ಕರಾವಳಿ

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಲ್ಲಿ ಕರಾವಳಿ ಬೆಡಗಿ ಅನ್ವಿತಾ ರಾವ್…

Pinterest LinkedIn Tumblr

anvitha_pyatehudugi_hallilaife_1

ಮಂಗಳೂರು ,ಅ.08 : ಈಗಾಗಲೇ ಪ್ರಾರಂಭವಾಗಿರುವ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್-3 ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕರಾವಳಿಯ ಬೆಡಗಿಯೊಬ್ಬಳು ಭಾಗವಹಿಸುತ್ತಿದ್ದಾಳೆ.

ಮಂಗಳೂರಿನ ಅನ್ವಿತಾ ರಾವ್ (22) ಅವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್-3 ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಹತ್ತು ಮಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದು ಎಲ್ಲರ ಗಮನ ಸೆಳೆಯಲಿದ್ದಾರೆ. ಈ ಕರಾವಳಿ ಬೆಡಗಿ ಅನ್ವಿತಾ ರಾವ್ ಅವರ ಕಿರು ಪರಿಚಯ ಇಲ್ಲಿದೆ.

anvitha_pyatehudugi_hallilaife_3

ನಗರದ ಕುಳಾಯಿಯ ನಾಗೇಂದ್ರ ರಾವ್ ಹಾಗೂ ಅರುಣಾ ರಾವ್ ದಂಪತಿ ಪುತ್ರಿಯಾಗಿರುವ ಅನ್ವಿತಾ ರಾವ್ ಅವರು 1992, ಮೇ 25 ರಂದು ಜನಿಸಿದರು. ಎಳೆಯ ವಯಸ್ಸಿನಲ್ಲಿಯೇ ನಟನೆಯ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ ಅನ್ವಿತಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

anvitha_pyatehudugi_hallila

ಅನ್ವಿತಾ ರಾವ್ ಅವರು ತಮ್ಮ ಪ್ರಾರಂಭದ ಶಾಲಾ ದಿನಗಳನ್ನು ಸುರತ್ಕಲ್ ವಿದ್ಯಾದಾಯಿನಿ ಶಾಲೆಯಲ್ಲಿ ಮುಗಿಸಿದ್ದರು. ನಂತರ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ ಅನ್ವಿತಾ ರಾವ್ ಅವರು ಪತ್ರಿಕೋದ್ಯಮ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ.

anvitha_pyatehudugi_hallilaife_4

ಇತ್ತಿಚೇಗೆ ನಡೆದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅನ್ವಿತಾ ರಾವ್ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ್ದಾರೆ. ನಟನೆಯಲ್ಲಿ ಅಪೂರ್ವ ಆಸಕ್ತಿಯಿರುವ ಅನ್ವಿತಾರಿಗೆ ಮನೆಯವರ ಸಂಪೂರ್ಣ ಬೆಂಬಲವೂ ಸಾಧನೆ ಮಾಡಲು ಸಹಕಾರಿಯಾಗಿದೆ. ಇದೀಗ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫ್ ಸೀಸನ್-3ಗೆ ಆಯ್ಕೆಯಾಗಿರುವ ಅನ್ವಿತಾ ರಾವ್ ಅವರು ಉತ್ತಮವಾಗಿ ಸ್ವರ್ಧಿಸಿ ಕನ್ನಡ ನಾಡಿನ ಜನರ ಮನಸ್ಸನ್ನು ಗೆಲ್ಲಲಿ ಎಂದು ಹಾರೈಸೋಣ…

ವರದಿ ಕೃಪೆ : ರವಿರಾಜ್ ಕಟೀಲು

Write A Comment