ಅಂತರಾಷ್ಟ್ರೀಯ

ಪದ್ಮಶಾಲಿ ಸಮುದಾಯದಿಂದ 5 ನೇ ವಾರ್ಷೀಕೋತ್ಸವದ ಆಚರಣೆ ಮತ್ತು “ಪದ್ಮಸಂಗಮ” ಸ್ಮರಣ ಸಂಚಿಕೆಯ ಬಿಡುಗಡೆ.

Pinterest LinkedIn Tumblr

Dubai_Padmashali_Pics_1

ದುಬಾಯಿ : ಯು.ಎ.ಇ ಯಲ್ಲಿ ಕ್ರೀಯಾಶೀಲವಾಗಿರುವ ಪದ್ಮಶಾಲಿ ಸಮುದಾಯವು ತನ್ನ 5 ನೇ ವಾರ್ಷಿಕೋತ್ಸವದ ಆಚರಣೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆಯ ಸಮಾರಂಭವನ್ನು 10.10.2014ರಂದು ದುಬಾಯಿಯ ಇಂಡಿಯಾ ಕ್ಲಬ್ ನ ಸಂಭಾಗಣದಲ್ಲಿ ಆಯೋಜಿಸೈತ್ತು. ನಾಡಿನಿಂದ ಆಗಮಿಸಿದ ಹಲವು ಪದ್ಮಶಾಲಿ ಬಂಧುಗಳ ಉಪಸ್ಥಿತಿಯಲ್ಲಿ ನಡೆದ ಸಭಾಕಾರ್ಯಕ್ರಮ ಪದ್ಮಸಂಗಮ ಸ್ಮರಣ ಸಂಚಿಕೆಯ ಬಿಡುಗಡೆ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ಮೂಡಿಬಂತು.

ಆರಂಭದಲ್ಲಿ ಸಭಾಕಾರ್ಯಕ್ರಮ ಜರಗಿದ್ದು ಶ್ರೀ ಸಿ ಪ್ರಭಾಕರ್ ಶೆಟ್ಟಿಗಾರ್ ಸಭಾಧ್ಯಕ್ಷರಾಗಿ ಶ್ರೀನಿವಾಸ್ ಶೆಟ್ಟಿಗಾರ್ ಶ್ರೀಮತಿ ಲಲಿತಾವತಿ ಮತ್ತು ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಶಾಲಿ ಮಕ್ಕಳಿಂದ ಪ್ರಾರ್ಥನೆಯಾದ ಬಳಿಕ ವೇದಿಕೆಯ ಗಣ್ಯರನ್ನು ಅತಿಥಿಗಳನ್ನು ಮತ್ತು ನೆರೆದವರೆಲ್ಲರನ್ನು ಪದ್ಮಶಾಲಿ ಸಮುದಾಯದ ಕಾರ್ಯದರ್ಶಿ ಸಚ್ಚಿಂದ್ರ ನಾಥ್ ಸ್ವಾಗತಿಸಿದರು.

ಸಭಾಧ್ಯಕ್ಷರಿಂದ ಜ್ಯೋತಿಬೆಳಗಿದ ನಂತರ ಪದ್ಮಶಾಲಿ ಸಮುದಾಯದ ಅಧ್ಯಕ್ಷರಾದ ರವಿ ಶೆಟ್ಟಿಗಾರ್, ಕಾರ್ಕಳ ಇವರು ಪ್ರಾಸ್ತಾವಿಕ ಭಾಷಣ ಮಾಡಿ, ಪದ್ಮಾಶಾಲಿ ಸಮುದಾಯವು ಐದು ವರ್ಷಗಳಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರಗಳನ್ನು ಸಭೆಯ ಮುಂದಿಟ್ಟರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮತ್ತು ಕಿನಿಮೂಲ್ಕಿ ಶ್ರೀವೀರ ಭದ್ರ ದೇವಸ್ಥಾನದ ಆಡಳಿತ ಮೊಕ್ತೇಸ್ತರರಾದ ಪ್ರಭಾಶಂಕರ್ ಶುಭಶಂಸನೆಗೈದು. ಪದ್ಮಶಾಲಿ ಸಮಾಜದ ಆಚಾರ ವಿಚಾರಗಳಲ್ಲಿ ಮಾರ್ಪಡು ಮತ್ತು ಶ್ರೇಯಸ್ಸುನ್ನು ಕಾಣಬೇಕಾಗಿದೆ ಎಂದರು.

ಸಮುದಾಯದ ಕೋಶಾಧಿಕಾರಿ ರಘುರಾಮ್ ಲೆಕ್ಕ ಪತ್ರದ ಸೂಕ್ಷ್ಮ ಪರಿಚಯ ನೀಡಿ ತಮ್ಮ ಸಮಾಜದ ಬಡ ವಿಧ್ಯಾರ್ಥಿಗಳ ಶಿಕ್ಷಣ ವೇತನಕ್ಕೆ ಸಹಕರಿಸುವಂತೆ ಸರ್ವರನ್ನು ಕೇಳಿಕೊಂಡರು. ಸ್ಮರಣ ಸಂಚಿಕೆಯ ಬಿಡುಗಡೆ ಮತ್ತು ವಾರ್ಷೀಕೊತ್ಸವದ ಯಶಸ್ಸಿಗೆ ಶುಭಕೋರ್‍ಇ ಬಂದ ಪತ್ರಗಳನ್ನು , ಸಂದೇಶಗಳನ್ನು ಕ್ರೀರ್ತಿಕುಮಾರ್ ವಾಚಿಸಿದರು.

ಮುಖ್ಯ ಅಭ್ಯಾಗತರಾಗಿದ್ದ ಶ್ರೀಮತಿ ಲಲಿತಾವತಿ ಶೆಟ್ಟಿಗಾರ್ ಮಾತನಾಡಿ, ಪದ್ಮಶಾಲಿ ಸಮುದಾಯದ ಪ್ರತಿಯೊಂದು ಕಾರ್ಯ ಚಟುವಟಿಕೆಯೂ ಮಾದರಿಯಾಗಿದೆ ಎಂದು ತಮ್ಮ ಮನ ದಾಳದಿಂದ ಪ್ರಶಂಸಿಸಿದರು.

ಪ್ರದಾನ ಸಂಪಾದಕರಾದ ಶುಭಾಕರ್ ರವರು ಪದ್ಮಸಂಗಮ ಸ್ಮರಣ ಸಂಚಿಕೆಯಲ್ಲಿ ಅಡಕವಾಗಿರುವ ವಿಷಯಗಳು ಸ್ಮರಣ ಸಂಚಿಕೆ ಹೊರತರುವ ಉದ್ದೇಶ ಮತ್ತು ಆವೃತ್ತಿಯು ಪೂರ್ಣಗೊಂಡ ಬಗೆಗಿನ ಪೂರ್ಣ ಮಾಹಿತಿಯನ್ನು ಸಭೆಯಲ್ಲಿ ಮುಂದಿಟ್ಟರು.

ತದನಂತರ ಮಂಗಳೂರಿನ ಅವಿನಾಶ್ ಸಂಸ್ಥೆಯ ಮಾಲಕರು ಮತ್ತು ಅವಿಭಜಿತ ದ.ಕ ಜಿಲ್ಲಾ ಪದ್ಮಾಶಾಲಿ ಮಹಾಸಭಾದ ಸಕ್ರೀಯ ನಾಯಕರಾದ ಶ್ರೀನಿವಾಸ್ ಶೆಟ್ಟಿಗಾರ್ ಪದ್ಮಸಂಗಮ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ವಿವಿಧ ಪದ್ಮಾಶಾಲಿ ಸಂಘಟನೆಗಳು, ವಿಧ್ಯಾವರ್ಧಕ ಸಂಘಗಳು ಬೆಳೆದು ಬಂದದಾರಿ ಮತ್ತು ಅವುಗಳ ಕಾರ್ಯವೈಖರಿಗಳನ್ನು ಪರಿಚಯಿಸಿದರು ಅಂತೆಯೇ ಇನ್ನು ಮುಂದಿನ ಯೋಜನೆಗಳ ವಿಚಾರ – ವಿಮರ್ಶೆಗಳನ್ನು ಮಂಡಿಸಿದರು ಇದೇ ಸಂದರ್ಭದಲ್ಲಿ ಬಹಳ ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಮೂಡಿಬಂದ ಪದ್ಮಸಂಗಮ ಸ್ಮರಣ ಸಂಚಿಕೆಯ ಪ್ರದಾನ ಸಂಪಾದಕರಾದ ಶುಭಕರ್ ಮತ್ತು ಸಂಪಾದಕಿ ಶ್ರೀಮತಿ ಅರುಂಧತಿಯವರನ್ನು ಆದರದಿಂದ ಸನ್ಮಾನಿಸಲಾಯಿತು.

Dubai_Padmashali_Pics_2 Dubai_Padmashali_Pics_3 Dubai_Padmashali_Pics_4 Dubai_Padmashali_Pics_5 Dubai_Padmashali_Pics_6 Dubai_Padmashali_Pics_7 Dubai_Padmashali_Pics_9 Dubai_Padmashali_Pics_11 Dubai_Padmashali_Pics_12 Dubai_Padmashali_Pics_13 Dubai_Padmashali_Pics_14 Dubai_Padmashali_Pics_15 Dubai_Padmashali_Pics_16 Dubai_Padmashali_Pics_17 Dubai_Padmashali_Pics_18 Dubai_Padmashali_Pics_19 Dubai_Padmashali_Pics_20 Dubai_Padmashali_Pics_21 Dubai_Padmashali_Pics_22 Dubai_Padmashali_Pics_23 Dubai_Padmashali_Pics_24 Dubai_Padmashali_Pics_25 Dubai_Padmashali_Pics_26 Dubai_Padmashali_Pics_27 Dubai_Padmashali_Pics_28 Dubai_Padmashali_Pics_29 Dubai_Padmashali_Pics_30 Dubai_Padmashali_Pics_31 Dubai_Padmashali_Pics_32 Dubai_Padmashali_Pics_33 Dubai_Padmashali_Pics_34 Dubai_Padmashali_Pics_35 Dubai_Padmashali_Pics_36 Dubai_Padmashali_Pics_37 Dubai_Padmashali_Pics_38 Dubai_Padmashali_Pics_39 Dubai_Padmashali_Pics_40

ಯುಎಇ ಪದ್ಮಶಾಲಿ ಸಮುದಾಯದ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರನ್ನು ಶಾಲುಹೊದಿಸಿ, ಸ್ಮರಣೆಕೆಗಳನ್ನಿತ್ತು ಅಭಿನಂದಿಸಲಾಯಿತು. ಅವಿಭಜಿತ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ, ವಿಧ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷರಾದ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ಸಿ.ಪ್ರಭಾಕರ್ ರವರು ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿ ಸಮಾಜದ ಉನ್ನತಿಗೆ ಶಿಕ್ಷಣವೇ ಮೂಲ ಎಂದರು. ನಮ್ಮ ಸಮಾಜದ ಸಂಸ್ಕೃತಿಯ ಪುನರುದ್ಧಾನಕ್ಕೆ ಪ್ರತಿಸ್ಪಂದಿಸುವಂತೆ ಸರ್ವರಲ್ಲಿ ವಿನಂತಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರುವುದಕ್ಕೆ ಹರ್ಷವನ್ನು ವ್ಯಕ್ತ ಪಡಿಸಿದರು.

ಪದ್ಮಸಂಗಮ ಸ್ಮರಣ ಸಂಚಿಕೆಯ ಬಿಡುಗಡೆಯ ಯಶಸ್ವಿಗೆ ಜಾಹಿರಾತು ನೀಡಿ ಪ್ರೋತ್ಸಾಹಿಸಿದವರಿಗೆ ಯುಎಇಯಲ್ಲಿ ಕಾರ್ಯೋನ್ಮಖವಾಗಿರುವ ಇತರ ಸಮುದಾಯದ ಮತ್ತು ಸಂಘಟನೆಗಳ ಗಣ್ಯರಿಗೆ, ಪ್ರಚಾರ ಮಾಧ್ಯಮದವರಿಗೆ ಮತ್ತು ಪದ್ಮಶಾಲಿ ಸಮುದಾಯವನ್ನು ಕಟ್ಟಿ ಬೆಳೆಸಲು ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಲ್ಲಿ ಗಣ್ಯರಿಗೆ ಸಭಿಕರಿಗೆ ಮತ್ತು ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಸಮುದಾಯದ ಇನ್ನೊರ್ವ ಕಾರ್ಯದರ್ಶಿ ಶ್ರೀಮತಿ ಅರುಂಧತಿಯವರು ಸಮರ್ಪಿಸಿದರು.

Dubai_Padmashali_Pics_81 Dubai_Padmashali_Pics_82 Dubai_Padmashali_Pics_83

ಮನೋರಂಜನಾ ಕಾರ್ಯಕ್ರಮಗಳು.

ಸುಮಾರು ಮೂರುಗಂಟೆಗಳ ಕಾಲ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರೆದ ಸಭಿಕರು ಬಹಳ ಆಸಕ್ತಿಯಿಂದ ಮತ್ತು ಸಂತೋಷದಿಂದ ವೀಕ್ಷಿಸಿದರು.

ಸಣ್ಣ ಸಣ್ಣ ಮುದ್ದು ಮಕ್ಕಳಿಂದ ಹಿಡಿದು ಹಿರಿಯರೂ ಕೂಡ ಪಾಲ್ಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ಸಂಸ್ಕೃತಿಯ ನಾನಾ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ, ಜಾನಪದ ಶೈಲಿಯ ನೃತ್ಯಗಳು ಮತ್ತು ಭಾವಗೀತೆಗಳು ಸಭಿಕರ ಗಮನ ಸೆಳೆದವು. ವಿವಿಧ ಚಲನ ಚಿತ್ರ ಹಾಡುಗಳ ಮಿಶ್ರಿತ ನೃತ್ಯಗಳು. ಮಧುರಗಾಯನಗಳು ಮತ್ತು ದೇಶಭಕ್ತಿ ಹಾಡುಗಳ ನೃತ್ಯಗಳು ನೆರೆದವರನ್ನು ರಂಜಿಸಿದವು.

Dubai_Padmashali_Pics_41 Dubai_Padmashali_Pics_42 Dubai_Padmashali_Pics_43 Dubai_Padmashali_Pics_44 Dubai_Padmashali_Pics_45 Dubai_Padmashali_Pics_48 Dubai_Padmashali_Pics_49 Dubai_Padmashali_Pics_50 Dubai_Padmashali_Pics_51 Dubai_Padmashali_Pics_52 Dubai_Padmashali_Pics_53 Dubai_Padmashali_Pics_54 Dubai_Padmashali_Pics_55 Dubai_Padmashali_Pics_56 Dubai_Padmashali_Pics_57 Dubai_Padmashali_Pics_58 Dubai_Padmashali_Pics_60 Dubai_Padmashali_Pics_62 Dubai_Padmashali_Pics_63 Dubai_Padmashali_Pics_64 Dubai_Padmashali_Pics_65 Dubai_Padmashali_Pics_67 Dubai_Padmashali_Pics_68 Dubai_Padmashali_Pics_70 Dubai_Padmashali_Pics_71 Dubai_Padmashali_Pics_72 Dubai_Padmashali_Pics_73 Dubai_Padmashali_Pics_74 Dubai_Padmashali_Pics_77 Dubai_Padmashali_Pics_78 Dubai_Padmashali_Pics_79 Dubai_Padmashali_Pics_80

ಮನೋರಂಜನ ಕಾರ್ಯಕ್ರಮದ ಮಧ್ಯ ಮಧ್ಯದಲ್ಲಿ ಚುಟುಕು ಪ್ರಶ್ನೆಗಳಿಗೆ ಬಹುಮಾನವನ್ನೂ ಕೂಡ ಗಿಟ್ಟಿಸಿಕೊಳ್ಳುವ ಸುಯೋಗ ಸಭಿಕರಿಗಿತ್ತು. ಕೊನೆಯದಾಗಿ ಪ್ರಸ್ತುತ ಪಡಿಸಿದ ಭಸ್ಮಾಸುರ ಮೋಹಿನಿ ನೃತ್ಯ ರೂಪಕ ವಿಶೇಷ ಆಕರ್ಷಣೆಯಾಗಿ ಮೂಡಿ ಬಂತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾ ವಿಧರನ್ನು ವಿಶೇಷವಾಗಿ ಅಭಿನಂದಿಸಿ, ಸ್ಮರಣೆಕೆಗಳಮ್ಮಿತ್ತು ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಅದೃಷ್ಟ ಚೀಟಿಯ ಮೂಲಕ ದಿನದ ಅದೃಷ್ಟ ವ್ಯಕ್ತಿಯನ್ನು ಆರಿಸಿದ ಬಳಿಕ ರಾಷ್ಟ್ರಗೀತೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.

ಈ ಸಮಾರಂಭದ ಸಭಾ ಕಾರ್ಯಕ್ರಮ ಮತ್ತು ಸಾಂಕೃತಿಕ ಕಾರ್ಯಕ್ರಮವನ್ನು ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಧೃತಿ, ಶ್ರೀ ಅರವಿಂದ್ ಶೆಟ್ಟಿಗಾರ್ ಮತ್ತು ಡಾ.ಪದ್ಮನಾಭ್ ಶೆಟ್ಟಿಗಾರ್ ಜಂಟಿಯಾಗಿ ಸಂಯೋಜಿಸಿದರು.

Write A Comment