ಕರಾವಳಿ

ರಿಕ್ಕಿ ಸಿನೆಮಾದ ಕ್ಲೈಮಾಕ್ಸ್ ಸಖತ್ ಸೆನ್ಸಿಟಿವ್; ಮೋಡಿ ಮಾಡಲು ಹೊರಟಿದ್ದಾರೆ ರಿಶಬ್ ಹಾಗೂ ರಕ್ಷಿತ್ ಶೆಟ್ಟಿ…

Pinterest LinkedIn Tumblr

ಉಡುಪಿ: ಕರಾವಳಿಯಲ್ಲಿ ರಿಕ್ಕಿ ಸಿನೆಮಾದ ಹವಾ ಧಗಧಗ ಬೀಸ್ತಿದೆ. ಬಿಸಿಲಿನಲ್ಲಿ ಸಿನೆಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಲಾಗ್ತಿದೆ. ೧೦ ಲಕ್ಷ ರೂ ವೆಚ್ಚದ ಮನೆಯೊಂದನ್ನು ದ್ವಂಸಗೊಳಿಸುವ ಚಿತ್ರೀಕರಣ ಭಾನುವಾರದ ಹೈಲೈಟ್ ಸಟೋರಿಯಾಗಿತ್ತು.

ಎಸ್ .ವಿ. ಬಾಬು ನಿರ್ಮಾಣದ, ರಿಶಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ-ಹರಿಪ್ರಿಯಾ ನಟನೆಯ ಬಹು ನಿರೀಕ್ಷಯ ರಿಕ್ಕಿ ಸಿನೆಮಾ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗುತ್ತಿದೆ. ಕರಾವಳಿಯ ಜ್ವಲಂತ ಸಮಸ್ಯೆಗಳಾದ ನಕ್ಸಲಿಸಂ ಮತ್ತು ಎಸ್.ಇ.ಝಡ್ ಸಮಸ್ಯೆಯ ಜೊತೆಗೇ ಸುಂದರ ಲವ್ ಸ್ಟೋರಿಯೊಂದಿಗೆ ವಿಭಿನ್ನವಾಗಿ ನಿರ್ಮಾಣಗೊಳುತ್ತಿದೆ ರಿಕ್ಕಿ ಸಿನೆಮಾ.

Rikki Film (1) Rikki Film Rikki Film (2)

ರಕ್ಷಿತ್ ಶೆಟ್ಟಿ ಮತ್ತೆ ಮೋಡಿ ಮಾಡಲು ಹೊರಟಿದ್ದಾರೆ, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಖ್ಯಾತಿಯ ರಕ್ಷಿತ್ ಶೆಟ್ಟಿ ಇದೀಗ ರಿಕ್ಕಿ ಸಿನೆಮಾದ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ಇನ್ನೊಮ್ಮೆ ಮ್ಯಾಜಿಕ್ ಮಾಡಲು ಹೊರಟಿದ್ದಾರೆ. ಈ ಬಾರಿ ನಿರ್ದೇಶಕ ರಿಷಭ್ ಶೆಟ್ಟಿ ವಿಭಿನ್ನ ಕಥೆಯ ಮೂಲಕ ಹೊರಹೊಮ್ಮಲಿದ್ದಾರೆ. ಸಿನೆಮಾಕ್ಕಾಗಿ ಕರಾವಳಿಯಲ್ಲಿ ಚಿತ್ರೀಕರಣ ನಿರತರಾಗಿರುವ ತಂಡ ನಿನ್ನೆ ಉಡುಪಿಯ ಕಾರ್ಕಳದ ಕರ್ವಾಲು ಸಮೀಪ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಿತು.ರಕ್ಷಿತ್ ಶೆಟ್ಟಿ ಹಿರಿಪ್ರಿಯಾ ಜೋಡಿ ಈ ಸಿನೆಮಾದಲ್ಲಿದ್ದಾರೆ.ಎಸ್ ,ವಿ,ಬಾಬು ಅವರ ೧೨ ನೇ ಸಿನೆಮಾ ಇದಾಗಿದ್ದು ,ಈ ಚಿತ್ರದ ವಿಭಿನ್ನ ಕಥೆ ಪ್ರಾರಂಭದಲ್ಲೇ ಭರವಸೆ ಹುಟ್ಟಿಸಿದೆ.ಕಥೆಯ ಪ್ರಮುಖ ತಿರುವು ನಕ್ಸಲ್ ಪೀಡಿತ ಭಾಗಗಳಲ್ಲಿ ನಡೆಯಲಿದ್ದು ,ನಿನ್ನೆ ಕಥಾ ನಾಯಕಿಯ ಮನೆಯೊಂದನ್ನು ಜೆಸಿಬಿ ಮೂಲಕ ಕೆಡವುವ ಸೆನ್ಸಿಟಿವ್ ಚಿತ್ರೀಕರಣ ಪೂರ್ಣಗೊಂಡಿತು.ಇದೊಂದು ಪ್ರೇಮ ಕಥೆ ಎನ್ನುವ ನಾಯಕ ರಕ್ಷಿತ್ ಶೆಟ್ಟಿ ಸಿನೆಮಾದ ಹೂರಣ ಬಿಟ್ಟುಕೊಡಲಿಲ್ಲ.

ಕರಾವಳಿ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ, ಎಸ್ ಇ .ಝಡ್ ಗಾಗಿ ಭೂಸ್ವಾಧೀನ ಆದಾಗ ತಲೆದೋರಿದ ಸಮಸ್ಯೆಗಳು ಈ ಚಿತ್ರದ ಹೈಲೈಟ್, ಇದರ ಜೊತೆಗೇ ಹಳ್ಳಿಯ ಮುಗ್ಧ ಹುಡುಗ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಇವರಿಬ್ಬರ ಪ್ರೇಮವೂ ಸಾಗುತ್ತದೆ. ಜ್ವಲಂತ ಸಮಸ್ಯೆಗಳ ನಡುವೆಯೇ ನಾಯಕ ನಾಯಕಿಯ ಪ್ರೇಮಗಳಲ್ಲಿ ಎದುರಾಗುವ ಅಡೆತಡೆಗಳನ್ನು ನಿರ್ದೇಶಕ
ರಿಶಭ್ ವಿಭಿನ್ನ ರೀತಿಯಲ್ಲಿ ಶೂಟ್ ಮಾಡುತ್ತಿದ್ದಾರೆ. ಕರಾವಳಿಯ ಬಿರುಬಿಸಿಲು ನಾಯಕಿ ಹರಿಪ್ರಿಯಾ ಅವರನ್ನು ಹೈರಾಣಾಗಿಸಿದ್ದು ಸುಳ್ಳಲ್ಲ. ಈ ಕಥೆಗೆ ಅಪ್ಪಟ ಕರಾವಳಿಯ ವಾತಾವರಣ ಬೇಕಿರುವುರಿಂದ ಮತ್ತು ವಿಭಿನ್ನ ಪಾತ್ರ ದೊರೆತಿರುವುದರಿಂದ ಹರಿಪ್ರಿಯಾ ಲವಲವಿಕೆಯಿಂದಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.
ಸಿನೆಮಕ್ಕಾಗಿ ಈಗಾಗಲೇ ಕಾರ್ಕಳದ ನಕ್ಸಲ್ ಪೀಡಿತ ಗ್ರಾಮಗಳಾದ ಈದು, ಹೆಬ್ರಿ ಬೈಲೂರು ಮತ್ತು ಶೃಂಗೇರಿಯ ಕಾಡುಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಭಾಗದಲ್ಲಿ ನಡೆದ ಒಂದು ನೈಜ ಘಟನೆಯ ಎಳೆಯನ್ನು ಆಧರಿಸಿ ಅದಕ್ಕೆ ಸುಂದರ ಪ್ರೇಮದ ಕಥೆಯೊಂದನ್ನು ಹೆಣೆದು ಚಿತ್ರ ನಿರ್ಮಿಸಲಾಗುತ್ತದೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್ -ಜನವರಿ ಹೊತ್ತಿಗೆ ಸೆಟ್ಟೇರುವ ಸಾಧ್ಯತೆ ಇದೆ.

Write A Comment