ಉಡುಪಿ: ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ಪ್ರಥಮ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ನ.19ರಿಂದ ಫೆ.21ರವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಬಳ ಸ್ಪರ್ಧೆಗಳು ನಡೆಯಲಿವೆ.

(ಸಂಗ್ರಹ ಚಿತ್ರ)
ವೇಳಾಪಟ್ಟಿಯಂತೆ ಪ್ರಥಮವಾಗಿ ನ.19ರಂದು (ಇಂದು) ನಾವುಂದ, ನ.21ರಂದು ಹಕ್ರೆಮಠ, ನ.22ರಂದು ಕೆರಗದ್ದೆ ಹಾಗೂ ಉಳ್ಳೂರು, ನ.26ರಂದು ಮಣೂರು ಮತ್ತು ಯಡ್ತಾಡಿ, ನ.27ರಂದು ಬಾರ್ಕೂರು, ಬಿಲ್ಲಾಡಿ ಹಾಗೂ ಅಲ್ಬಾಡಿ, ನ.28ರಂದು ಕೆರ್ಗಾಲ್ ಹಾಗೂ ತೋನ್ಸೆ, ನ.29ರಂದು ಬನ್ನಾಡಿ, ಇಡೂರು-ಕುಂಜ್ಞಾಡಿ, ಎಲ್ಲೂರು ಹಾಗೂ ಕೆಂಜೂರು, ನ.30ರಂದು ಕೆಂಚನೂರು ಹಾಗೂ ಹೆಗ್ಗುಂಜೆಗಳಲ್ಲಿ ಕಂಬಳ ನಡೆಯಲಿದೆ.
ಡಿ.1ರಂದು ಚೇರ್ಕಾಡಿ, ಡಿ.2ರಂದು ತಲ್ಲೂರು-ಮೂಡ್ಲಕಟ್ಟೆ, ಡಿ.3ರಂದು ಗುಲ್ವಾಡಿ, ವಂಡಾರು ಡಿ.4ರಂದು ಕೆರಾಡಿ ಹಾಗೂ ಕಡ್ರಿ, ಡಿ.5ರಂದು ಶಿರೂರು-ಮುದ್ದುಮನೆ ಹಾಗೂ ಮಂಡಾಡಿ , ಡಿ.6ರಂದು ತಗ್ಗರ್ಸೆ ಹಾಗೂ ಹೊಸೂರು, ಡಿ.7ರಂದು ಹಂದಾಡಿ, ಡಿ.8ರಂದು ತೊನ್ನಾಸೆ, ಡಿ.9ರಂದು ಕುಚ್ಚೂರು, ಡಿ.11ರಂದು ಆತ್ರಾಡಿ, ಡಿ.12ರಂದು ಮೊಳಹಳ್ಳಿ, ಕೊರ್ಗಿ ಹಾಗೂ ಹೊರ್ಲಾಳಿ, ಡಿ.13ರಂದು ಹೆರಂಜೆ, ವಡ್ಡಂಬೆಟ್ಟು ಹಾಗೂ ನಡೂರಿನಲ್ಲಿ, ಫೆ.21ರಂದು ಬೈಂದೂರಿನಲ್ಲಿ ಕಂಬಳ ನಡೆಯಲಿದೆ. ಮಿಕ್ಕುಳಿದ ಕಂಬಳಗಳ ದಿನಾಂಕ ಶೀಘ್ರವಾಗಿ ಬಿಡುಗಡೆಯಾಗಲಿದೆ ಎಂದು ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ಸುಧಾಕರ ಹೆಗ್ಡೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.