
ಮುಂಬಯಿ : ಮಲಾಡ್ ಪೂರ್ವ ಕುರಾರ್ ವಿಲೇಜ್ ನ ಶ್ರೀ ಶನೀಶ್ವರ ದೇವಸ್ಥಾನದ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಮಹಾಸಭೆಯು ಇತ್ತೀಚೆಗೆ ಜರಗಿದ್ದು ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಸಾಫಲ್ಯ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಎಂ. ಡಿ. ಬಿಲ್ಲವ, ಉಪಾಧ್ಯಕ್ಷರಾಗಿ ನಾರಾಯಣ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಪೇತ್ರಿ ಹಾಗೂ ಕೋಶಾಧಿಕಾರಿಯಾಗಿ ಹರೀಶ್ ಸಾಲಿಯಾನ್ ಅವರನ್ನು ಆಯ್ಕೆಮಾಡಲಾಯಿತು.
ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ನಿತ್ಯಾನಂದ ಎಲ್. ಕೋಟ್ಯಾನ್ ಮತ್ತು ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿಗಳಾಗಿ ದಿನೇಶ್ ಕುಂಬ್ಲೆ, ಶಿವಾನಂದ ದೇವಾಡಿಗ, ಪ್ರಧಾನ ಸಲಹೆಗಾರರಾಗಿ ಶ್ರೀಧರ ಶೆಟ್ಟಿ ಮತ್ತು ಬಿ. ಎನ್. ಚಂದನ್ ಅವರನ್ನು ನೇಮಿಸಲಾಯಿತು.
ಮಹಿಳಾ ವಿಭಾಗದ ಪ್ರಧಾನ ಕಾರ್ಯಕರ್ತೆಯಾಗಿ ಶೀತಲ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಸಮಿತಿಯ ಸದಸ್ಯರುಗಳಾಗಿ ರಾಮಕೃಷ್ಣ ಶೆಟ್ಟಿಯನ್, ಹರೀಶ್ ಕುಂದರ್, ಪ್ರಭಾಕರ್ ಶೆಟ್ಟಿ, ಸದಾನಂದ ನಾಯಕ್, ಸಂತೋಷ್ ರಾವ್, ಶಾಲಿನಿ ಶೆಟ್ಟಿ, ಹಾಗೂ ಉಪಸಮಿತಿಯಲ್ಲಿ ಮಧುಸೂದನ್ ಪಾಲನ್, ಸ್ನೇಹಲತಾ ನಾಯಕ್, ಯಶೋದಾ ಕುಂಬ್ಳೆ, ಗಿರಿಜಾ ಮರಕಲ, ರಾಜಶ್ರೀ ಪೂಜಾರಿ, ಜಯಂತಿ ಸಾಲ್ಯಾನ್ ಅವರನ್ನು ಆಯ್ಕೆಮಾಡಲಾಯಿತು.
ವರದಿ : ಈಶ್ವರ ಎಂ. ಐಲ್