ಕರಾವಳಿ

ಕದ್ದ ದನ ಆಕ್ರಮ ಸಾಗಾಟ : ಒರ್ವ ಪೊಲೀಸ್ ವಶ : ಮೂವರು ಪರಾರಿ

Pinterest LinkedIn Tumblr

cattale_raid_one-arest_1a

ಬಂಟ್ವಾಳ: ಕಟ್ಟಿ ಹಾಕಿದ್ದ ದನವನ್ನು ಕಳವುಗೈದು ಕಸಾಯಿ ಕಾನೆಗೆ ಅಕ್ರಮವಾಗಿ ಪಿಕಪ್ ನಲ್ಲಿ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳದ ತುಂಬೆ ಜಂಕ್ಷನ್ ನಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಗುರುವಾರ ತಡರಾತ್ರಿ ಪತ್ತೆ ಹಚ್ಚಿ ಬಂಟ್ವಾಳ ನಗರ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದ್ದು ಈ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದರೆ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೇ ವೇಳೆ ಬಂಧಿತ ಆರೋಪಿ ಧರ್ಮನಿಂದನೆ ಗೈದಿದ್ದಾರೆಂಬ ಆರೋಪದಲ್ಲಿ ಹಿಂದೂಪರ ಸಂಘಡನೆಯು ಮೂವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾನೆ.

cattale_raid_one arest_2

ಬಂಧಿತನನ್ನು ಪಿಕಪ್ ಚಾಲಕ ಐವನ್ ಡಿ ಸೋಜ ಎಂದು ಹೆಸರಿಸಲಾಗಿದ್ದು ತಸ್ಲಿಂ,ಬಶೀರ್,ಅಶೋಕ ಎಂಬವರು ಪರಾರಿಯಾದ ಆರೋಪಿಗಳಾಗಿದ್ದಾರೆಂದು ತಿಳಿದು ಬಂದಿದೆ.ವಗ್ಗದಿಂದ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗಿದ್ದು ಈ ಬಗ್ಗೆ ಮಾಹಿತಿ ಪಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ತುಂಬೆ ಜಂಕ್ಷನ್ ನಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ೨ದನ ಹಾಗೂ ಮೂರು ಕರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದೆ.

cattale_raid_one-arest_4a cattale_raid_one-arest_3a

ಈ ಸಂದರ್ಭದಲ್ಲಿ ಚಾಲಕನನ್ನು ವಾಹನದಲ್ಲೇ ಬಿಟ್ಟು ಸ್ಥಳದಿಂದ ಇತರ ಮೂವರು ಪರಾರಿಯಾಗಿದ್ದಾರೆ. ಈ ದನಗಳನ್ನು ವಗ್ಗದಿಂದ ಕಳವುಗೈದು ಮಂಗಳೂರಿನ ಕಸಾಯಿಕಾನೆಗೆ ಸಾಗಿಸುತ್ತಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.ಇದೇವೇಳೆ ಈ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಅಕ್ರಮ ಜಾನುವಾರು ಸಾಗಾಟಗಾರರ ಪೈಕಿ ಇದ್ದ ಬೈಕೊಂದನ್ನು ಕೂಡಾ ಪಿಕಪ್,ಜಾನುವಾರಿನೊಂದಿಗೆ ಪೊಲೀಸರು ವಶಪಡಿಸಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Write A Comment