲದಲ್ಲೇಗ್ಯಾಸ್ ಲೈಟ್‌ನಲ್ಲಿ ಬೆಳಕಿನ ಪರಿಣಾಮದ ಬಗ್ಗೆ ಪ್ರಯೋಗ ನಡೆಸಿದ್ದರು. ದೇರಾಜೆಯವರ ಮಕರಂದ, ಸುದಾಮ, ಚಂದ್ರಾವಳಿ ವಿಲಾಸದ‌ಅತ್ತೆ ಪಾತ್ರಗಳು ಜನಪ್ರಿಯವಾಗಿದ್ದವು. ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಕುವೆಂಪು ಅವರರಕ್ತಾಕ್ಷಿ ನಾಟಕವನ್ನುದೇರಾಜೆಯವರು ನಿರ್ದೇಶಿಸಿದ್ದು ಇದುತುಂಬಾ ಪ್ರಸಿದ್ಧಿ ಪಡೆದಿತ್ತು.

1948 ರಲ್ಲಿ, ಸುಳ್ಯ ತಾಲೂಕಿನಚೊಕ್ಕಾಡಿಯಲ್ಲಿದೇರಾಜೆಯವರು ಶ್ರೀರಾಮ ದೇವಾಲಯವನ್ನು ಕಟ್ಟಿಸಿದ್ದರು. ಶ್ರೀಯುತರು ಗ್ರಾಮದ ಪಠೇಲರಾಗಿದ್ದು‌ಉತ್ತಮ ಸಂಘಟಕರಾಗಿದ್ದರು. ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಸಹಕಾರಿಕ್ಷೇತ್ರದಲ್ಲೂ ಸಾಧನೆ ಮಾಡಿದವರು, `ಉತ್ತಮ ಬತ್ತದ ಕೃಷಿ’ಗೆ ಪುರಸ್ಕಾರವನ್ನು ಪಡೆದವರು. ಸರಳ, ನೇರ ವ್ಯಕ್ತಿತ್ವ, ಸಾತ್ವಿಕ ಸ್ವಭಾವ, ಪ್ರಾಮಾಣಿಕ ಹೃದಯವಂತ. ನಿತ್ಯಜೀವನದಲ್ಲೂ ಸರಸ ಮಾತುಗಾರ. ನಡೆ-ನುಡಿ ಒಂದಾಗಿಸಿ, ಜೀವನದರ್ಶನವನ್ನು ಪಡೆದ ಮಹಾನುಭಾವದೇರಾಜೆಯವರು.

Write A Comment